ಪುತ್ತೂರು: ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ತಂಡದವರಿಂದ ಫೆ.18 ರಂದು “ಶಿವಭಕ್ತ ವೀರಮಣಿ”, ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ, ಕು|ಸಿಂಚನಾ ಮೂಡುಕೋಡಿ, ಚೆಂಡೆ- ಮದ್ದಳೆಗಳಲ್ಲಿ ರಾಮದಾಸ್ ಶೆಟ್ಟಿ, ದೇವಸ್ಯ, ಮಾ|ಅದ್ವೈತ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಹನುಮಂತನಾಗಿ, ಜಯಲಕ್ಷ್ಮಿ ವಿ ಭಟ್ ವೀರಮಣಿಯಾಗಿ, ಪ್ರೇಮಾ ಕಿಶೋರ್ ಈಶ್ವರನಾಗಿ, ಶಾಲಿನಿ ಅರುಣ್ ಶೆಟ್ಟಿ ಶತ್ರುಘ್ನನಾಗಿ, ವಿನಯಾ ಕೇಕುಣ್ಣಾಯ ಶ್ರೀರಾಮನಾಗಿ ಪಾತ್ರ ನಿರ್ವಹಣೆ ಮಾಡಿದರು. ಕಲಾವಿದರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಚಿತ್ರ: ತಾಳಮದ್ದಳೆ