ನಳೀಲು ಬ್ರಹ್ಮಕಲಶೋತ್ಸವದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ

0

ಪುತ್ತೂರು: ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಫೆ.19ರಂದು ಮೂಲಿಕೆ ರಾಮಕೃಷ್ಣಯ್ಯ ವಿರಚಿತ “ಭಕ್ತ ಸುಧನ್ವ” ಎನ್ನುವ ಕಥಾ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕು| ರಚನಾ ಚಿದ್ಗಲ್, ಚೆಂಡೆ- ಮದ್ದಳೆಗಳಲ್ಲಿ ತೆಂಕಬೈಲು ಗೋಪಾಲಕೃಷ್ಣ ಭಟ್, ಲಕ್ಷ್ಮೀಶ ಶಗ್ರಿತ್ತಾಯ, ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶಾಲಿನಿ ಅರುಣ್ ಶೆಟ್ಟಿ -( ಸುಧನ್ವ 1), ಪದ್ಮಾ ಕೆ ಆರ್ ಆಚಾರ್ಯ-(ಸುಧನ್ವ 2), ಶುಭಾ ಪಿ. ಆಚಾರ್ಯ- (ಪ್ರಭಾವತಿ), ಜಯಲಕ್ಷ್ಮಿ ವಿ ಭಟ್ -(ಅರ್ಜುನ) , ಪ್ರೇಮಾ ಕಿಶೋರ್- (ಶ್ರೀ ಕೃಷ್ಣ), ಮಲ್ಲಿಕಾ ಜೆ ರೈ ( ವೃಷಕೇತು) ಪಾತ್ರದಾರಿಗಳಾಗಿ ಅರ್ಥ ವಿವರಣೆಯನ್ನು ನೀಡಿದರು. ದೇವಳದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು. ಸುಧಾಕರ್ ರೈ ಹೊಸಮನೆ, ಪಾಲ್ತಾಡಿಯವರು ಕಾರ್ಯಕ್ರಮವನ್ನು ಪ್ರಾಯೋಜಿಸಿದರು. ದೇವಳದ ಅಧ್ಯಕ್ಷರು ಮತ್ತು ಆಡಳಿತ ಮೊಕ್ತೇಸರರಾದ ಸಂತೋಷ್ ರೈ ನಳೀಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here