ಪುತ್ತೂರು: ದಾರುಲ್ ಹಿದಾಯ ಎಜ್ಯುಕೇಶನ್ ಫೌಂಡೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಹಾಗು ಮುಸ್ಲಿಂ ಯೂತ್ ಫೆಡರೇಶನ್ ದಾರುಲ್ ಹಿದಾಯ ಆರ್ಲಪದವು ಇದರ ವತಿಯಿಂದ ಮೂರು ದಿನಗಳ ವಾರ್ಷಿಕ ಸಮಾವೇಶ, ಸ್ನೇಹ ಸಮ್ಮಿಲನ, ರಾಜ್ಯಪ್ರಶಸ್ತಿ ಪ್ರದಾನ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವು ಮಾ.1 ರಿಂದ 3ರ ತನಕ ನಡೆಯಲಿದೆ ಎಂದು ದಾರುಲ್ ಹಿದಾಯ ಇದರ ಅಧ್ಯಕ್ಷ ಪಿ.ಕೆ.ಇಸ್ಮಾಯಿಲ್ ಆರ್ಲಪದವು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಾ.1ರಂದು ಮಧ್ಯಾಹ್ನ ಮರ್ಹೂಂ ಸಯ್ಯದ್ ಆಲಿ ಕರಾವಳಿ ತಂಙಳ್ ಸಭಾಂಗಣದ ಮರ್ಹೂಂ ಯುನಿಟಿ ಹಸನ್ ಹಾಜಿ ವೇದಿಕೆಯಲ್ಲಿ ಅಂತರಾಜ್ಯ ಮಟ್ಟದ ಕಾವಲಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಆರ್ಲದಪವು ಖತೀಬರಾದ ಅಬ್ದುಲ್ ಸಲಾಂ ಅಮಾನಿ ಅವರು ದುವಾ ಅಶೀರ್ವಚನ ನೀಡಲಿದ್ದಾರೆ. ಪಾಣಾಜೆ ಮುಹಲಿಂ ಮಸ್ಜಿದ್ ಅಫ್ರಾ ಇದರ ಉಮ್ಮರ್ ಅಂಜದಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ನೂರುಲ್ ಹುದಾ ಮಾಡ್ನೂರು ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ ಹಿರಾ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಜುಮಾ ಮಸೀದಿಯ ಮುದರ್ರೀಸ್ ಸಯ್ಯದ್ ಅಹಮ್ಮದ್ ಪುಕೋಯ ತಂಙಳ್ ಅವರು ದುವಾ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸೌಹಾರ್ದ ಸಂದೇಶ ನೀಡಲಾಗುವುದು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸಮಾಜ ರತ್ನ ರಾಜ್ಯಪ್ರಶಸ್ತಿ ಪ್ರದಾನ:
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 31 ಮಂದಿ ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸವಣೂರು ಕೆ.ಸೀತಾರಾಮ ರೈ, ಸಿ.ಎ ಅಬ್ದುಲ್ಲ ಹಾಜಿ, ಝಕಾರಿಯ ಹಾಜ ಜೋಕಟ್ಟೆ, ಜಯಂತ ನಡುಬೈಲು, ಮಹಮ್ಮದ್ ಹಾಜಿ ಪಾವೂರು, ರಶೀದ್ ಮಾಸ್ಟರ್, ಕೆ.ಪಿ.ಅಹಮ್ಮದ್ ಹಾಜಿ ಆಕರ್ಷನ್, ಅಶ್ರಫ್ ಮಾಂತೂರು, ರಶೀದ್ ಜಾಜಿ ಬಾಯಾರು, ಇಸಾಕ್ ಹಾಜಿ ಬೆಳ್ಳಾರೆ, ಎಂ.ಎಚ್ ಮಹಮ್ಮದ್ ಹಾಜಿ ಅಡ್ಡೂರು, ಅಬ್ದುಲ್ ರಹಿಮಾನ್ ಹಾಜ ಅರಿಯಡ್ಕ, ಅಶ್ರಫ್, ಉಂದಾಯಿ ಗೋಣಿಕೊಪ್ಪ, ಹಾಜಿ ಎಸ್ ಎ ಹಮೀದ್ ಸುಳ್ಯ, ಶಶಿಧರ್ ರಾವ್ ಬೊಳಿಕಲ, ನಶೀರ್ ಬಶೀರ್ ಸಾಬ್ ಗೋವಾ, ಬಶೀರ್ ಬುಡಿಯಾರ್, ಜೆ.ಎಸ್ ಮುಹಮ್ಮದ್ ಹಾಜಿ, ಇಕ್ಬಾಲ್ ಹಾಜಿ ಮುರ, ಮಹಮ್ಮದ್ ರಫೀಕ್ ಹಾಜಿ, ಹಮೀದ್ ಕೊಮ್ಮೆಮಾರ್, ಮಹಮ್ಮದ್ ಕುಂಞಿ ಹಾಜಿ ಕೊರಂಗಿಲ, ಡಾ| ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಅಬೂಬಕ್ಕರ್ ಇಬ್ರಾಹಿಂ ಕಲ್ಲಪದವು, ಸೂಫಿ ಬಪ್ಪಳಿಗೆ, ಪಿ.ಕೆ ಅಬೂಬಕ್ಕರ್ ಆರ್ಲಪದವು, ಆಶೀಫ್ ಹಾಜಿ ತಂಬುತ್ತಡ್ಕ, ಹಮೀದ್ ಪರ್ಲಡ್ಕ ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ರಝಾಕ್ ಬದ್ರಿಯಾ ಅವರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪಿ.ಕೆ.ಇಸ್ಮಾಯಿಲ್ ಅವರು ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣೆ, ಬುರ್ದಾ ಸ್ಪರ್ಧೆ, ನೂರೇ ಅಜ್ಮೀರ್:
