ಪುತ್ತೂರು: ಕೇವಲ ಗ್ಯಾರೆಂಟಿ ಯೋಜನೆ ವಿಫಲವಾಗಿರುವುದಕ್ಕೆ ಮಾತ್ರ ಅಲ್ಲ ಬಿಜೆಪಿ ಸರಕಾರ ನೀಡಿದ ಯೋಜನೆಯನ್ನು ರದ್ಧುಗೊಳಿಸಿದಕ್ಕೂ ಶಾಸಕ ಅಶೋಕ ಕುಮಾರ್ ರೈಯವರು ಕ್ಷಮೆ ಕೇಳಬೇಕಿತ್ತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಹೇಳಿದರು.
ಬಿಜೆಪಿ ಸರಕಾರ ಇರುವಾಗ ರೈತರ ಮಕ್ಕಳಿಗೆ ನೀಡಿದ ವಿದ್ಯಾನಿಧಿ ಯೋಜನೆ,ಯಡಿಯೂರಪ್ಪರು ಮುಖ್ಯಮಂತ್ರಿಯಾಗಿರುವಾಗ ರೈತರಿಗೆ ನೀಡಿದ ಸಹಾಯಧನ 4000, ಹಾಲಿಗೆ ನೀಡಿದ ಪ್ರೋತ್ಸಾಹ ಧನ ಕಡಿತಗೊಳಿಸಿರುವುದು, ಪಂಚಾಯತ್ ಸದಸ್ಯರಿಗೆ ಗೌರವ ಧನ ವಿಳಂಬ ಮಾಡಿದ್ದಕ್ಕೆ, ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ನವಂಬರಿನಿಂದ ವೇತನ ಬರಲಿಲ್ಲ, ಕಾರ್ಮಿಕರ ಮಕ್ಕಳ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕಡಿತ ಮಾಡಿದಕ್ಕೆ ಕೂಡ ಒತ್ತಾಯ ಮಾಡಿ ಸರಕಾರಿ ಅಧಿಕಾರಿಗಳಿಗೆ ಜನ ಸೇರಲು ಟಾರ್ಗೆಟ್ ನೀಡಿ ಮಾಡಿದ ಸಮಾವೇಶದಲ್ಲಿ ಕ್ಷಮೆ ಕೇಳಬೇಕಿತ್ತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಹೇಳಿದರು.