ಪುತ್ತೂರು: ಇತಿಹಾಸ ಪ್ರಸಿದ್ಧ ಝಿಯಾರತ್ ಕೇಂದ್ರವೂ, ಜಾತಿ ಮತ ಭೇದವಿಲ್ಲದೆ ಸರ್ವಧರ್ಮಿಯರಿಂದಲೂ ಆದರಿಸಲ್ಪಡುವ ಓಲೆಮುಂಡೋವು ಮಖಾಂ ಶರೀಪ್ನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ವಲಿಯುಲ್ಲಾಹಿ ಮಶ್ಹೂರ್ ಹೆಸರಿನಲ್ಲಿ 3 ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಉರೂಸ್ ಸಮಾರಂಭವು ಅಲ್ಹಾಜ್ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಅವರ ನೇತೃತ್ವದಲ್ಲಿ ಫೆ.22 ರಿಂದ ಮಾ.3ರವರೆಗೆ ಓಲೆಮುಂಡೋವು ವಿಲಾಯತ್ ನಗರದ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಉರೂಸ್ ಸ್ವಾಗತ ಸಮಿತಿ ಸದಸ್ಯ
ಖಲಂದರ್ ಶಾಫಿ ಎರಬೈಲ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಅಲ್ಹಾಜ್ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಫೆ.16ರಂದು ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಉರೂಸ್ ಕಾರ್ಯಕ್ರಮದ ಪ್ರಯುಕ್ತ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಗಳು ನಡೆಯಲಿದೆ. ಫೆ.22ರಂದು ಪೇರೋಡ್ ಮುಹಮ್ಮದ್ ಅಝ್ಹರಿ, ಫೆ.23 ರಂದು ಅಬ್ದುಲ್ ರಝಾಕ್ ಅಬ್ರಾರಿ, ಫೆ.24ರಂದು ಶೈಖುನಾ ಮಹಮೂದುಲ್ ಪೈಝಿ ಓಲೆಮುಂಡೋವು ದುವಾ ಆಶೀರ್ವಚನ ಹಾಗೂ ರಫೀಕ್ ಸಅದಿ ದೇಲಂಪಾಡಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಫೆ.25ರಂದು ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನೇತೃತ್ವವನ್ನು ವಲಿಯುದ್ದೀನ್ ಪೈಝಿ ನಡೆಸಿಕೊಡಲಿದ್ದಾರೆ. ಫೆ.26ರಂದು ನೌಫಲ್ ಸಖಾಪಿ ಕಳಸ, ಫೆ.27 ರಂದು ಅನ್ವರ್ ಮುಹಿಯುದ್ದೀನ್ ಧಾರ್ಮಿಕ ಪ್ರವಚನ ನೀಡಲಿದ್ದು, ಅಸ್ಸಯ್ಯದ್ ಬುರ್ಹಾನ್ ತಂಙಳ್ ಅಲ್ ಬುಖಾರಿ ದುವಾ ನೆರವೇರಿಸಲಿದ್ದಾರೆ.
ಫೆ.28ರಂದು ಶಮೀರ್ ದಾರಿಮಿ ಅವರಿಂದ ಪ್ರವಚನ ನಡೆಯಲಿದ್ದು ದುವಾ ನೇತೃತ್ವವನ್ನು ಅಸ್ಸಯ್ಯದ್ ಹಾದಿ ತಂಙಳ್ ವಹಿಸಲಿದ್ದಾರೆ. ಫೆ.29ರಂದು ದುವಾ ನೇತೃತ್ವವನ್ನು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ವಹಿಸಲಿದ್ದು, ಅನ್ವರ್ ಆಲಿ ಹುದವಿ ಧಾರ್ಮಿಕ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ. ಮಾ.1 ರಂದು ಖಲೀಲ್ ಹುದವಿ ಕಾಸರಗೋಡು ಹಾಗೂ ಮಾ.2 ರಂದು ಸಮಸ್ತ ಕೇರಳ ಜಂಇಂಯ್ಯತ್ತುಲ್ ಉಲಮಾದ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ದುವಾ ನೇತೃತ್ವ ವಹಿಸಲಿದ್ದು, ಎ. ಎಂ ನೌಶಾದ್ ಬಾಖವಿ ತಿರುವನಂತಪುರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ.26 ರಂದು ಮಜ್ಲಿಸುನ್ನೂರು ಕಾರ್ಯಕ್ರಮ ನಡೆಯಲಿರುವುದು. ಮಾ.2 ರಂದು ಸಂಜೆ ಗಂಟೆ 4ಕ್ಕೆ ಉರೂಸ್ ಕಮಿಟಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ.
ಸೌಹಾರ್ದ ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ. ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾ.3ರಂದು ಬೆಳಿಗ್ಗೆ 10 ಗಂಟೆಗೆ ಅಸ್ಸಯ್ಯದ್ ಸಯ್ಯದಲವಿ ತಂಞಳ್ ಓಲೆಮುಂಡೋವು ಮತ್ತು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಞಳ್ ಉಪಸ್ಥಿತಿಯಲ್ಲಿ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಖತಮುಲ್ ಖುರ್ಆನ್, ಮೌಲೀದ್ ಮಜ್ಲಿಸ್ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾಗೋಷ್ಟಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್, ಜಮಾಅತ್ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಉರೂಸ್ ಕಮಿಟಿ ಕಾರ್ಯದರ್ಶಿ ಹಂಝ ಎಲಿಯ, ಉಮ್ಮರ್ ಮುಸ್ಲಿಯಾರ್ ಸಾಗು ಉಪಸ್ಥಿತರಿದ್ದರು.