ಮಾ.2ರಂದು ಯೆನೆಪೋಯ ವಿಶ್ವ ವಿದ್ಯಾನಿಲಯ ದೇರಳಕಟ್ಟೆ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗು ರಕ್ತದಾನ ಶಿಬಿರ ನಡೆಯಲಿದೆ. ಎಂ.ವೈ.ಎಫ್ ನ ಗೌರವ ಸಲಹೆಗಾರ ಜೆ.ಪಿ ಅಬ್ದುಲ್ಲ ಕುಂಞಿ ಹಾಜಿ ಜಾಲಗದ್ದೆ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಗಂಟೆ 1 ರಿಂದ ಅಂತರ್ ರಾಜ್ಯಮಟ್ಟದ ಬುರ್ದಾ ಸ್ಪರ್ಧಾ ಸಂಭ್ರಮ ನಡೆಯಲಿದೆ. ಸಂಜೆ ಗಂಟೆ 7ರಿಂದ ಬಹು ವಲಿಯುದ್ದೀನ್ ಫೈಝೀ ವಾಝಕ್ಕಾಡ್ ಕೇರಳ ಅವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ. ದಾರುಲ್ ಹಿದಾಯ ಗೌರವಾಧ್ಯಕ್ಷ ಅಲ್ ಹಾಜ್ ಹಾದಿ ತಂಙಳ್ ಅಲ್ ಮಶ್ಹೂರ್ ಮೊಗ್ರಾಲ್ ಕೇರಳ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ 25 ಮಂದಿ ನಮ್ಮೂರ ಉಲೇಮಾ ಶಿರೋಮಣಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಕೆ.ಇಸ್ಮಾಯಿಲ್ ತಿಳಿಸಿದರು.
ಗಾಯನ ಸ್ಪರ್ಧಾ ಕೂಟ, ಬೃಹತ್ ದಪ್ರ್ಯಾಲಿ, ಸಾಮೂಹಿಕ ವಿವಾಹ:
ಮಾ.3ಕ್ಕೆ ಬೆಳಿಗ್ಗೆ ಅಂತರ್ ರಾಜ್ಯಮಟ್ಟದ ಪ್ರಖ್ಯಾತ ಗಾಯಕರಿಂದ ಗಾಯನ ಸ್ಪರ್ಧಾ ಕೂಟ ‘ಇಶಲ್ ಹಬೀಬಿ’ ನಡೆಯಲಿದೆ. ಆರ್ಲಪದವು ಎಂ.ವೈ. ಎಫ್ ಇದರ ಅಧ್ಯಕ್ಷ ಮಹಮ್ಮದ್ ಬದುರುಲ್ ಮುನೀರ್ ಅವರು ಉದ್ಘಾಟಿಸಲಿದ್ದಾರೆ. ಆರ್ಲಪದವು ಬದ್ರಿಯಾ ಜುಮಾ ಮಸೀದಿಯ ಮುಲ್ಲಿಂ ಮಹಮ್ಮದ್ ಶರೀಫ್ ದುರ್ವಾ ಆಶೀರ್ವಚನ ನೀಡಲಿದ್ದಾರೆ. ಸಂಜೆ ಗಂಟೆ 4 ರಿಂದ ಬೃಹತ್ ದಪ್ರ್ಯಾಲಿ ಯು ಸಯ್ಯದ್ ಹಾಪಿಂ ತಂಙಳ್ ಅಲವಿ ಬಾಖವಿ ಕೊರಂಗಿಲ ಅವರ ನೇತೃತ್ವದಲ್ಲಿ ನಡೆಯಲಿದೆ. ಅನ್ಸಾರಿಯಾ ಯತೀಂ ಖಾನ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಆರ್ಲಡ್ಕ ಅವರು ಧ್ವಜಾರೋಹಣ ಮಾಡಲಿದ್ದಾರೆ. ಉದ್ಯಮಿ ಅಲಿ ಕಾಲೇರ ಎಮ್ಮೆಮಾಡು ಅವರು ರ್ಯಾಲಿ ಉದ್ಘಾಟಿಸಲಿದ್ದಾರೆ. ಸಂಜೆ ಗಂಟೆ 7 ರಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಪ್ರಥಮ ಬಾರಿಗೆ ನಡೆಯಲಿದ್ದು, ಎರಡು ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸಲಾಗುವುದು. ರಾತ್ರಿ ಗಂಟೆ 8 ರಿಂದ ಅಂತರ್ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಕೆ.ಇಸ್ಮಾಯಿಲ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ವೈ.ಎಫ್ನ ಗೌರವ ಸಲಹೆಗಾರ ಕೆ.ಎ.ಆಲಿ ಕಂಚಿಲ್ಕುಂಜ, ಗೌರವಾಧ್ಯಕ್ಷ ಕೆ. ಇಬ್ರಾಹಿಂ ಸತ್ತರ್ ಹಾಜಿ ಮಂಡೆಕೋಲು, ಅಧ್ಯಕ್ಷ ಬದ್ರುಲ್ ಮುನೀರ್ ಹಾರ್ಪಳ, ಉಮ್ಮರ್ ಶಾಫಿ ಉಪಸ್ಥಿತರಿದ್ದರು.