ಬಿಜೆಪಿ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ‍್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ

0

ಪುತ್ತೂರು: ಬಿಜೆಪಿ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ಅವರನ್ನು ನೇಮಕ ಮಾಡಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಡಾ.ಅನಿಲ್ ಥಾಮಸ್ ಅವರು ಘೋಷಣೆ ಮಾಡಿದ್ದಾರೆ.


ಪುತ್ತೂರಿನ ಎಸ್.ಟಿಕಿಲಾ ಎಸ್.ಜೆ ಮತ್ತು ಕುರ್ರತುಲ್ಲೈನ್ ಬಾನು ಅವರ ಮಗ ಮತ್ತು ಪುತ್ತೂರು ಪುರಸಭೆಯ ಉಪಾಧ್ಯಕ್ಷರಾಗಿದ್ದ ದಿ.ಅಬ್ಬು ಮಹಮ್ಮದ್ ಅವರ ಮೊಮ್ಮಗ, ಇವರು ಪ್ರೌಢ ಶಿಕ್ಷಣವನ್ನು ಪುತ್ತೂರಿನಲ್ಲಿ ಮಾಡಿ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ. ವಿದೇಶದಲ್ಲಿ ಆಯಿಲ್ ಕಂಪೆನಿಯಲ್ಲಿ ನಿವೃತ್ತಿ ಹೊಂದಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರನ್ನು ವಿಶ್ವಹಿಂದು ಪರಿಷದ್ ರಾಜ್ಯ ಉಪಾಧ್ಯಕ್ಷ ಯು ಪೂವಪ್ಪ ಅವರ ಆದೇಶದಂತೆ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ಕಳುಹಿಸಿದ್ದರು. ಅಲ್ಲಿ ಅವರಿಗೆ ಬಿ.ಎಸ ಯಡಿಯೂರಪ್ಪರವರು ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದರು. ಪ್ರಸ್ತುತ ಬೆಂಗಳೂರು ದಕ್ಷಿಣ ಜಿಲ್ಲಾ ಬಿ.ಜೆ.ಪಿ. ಘಟಕದ ವ್ಯಾಪ್ತಿಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿರುವ ಅಬ್ದುಲ್ ಮನ್ನನ್ ಟಿ ಎಸ್. ರವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಎ.ಬಿ.ವಿ.ಪಿ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಲ್ಲದೇ, ಇವರು ಮಂಡಲದ ಅಧ್ಯಕ್ಷನಾಗಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿರುತ್ತಾರೆ. ಕಳೆದ 17 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಪಕ್ಷ ನೀಡಿರುವ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಆದುದರಿಂದ ಅಬ್ದುಲ್ ಮನ್ನನ್ ಟಿ ಎಸ್. ರವರಿಗೆ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಘಟಕದಲ್ಲಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿ ಪಕ್ಷದ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ರವರ ನೇತೃತ್ವದಲ್ಲಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here