ಪುತ್ತೂರು:ಕೋರ್ಟ್ ರಸ್ತೆ, ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಸ್ಪೈರೋಮೆಟ್ರಿ ತಪಾಸಣಾ ಶಿಬಿರವು ಜ.13ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.
ಸುಮಾರು 17 ಮಂದಿ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡು ಆಸ್ಪತ್ರೆ ವೈದ್ಯ ಡಾ.ಜೆ.ಸಿ ಆಡಿಗರವರಲ್ಲಿ ಸೂಕ್ತ ಸಲಹೆಯನ್ನು ಪಡೆದುಕೊಂಡರು. ಆಸ್ಪತ್ರೆಯ ಮ್ಯಾನೇಜರ್ ನೋಯೆಲ್ ಡಿ’ಸೋಜ, ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು. ಹೆಚ್ಚಿನ ಮಾಹಿತಿಗೆ 9379442485, 8123276901 ನಂಬರಿಗೆ ಸಂಪರ್ಕಿಸಬಹುದು ಎಂದು
ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.