ಆಲಂಕಾರು ಮೆಸ್ಕಾಂ ಜೆಇ ಪ್ರೇಮ್‌ಕುಮಾರ್‌ರಿಗೆ ಜೆಸಿಐನಿಂದ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಗೌರವ

0

ಆಲಂಕಾರು: ಆಲಂಕಾರು ಜೇಸಿಐ ವತಿಯಿಂದ ಪ್ರತಿ ತಿಂಗಳು ʼSalute the Silent Starʼ ಎನ್ನುವ ಶೀರ್ಷಿಕೆ ಅಡಿಯಲ್ಲಿ ಸಮಾಜದಲ್ಲಿ ಅತ್ಯುತ್ತಮವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡುವಂತಹ ನಿಷ್ಠಾವಂತ ಕೆಲಸಗಾರರಿಗೆ ಅಥವಾ ಸಮಾಜಸೇವಕರಿಗೆ ಪ್ರತಿ ತಿಂಗಳು ಒಬ್ಬರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ತಿಂಗಳು ಮೆಸ್ಕಾಂ ಆಲಂಕಾರು ಶಾಖಾ ಜೆಇ ಪ್ರೇಮ್ ಕುಮಾರ್ ಮತ್ತು ಅವರ ಪತ್ನಿ ರಮ್ಯರವರನ್ನು ಗುರುತಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಜೇಸಿಐ ವಲಯ 15 ಪ್ರಾಂತ ಎ ಇದರ ಉಪಾಧ್ಯಕ್ಷರಾದ ಅಭಿಷೇಕ್ ಜಿ.ಎಮ್, ವಲಯ ತರಬೇತಿ ವಿಭಾಗದ ನಿರ್ದೇಶಕರಾದ ಹೇಮಲತಾ ಪ್ರದೀಪ್, ಜೇಸಿಐ ಆಲಂಕಾರು ಘಟಕದ ಅಧ್ಯಕ್ಷರಾದ ಮಮತಾ ಅಂಬರಾಜೆ, ಕಾರ್ಯದರ್ಶಿ ಕೃತಿಕಾ ಗುರುಕಿರಣ್ ಶೆಟ್ಟಿ, ಮಹಿಳಾ ಜೇಸಿ ಅಧ್ಯಕ್ಷೆ ದೇವಕಿ ಹಿರಿಂಜ, ಜೂನಿಯರ್ ಜೆಸಿ ಅಧ್ಯಕ್ಷೆ ಧನ್ಯಶ್ರೀ ರೈ ಉಪಸ್ಥಿತರಿದ್ದರು.
ಆಲಂಕಾರು ಜೆಸಿಐ ಸ್ಥಾಪಕ ಅಧ್ಯಕ್ಷರಾದ ಬಿ.ಎಲ್.ಜನಾರ್ದನ, ಪೂರ್ವಾಧ್ಯಕ್ಷರಾದ ಪ್ರದೀಪ್ ಬಾಕಿಲ, ಗುರುಕಿರಣ್ ಶೆಟ್ಟಿ, ಪ್ರವೀಣ ಆಳ್ವ, ಜತೆ ಕಾರ್ಯದರ್ಶಿ ಧನ್ಯಶ್ರೀ ರೈ, ಮೆಸ್ಕಾಂ ಸಿಬ್ಬಂದಿಗಳು ಹಾಗೂ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here