ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ‘ಶ್ರೀ ವರಮಹಾಲಕ್ಷ್ಮೀ ಸದನ’ದಲ್ಲಿ ಪುರೋಹಿತ ಬನಾರಿ ಹರಿಪ್ರಸಾದ ಭಟ್ಟರ ನೇತೃತ್ವದಲ್ಲಿ ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಮಾಣಚ್ಚಿಲ್ ಸೇವೆ ಫೆ.15ರಂದು ನಡೆಯಿತು. ಫೆ.14ರಂದು ಸಂಜೆ 6 ಗಂಟೆಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ, ರಾಕ್ಷೋಘ್ನ ಹವನ, ರಾತ್ರಿ ಮಂಗಳಾರತಿ ಅನ್ನಸಂತರ್ಪಣೆ ನಡೆಯಿತು.
ಫೆ.15ರಂದು ಬೆಳಿಗ್ಗೆ 9.05ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನಡೆಯಿತು. ಫೆ.16ರಂದು ಸಂಜೆ 5 ಗಂಟೆಯಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 7 ಗಂಟೆಯಿಂದ ಏಕದಂತ ಭಜನಾ ಮಂಡಳಿ ಪೆರ್ಲ ಇವರಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಭಂಡಾರ ತೆಗೆದು ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು. ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್‌ರವರು ಭಕ್ತಾದಿಗಳನ್ನು ಸ್ವಾಗತಿಸಿದರು.