





ಹಿರೇಬಂಡಾಡಿ: ಉಳತ್ತೋಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ದೈವಗಳ ನೇಮೋತ್ಸವ ಫೆ.26 ಮತ್ತು 27ರಂದು ನಡೆಯಿತು.



ಫೆ.26ರಂದು ರಾತ್ರಿ ರಕ್ತೇಶ್ವರಿ, ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಿತು. ಫೆ.27ರಂದು ಬೆಳಿಗ್ಗೆ ಶ್ರೀ ದುಗಲಾಯಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಿತು.






ದೈವಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಧಾನ ಅರ್ಚಕರೂ ಆದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಡ, ಸದಸ್ಯರಾದ ಗಣೇಶ ಮಠಂದೂರು, ಸದಾಶಿವ ಬಂಗೇರ ಎಲಿಯ, ನಾರಾಯಣ ಕನ್ಯಾನ, ಮುದ್ದ ಕೆಮ್ಮಾರ, ಸತೀಶ ಶೆಟ್ಟಿ ಪಡ್ಯೊಟ್ಟು, ಕಸ್ತೂರಿ ಹೆನ್ನಾಳ, ಭಾರತಿ ನಿಡ್ಡೆಂಕಿ, ಉತ್ಸವ ಸಮಿತಿ ಅಧ್ಯಕ್ಷ ನವೀನ್ ಪಡ್ಪು, ಕಾರ್ಯದರ್ಶಿ ಅಶೋಕ ಹಲಸಿನಕಟ್ಟೆ, ಶ್ರೀ ದೈವಗಳ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ಕೆಮ್ಮಟೆ, ಕೋಶಾಧಿಕಾರಿ ವಿಠಲ ಪರಕೊಡಂಗೆ, ಬೈಲುವಾರು ಸಂಚಾಲಕರು, ವಿವಿಧ ಸಮಿತಿಯ ಸದಸ್ಯರು, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ, ಗಣೇಶೋತ್ಸವ ಸಮಿತಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.








