ಪುತ್ತೂರು ತುಳುಕೂಟದಿಂದ ತುಳುನಾಡ್ದ ಐಸಿರ ಕಬಿಕೂಟ – ಸಾಹಿತ್ಯಕ್ಕೆ ಸಮಾಜವನ್ನು ಒಟ್ಟು ಸೇರಿಸುವ ಶಕ್ತಿ ಇದೆ : ಭಾಸ್ಕರ್ ಕೋಡಿಂಬಾಳ

0

ಪುತ್ತೂರು: ತಾಲೂಕು ತುಳು ಕೂಟದ ಆಶ್ರಯದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಪುತ್ತೂರು ತಾಲೂಕು ತುಳು ಮೇಳದ ಅಂಗವಾಗಿ ಮಂಜಲ್ಪಡ್ಪು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಮಾ.3ರಂದು ನಡೆದ ತುಳುನಾಡ್ದ ಐಸಿರ ಕಬಿಕೂಟದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ, ಸಾಹಿತಿ ಭಾಸ್ಕರ ಕೋಡಿಂಬಾಳರವರು ಮಾತನಾಡಿ, ಸಾಹಿತ್ಯಕ್ಕೆ ಮಾತ್ರ ಸಮಾಜವನ್ನು ಒಟ್ಟು ಸೇರಿಸುವ ಶಕ್ತಿ ಇರುವುದು, ಇಂದು ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದ್ದು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬೇರೆ ಜಾತಿ, ಧರ್ಮ, ಕೆಲಸದವರು ಒಟ್ಟು ಸೇರಿಕೊಂಡು ಸಾಹಿತ್ಯದ ಕೃಷಿಯ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಹೇಳಿದರು. ಹಿರಿಯ ಸಾಹಿತಿ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ಮೊದಲ ಮಾತುಗಳನ್ನಾಡಿ, ಎಲ್ಲಾ ಸಾಹಿತಿಗಳಿಗೂ ಶುಭವನ್ನು ಹಾರೈಸಿದರು.ಸಿಟಿ ಆಸ್ಪತ್ರೆಯ ಡಾ. ಎ. ಪಿ. ಭಟ್, ವಿವೇಕಾನಂದ ಬಿ. ಎಡ್ ಕಾಲೇಜ್‌ನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಕಬಿಕೂಟದಲ್ಲಿ ಸುಪ್ರೀತಾ ಚರಣ್ ಪಾಲಪ್ಪೆ ಕಡಬ, ಸಿಶೇ.ಕಜೆಮಾರ್, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಚಂದ್ರಶೇಖರ ಮಾಲೆತ್ತೋಡಿ, ಸುಜಯ ಎಸ್. ಸ್ವರ್ಗ, ವಿಶ್ವನಾಥ್ ಕುಲಾಲ್ ಮಿತ್ತೂರ್, ವಿಂಧ್ಯಾ ಎಸ್ ರೈ, ಕೇಶವ ನೆಲ್ಯಾಡಿ, ಪದ್ಮಾ ಕೆ ಆರ್ ಆಚಾರ್ಯ, ಚಂದ್ರಹಾಸ ಕುಂಬಾರ ಬಂದಾರು,ಶ್ರೀಶಾ ವಾಸವಿ ತುಳುನಾಡ್, ಸಂಜೀವ ಮಿತ್ತಳಿಕೆ, ಸುನೀತಾ ಶ್ರೀರಾಮ್, ಜಯರಾಮ್ ಪಡ್ರೆ, ಪೂರ್ಣಿಮಾ ಪೆರ್ಲಂಪಾಡಿ, ಶ್ರುತಿಕಾ ಓಜಾಲ, ಅಶ್ವಿಜಾ ಶ್ರೀಧರ್, ಆನಂದ ರೈ ಅಡ್ಕಸ್ಥಳ, ಸತೀಶ್ ಬಿಳಿಯೂರು, ಪೂವಪ್ಪ ನೇರಳಕಟ್ಟೆ, ಪರಿಮಳ ಮಹೇಶ್ ರಾವ್, ಗೀತಾ ಲಕ್ಷ್ಮೀಶ್ ಮಂಗಳೂರು, ಪದ್ಮನಾಭ ಮಿಜಾರ್, ಅಪೂರ್ವ ಕಾರಂತ್ ದರ್ಬೆ, ಅಶೋಕ್ ಎನ್ ಕಡೇಶಿವಾಲಯ, ಸುಭಾಷ್ ಪೆರ್ಲ, ದೇವಿಕಾ. ಜೆ. ಜಿ. ಬನ್ನೂರುರವರುಗಳು ತಮ್ಮ ಕವನ ವಾಚಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ನಾರಾಯಣ ಕುಂಬ್ರ ಕಾರ್ಯಕ್ರಮ ಸಂಯೋಜಿಸಿದ್ದರು. ತುಳುಕೂಟದ ನಿರ್ದೇಶಕ ಬಿ. ಟಿ. ಮಹೇಶ್ಚಂದ್ರ ಸಾಲಿಯಾನ್ ವಂದಿಸಿದರು.ಸುಪ್ರೀತಾ ಚರಣ್ ಪಾಲಪ್ಪೆ ಕಡಬ ಕಾರ್ಯಕ್ರಮ ನಿರೂಪಿಸಿದರು. ರಶ್ಮಿತಾ ಸುರೇಶ್ ಜೋಗಿಬೆಟ್ಟು, ಕು. ತಶ್ವಿ ಶಾಂಭವಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here