ಪುತ್ತೂರು: ಬನ್ನೂರು ಶ್ರೀ ದೆಯ್ಯೆರೆ ಮಾಡ ಇಷ್ಟ ದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ಸಾನಿಧ್ಯಗಳಲ್ಲಿ ಫೆ.22ರಂದು ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.21ರ ಬೆಳಿಗ್ಗೆ ಬೃಹತ್ ಹಸಿರುವಾಣಿ ಮೆರವಣಿಗೆ ನಡೆಯಿತು.
ಪಡೀಲು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ಬನ್ನೂರು ಶ್ರೀ ಶಿವಪಾರ್ವತಿ ಮಂದಿರ, ಜೈನಗುರಿ, ಬನ್ನೂರು ಶ್ರೀ ಶನೀಶ್ವರಕಟ್ಟೆ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಸೇಡಿಯಾಪು, ಕೆಮ್ಮಾಯಿಂದ ಹೊರೆಕಾಣಿಕೆ ಸಂಗ್ರಹ ಮಾಡಿಕೊಂಡು ಬಂದ ಮೆರವಣಿಗೆ ಆನೆಮಜಲು ದ್ವಾರದ ಮೂಲಕ ದೈಯ್ಯೆರೆ ಮಾಡಾ ಕ್ಷೇತ್ರಕ್ಕೆ ತೆರಳಿತು. ದಾರಿಯುದ್ಧಕ್ಕೂ ಭಕ್ತರು ಅಪಾರ ಹೊರೆಕಾಣಿಕೆ ನೀಡಿದರು.
ಬೆಳಿಗ್ಗೆ ಪಡೀಲು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸುಧೀರ್ ಶೆಟ್ಟಿಯವರು ತೆಂಗಿನ ಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ, ಬ್ರಹ್ಮಕಲಶೋತ್ಸವ ಸಮಿತ ಅಧ್ಯಕ್ಷ ವಿಶ್ವನಾತ ಗೌಡ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌನೀಶ್ ಎನ್, ಖಜಾಂಚಿ ಸತೀಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಚಿ ರಮೇಶ್ ಗೌಡ ನೀರ್ಪಾಜೆ, ಗೌರವ ಸಲಹೆಗಾರ ಚಂದ್ರಾಕ್ಷ ಬಿ.ಎನ್, ಹುಮಾಜೆ ಶ್ರೀಕೃಷ್ಣ ಭಟ್, ಶ್ರೀಕೃಷ್ಣ ಭಟ್ ಕುಳುರು, ಉಮೇಶ್ ಶೆಟ್ಟಿ ಆನೆಮಜಲು, ನಗರಸಭಾ ಸದಸ್ಯರಾದ ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ನಿವೃತ್ತ ಎ.ಎಸ್.ಐ ಪಾಂಡುರಂಗ ಗೌಡ, ಅಮರನಾಥ ಗೌಡ, ನಾರಾಯಣ ಗೌಡ, ವಾಸಪ್ಪ ಗೌಡ, ಲೋಕೇಶ್ ಗೌಡ ಅಲುಂಬುಡ, ಚಂರಶೇಖರ್ ಗೌಡ ಅಲುಂಬುಡ, ಸಂಜೀವ ಪೂಜಾರಿ ಆನೆಮಜಲು, ಹರಿಪ್ರಸಾದ್ ಆಚಾರ್ಯ ಸಹಿತ ಹಲವಾರು ಮಂದಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡರು.