*ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಕಾರ್ಯಕರ್ತರು ಶ್ರಮಿಸಬೇಕು – ಸಂಜೀವ ಮಠಂದೂರು
*ಪುತ್ತೂರು ಕ್ಷೇತ್ರದಲ್ಲಿ ಒಂದರಿಂದ ಒಂದಕಾಲು ಲಕ್ಷ ಮತಗಳ ಅಂತರದಿಂದ ಗೆಲುವು – ಅರುಣ್ ಕುಮಾರ್ ಪುತ್ತಿಲ
*ಇಡಿ ಜಗತ್ತನ್ನೆ ರಾಮಮಯ ಮಾಡುವುದು ನಮ್ಮ ಕಲ್ಪಣೆ- ಗೋಪಾಲಕೃಷ್ಣ ಹೇರಳೆ
ಪುತ್ತೂರು: ಸರಕಾರದ ಯೋಜನೆಯನ್ನು ನೇರವಾಗಿ ಸಾಮಾನ್ಯ ಜನರಿಗೆ ತಲುಪಿಸಿದ ಎಕೈಕಸರಕಾರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ಹಾಗಾಗಿ 2024ರ ಚುನಾವಣೆ ದೇಶ ಭಕ್ತ, ದೇಶ ವಿರೋಧಿಗಳ ನಡುವಿನ ನಿರ್ಣಾಯಕ ಚುನಾವಣೆ ಎಂದು ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.
ಪುತ್ತೂರು ಜೈನ ಭವನದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ಪಕ್ಷ ವಿಚಾರದ ಆದಾರದಲ್ಲಿ ಕೆಲಸ ಮಾಡುವುದು. ಕಾರ್ಯಕರ್ತರ ನಂಬಿಕೆ, ಜನರ ಮೇಲಿನ ವಿಶ್ವಾಸ, ವಿಚಾರದ ಬದ್ದತೆಗೆ ಅನುಗುಣವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒಪ್ಪಿಕೊಂಡಂತೆ. ಈ ಭಾರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದೆ ಎಂಬ ಸ್ಪಷ್ಟ ನಿರ್ದಶನವನ್ನು ಮನೆ ಮನೆಗೆ ತಿಳಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸಂಘಟನಾತ್ಮಕ ಜಿಲ್ಲೆ. ಇಲ್ಲಿ ಕಾರ್ಯಕರ್ತರ ಪ್ರೀತಿ ವಿಶ್ವಾಸ ಮುಖ್ಯ. ನಮ್ಮ ಪಾರ್ಟಿಯನ್ನು ಎಲ್ಲರು ಒಪ್ಪಿಕೊಂಡಿದ್ದಾರೆ. ಇದು ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಸಾಧ್ಯ ಆಗಿದೆ. ಅತ್ಯಂತ ಶ್ರೀಮಂತಿಕೆಯ ನಾಡು ನಮ್ಮ ತುಳುನಾಡು. ಹೆಮ್ಮೆಯ ಪ್ರದೇಶದಲ್ಲಿ ನನಗೆ ಪ್ರತಿನಿಧಿಸಲು ಸಿಕ್ಕಿರುವುದು ನನಗೆ ಪುಣ್ಯದ ಕೆಲಸ. ನನ್ನ ಬದ್ದತೆ ಸದಾ ಹಿಂದುತ್ವಕ್ಕೆ ಇರುತ್ತದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಒಂದಷ್ಡು ಚ್ಯುತಿ ಭಾರದಂತೆ ನಾನು ಕೆಲಸ ಮಾಡಲಿದ್ದೇನೆ. ಈ ನಿಟ್ಟಿನಲ್ಲಿ 2024ರ ನಿರ್ಣಾಯಕ ಚುನಾವಣೆಯಾಗಿದ್ದು ಹಿಂದು ಸಮಾಜದ ಜಾಗೃತಿ, ಹಿಂದು ಜೀವನಪದ್ದತಿಗೆ, ಸಂಸ್ಕೃತಿಗೆ ಅಗತ್ಯವಾಗಿ ಯುಗ ಪುರುಷ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಕಾರ್ಯಕರ್ತರು ಶ್ರಮಿಸಬೇಕು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸರ್ವೇ ಜನಾಃ ಸುಖಿನೋ ಭವಂತು ಎಂಬಂತೆ. ಮಹಾತ್ಮಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪಣೆಯನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಭ್ರಷ್ಟಾಚಾರ ಮುಕ್ತ ಭಾರತವಾಗಿದೆ. ಈ ನಿಟ್ಟಿನಲ್ಲಿ ಯುಪಿಎ ಭ್ರಷ್ಟಾಚಾರ ಸರಕಾರ ಆಗಿತ್ತು. ನರೇಂದ್ರ ಮೋದಿ ಹಾಕಿದ ಕಾರ್ಯಕ್ರಮ ಜನಮಾನಸದಲ್ಲಿ ಮೂಡಿದ ಕಾರ್ಯಕ್ರಮವಾಗಿದೆ. ದೇಶದ ಜನ ನರೇಂದ್ರ ಮೋದಿಯವರನ್ನು ಹೇಗೆ ಆಯ್ಕೆ ಮಾಡಿದ್ದಾರೋ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನಮ್ಮೆಲ್ಲರ ಆಯ್ಕೆ. ಬ್ರಿಜೇಶ್ ಚೌಟ ಅವರಿಗೆ ಆಶೀರ್ವಾದ ಮಾಡುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಪುತ್ತೂರು ಕ್ಷೇತ್ರದಲ್ಲಿ ಒಂದರಿಂದ ಒಂದಕಾಲು ಲಕ್ಷ ಮತಗಳ ಅಂತರದಿಂದ ಗೆಲುವು:
