ಪ್ರಿಯದರ್ಶಿನಿಯಲ್ಲಿ ದೀಪ ಪ್ರದಾನ ಕಾರ್ಯಕ್ರಮ

0

ಪುತ್ತೂರು:ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ 2023- 24ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ ಮಾ.4ರಂದು ಜರುಗಿತು.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ದೇವಿ ಚರಣ್ ರೈ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

10ನೇ ತರಗತಿಯ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ಹಸ್ತಾಂತರಿಸಿದರು. ಮುಖ್ಯ ಅತಿಥಿ ದೇವಿ ಚರಣ್ ರೈ ಮಾತನಾಡಿ ಎಸ್ ಎಸ್ ಎಲ್ ಸಿ ನಂತರ ಮುಂದೇನು..? ಎಂಬುದರ ಕುರಿತು ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ದೀರ್ಘ ಅವಲೋಕನ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀರಂಗನಾಥ ರೈ ಗುತ್ತು ವಿದ್ಯಾರ್ಥಿಗಳ ಇಷ್ಟು ವರ್ಷದ ಸಾಧನೆಗೆ ಶಾಲೆಯ ಶಿಕ್ಷಕರ ಅವಿರತ ಪ್ರಯತ್ನ ಕಾರಣ ಎಂದರು.

ಶಾಲಾ ಮುಖ್ಯ ಗುರು ರಾಜೇಶ್ ಎನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಂದೆ -ತಾಯಿಯರ ಆಸೆ ಕನಸುಗಳನ್ನು ನನಸು ಮಾಡುವಲ್ಲಿ ಪ್ರಯತ್ನಿಸೋಣ. ಸಜ್ಜನರ ಸಂಗ ಬೆಳೆಸುತ್ತಾ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳೋಣ ಎಂದರು. ಶಿಕ್ಷಕ ಶಿವರಾಮ್ ಭಟ್ ಹಾಗೂ ಸಂಧ್ಯಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷಶ್ರೀಯುತ ಸುಬ್ರಮಣ್ಯ ಭಟ್ ಶರವು ವೇದಿಕೆಯಲ್ಲಿ ಉಪಸ್ಥಿತರಿದ್ದರು. 9ನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿ, ಹಂಶಿತ, ತನ್ವಿ. ಶೆಟ್ಟಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಹರ್ಷ ,ಕೃತಿ.ಕೆ.ಎಸ್ ಹಾಗೂ ಶಾಲಾ ನಾಯಕ ಹೇಮಂತ ಕುಮಾರ್ ಕೆ .ವೈ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.9ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿ ಸಮನ್ವಿ ಸ್ವಾಗತಿಸಿ, ಚಿಂತನ್ ರೈ ವಂದಿಸಿ, ಯಶ್ವಿ.ರೈ ,ಶರಣ್ಯ ಹಾಗೂ ಧನ್ವಿ.ಬಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here