ತುಳು ರಂಗ ಭೂಮಿಯಲ್ಲಿ ಸಂಚಲನ ಮೂಡಿಸಿದ “ಮುರಳಿ ಈ ಪಿರ ಬರೊಲಿ” ನಾಟಕ-ಉಪ್ಪಿನಂಗಡಿಯಲ್ಲಿ ಯಶಸ್ವಿ ಪ್ರದರ್ಶನ

0

ಉಪ್ಪಿನಂಗಡಿ: ಬಾಲಕೃಷ್ಣ ಪೆರುವಾಯಿ ಸಾರಥ್ಯದ ಕಿಶೋರ್‌ಜೋಗಿ ಉಬಾರ್‌ ಸಂಚಾಲಕತ್ವದ “ಗಯಾಪದ ಕಲಾವಿದೆರ್”‌ ಉಬಾರ್‌ ನಾಟಕ ತಂಡದ ಈ ವರ್ಷದ ಕಲಾಕಾಣಿಕೆ “ಮುರಳಿ ಈ ಪಿರ ಬರೊಲಿ” ನಾಟಕದ ಪ್ರದರ್ಶನ ಇತ್ತೀಚಿಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮಖೆ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯಿತು. ಯುವ ಜನಾಂಗಕ್ಕೆ ಸಂದೇಶವನ್ನು ನೀಡುವ ಕಥಾಹಂದರದ ನಾಟಕವನ್ನು ವೀಕ್ಷಿಸಿದ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದರರು. ನಾಟಕದ ಹಾಸ್ಯಭರಿತ ಸನ್ನಿವೇಶಗಳು ಕಲಾಭಿಮಾನಿಗಳನ್ನು ನಗೆಗಡಲಲ್ಲಿ ತೇಲುವಂತೆ ಮಾಡಿ ಅಭೂತಪೂರ್ವ ಯಶಸ್ಸಿನೊಂದಿಗೆ ನಾಟಕ ಪ್ರದರ್ಶನ ಕಂಡಿತು.

ಸಲಹೆ ಮತ್ತು ಸಹಕಾರ ನೀಡುವ ರಾಜೇಶ್‌ ಶಾಂತಿನಗರ ಇವರ ಪರಿಶ್ರಮ ತಂಡದ, ನಾಟಕದ ಯಶಸ್ಸಿಗೆ ಕಾರಣವಾಗಿದೆ. ಕಾರ್ತಿಕ್‌ ಶಾಸ್ತ್ರಿ ಪುಣಚ ಸಂಗೀತ ನಿರ್ದೇಶನ ಮಾಡಿದ್ದು, ಪ್ರದೀಪ್‌ ಕಾವು ವರ್ಣಾಲಂಕಾರ, ಲಿತು ಸೌಂಡ್ಸ್‌ ಮತ್ತು ಲೈಟ್ಸ್‌, ಲಿತು ಆರ್ಟ್ಸ್‌ ಶಾಂತಿನಗರ ಅವರ ರಂಗಾಲಂಕಾರ, ಕೃಷ್ಣ ಮುಂಡ್ಯ ಹಾಗೂ ಸಿದ್ದು ಬಿದ್ರ ಇವರ ತಾಂತ್ರಿಕ ಕೈಚಳಕ ರಂಗವೇದಿಕೆಯಲ್ಲಿ ಮೂಡಿ ಬಂದಿದೆ. ಗುಣಕರ ಅಗ್ನಾಡಿಯವರ ಸಹಕಾರ, ದಿವಾಕರ ಸೂರ್ಯ ಮತ್ತು ಕಿಶನ್‌ ಶೆಟ್ಟಿ ಸೂರ್ಯ ರವರ ಸಮಗ್ರ ನಿರ್ವಹಣೆಯಲ್ಲಿ ನಾಟಕವು ಪರಿಪೂರ್ಣವಾಗಿ ಮೂಡಿ ಬಂದಿದೆ.

ರಂಗಭೂಮಿಕೆಯಲ್ಲಿ ಪ್ರಬುದ್ಧ ರಂಗ ಕಲಾವಿದರಾಗಿ ಗಂಗಾಧರ ಟೈಲರ್‌ ಉಬಾರ್‌, ರಾಜೇಶ್‌ ಶಾಂತಿನಗರ, ಕಿಶೋರ್‌ಜೋಗಿ ಉಬಾರ್‌, ರಂಗಯ್ಯ ಬಲ್ಲಾಳ್‌ ಕೆದಂಬಾಡಿ ಬೀಡು, ರಾಜಶೇಖರ ಶಾಂತಿನಗರ, ದಿವಾಕರ ಸೂರ್ಯ, ಸತೀಶ್‌ ಶೆಟ್ಟಿ ಹಿರೇಬಂಡಾಡಿ, ಅನಿಲ್‌ ಇರ್ದೆ, ಸುನಿಲ್‌ ಪೆರ್ನೆ, ಅನುಷಾ ಜೋಗಿ ಪುರುಷರಕಟ್ಟೆ, ಉಷಾ ಬೆಳ್ಳಿಪ್ಪಾಡಿ, ಸಂದ್ಯಾ ಹಿರೇಬಂಡಾಡಿ, ಉದಯ್‌ ಆರ್‌ ಪುತ್ತೂರು, ಚೇತನ್‌ ಪಡೀಲ್‌, ಅನೀಶ್ ನೆಕ್ಕಿಲಾಡಿ ಇವರುಗಳು ನಟನೆ ಜನರ ಮನಸ್ಸಿಗೆ ಮುದ ನೀಡಿತ್ತು. ಶಶಿಕುಮಾರ್‌ ಕುಳೂರು ಇವರ ಕತೆ, ಸಾಹಿತ್ಯ, ನಿರ್ದೇಶನ, ಸಂಭಾಷಣೆಯೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕದ ಕಥಾವಸ್ತು ತುಳು ರಂಗಭೂಮಿಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here