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ನಮ್ಮ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ದೊಡ್ಡ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ನಾವೆಲ್ಲ ಸಂಕಲ್ಪ ಮಾಡಿದ್ದೇವೆ. ಜಗತ್ತು ಈ ದೇಶಕ್ಕೆ ಗೌರವ ಕೊಡುವ ಸನ್ನಿವೇಶದಲ್ಲಿ, ಈಗಿನ ಕರ್ನಾಟಕ ಸರಕಾರ ಮುಸಲ್ಮಾನರ ತುಷ್ಟಿಕರಣ, ಹಿಂದು ವಿರೋಧಿ ನೀತಿಯ ವಿರುದ್ದ ನಾವು ತೊಡೆ ತಟ್ಟಿ ನಿಲ್ಲುವ ಸಂದರ್ಭದಲ್ಲಿ ನಾವೆಲ್ಲ ಎಚ್ಚೆತ್ತು ಕೊಂಡು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಅದಕ್ಕಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಬೇಕೆಂದು ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 12 ವರ್ಷಗಳಿಂದ ನಳಿನ್ ಕುಮಾರ್ ಕಟೀಲ್ ಉತ್ತಮ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ದಿಗಳನ್ನು ಮುಂದಿಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಲಕ್ಷ ಮತಗಳ ಅಂತರದಲ್ಲಿ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಬೇಕೆಂದರು. ಪುತ್ತೂರು ಕ್ಷೇತ್ರದಲ್ಲಿ ಒಂದರಿಂದ ಒಂದುಕಾಲು ಲಕ್ಷ ಮತಗಳ ಅಂತರದಿಂದ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಬೇಕೆಂದರು.
ಇಡಿ ಜಗತ್ತನ್ನೆ ರಾಮಮಯ ಮಾಡುವುದು ನಮ್ಮ ಕಲ್ಪಣೆ:
ಬಿಜೆಪಿ ವಿಭಾಗ ಸಹ ಸಂಚಾಲಕ ಗೋಪಾಲಕೃಷ್ಣ ಹೇರಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಅಭ್ಯರ್ಥಿ ಪುತ್ತೂರಿನ ಮುತ್ತು. ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಮರ್ಥ ಅಭ್ಯರ್ಥಿ ನೀಡಿದ್ದಾರೆ. ನಮ್ಮ ಕಲ್ಪಣೆ ಇಡಿ ಜಗತ್ತನ್ನೆ ರಾಮಮಯ ಮಾಡುವುದು. ಈ ಚುನಾವಣೆ ವಿಕಸಿತ ಭಾರತ ಅತ್ಯಂತ ವಿಶೇಷ ಚುನಾವಣೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಶಿಸ್ತಿನ ಸಿಪಾಯಿ. ಬೂತ್ ಗೆದ್ದಾಗ ದೇಶ ಗೆಲ್ಲುತ್ತದೆ ಎಂಬ ನಿಟ್ಟಿನಲ್ಲಿ ನಮ್ಮ ಸರಕಾರ ಎನು ಕಲ್ಪಣೆ ಇದೆಯೊ ಅದನ್ನು ಸಹಕಾರಗೊಳಿಸುವಂತೆ ವಿನಂತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಪುತ್ತೂರು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸುಲೋಚನಾ ಭಟ್, ಚುನಾವಣಾ ನಿರ್ವಾಹಣಾ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪುತ್ತೂರು ಮಂಡಲದ ಉಸ್ತುವಾರಿ ಸುನಿಲ್ ಆಳ್ವ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ , ಜಿಲ್ಲಾ ಬಿಜೆಪಿ ವಿದ್ಯಾಗೌರಿ, ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿ ಹರೀಶ್ ಬಿಜತ್ರೆ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.