ಆಕರ್ಷಕ ಉಡುಗೊರೆಯೊಡನೆ ಪ್ರಾರಂಭಗೊಂಡಿದೆ ಕಿಯಾ ಮ್ಯಾನುವಲ್ ಕಾರು ಟೆಸ್ಟ್ ಡ್ರೈವ್ ಮೇಳ

0

ಪುತ್ತೂರು : ಮಂಗಳೂರಿನ ಕದ್ರಿ ಬಳಿಯ ಹೆಸರಾಂತ ಕಿಯಾ ಕಾರು ಡೀಲರ್ ಎ.ಆರ್.ಎಂ. ಕಿಯಾ ಇದರ ವತಿಯಿಂದ ಎರಡು ದಿನಗಳ ಕಿಯಾ ಮ್ಯಾನುವಲ್ ಕಾರುಗಳ ಟೆಸ್ಟ್ ಡ್ರೈವ್ ಮೇಳವು ಇಲ್ಲಿನ ದರ್ಬೆ ಬೈಪಾಸ್ ಬಳಿಯ ರೈ ಎಸ್ಟೇಟ್ ಆ್ಯಂಡ್ ಬಿಲ್ಡರ್ಸ್ ಸಂಕೀರ್ಣ ಮುಂಭಾಗದಲ್ಲಿ ಆರಂಭವಾಯಿತು.


ಕಿಯಾ ಮೋಟಾರ್ಸ್ ವಿನೂತನ ರೀತಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿರುವಂಥಹ ಕಾರನ್ನು ಪ್ರದರ್ಶಿಸಲಾಗಿದ್ದು ,ಮಾ.22 ರಂದು ಪ್ರಾರಂಭಗೊಂಡ ಮೇಳದಲ್ಲಿ ಕಿಯಾ ಮ್ಯಾನುವಲ್ ಕಾರುಗಳ ಪ್ರದರ್ಶನದ ಜೊತೆಗೆ ಟೆಸ್ಟ್ ಡ್ರೈವ್ ಕೂಡ ಕಾರು ಪ್ರಿಯರಿಗೆ ಲಭ್ಯವಾಯಿತು. ಇದೇ ವೇಳೆ ಪರೀಕ್ಷಾ ಚಾಲನೆ ಮಾಡಿದ ಎಲ್ಲಾ ಕಾರು ಪ್ರೇಮಿಗಳಿಗೂ ಆಕರ್ಷಕ ಉಡುಗೊರೆಯನ್ನು ನೀಡಿ , ಅಭಿನಂದಿಸಲಾಯಿತು.


ಮಾ.23 ರ ಸಂಜೆ ತನಕ ಕಾರು ಮೇಳ ನಡೆಯಲಿದೆ ಎಂದು ಸಂಸ್ಥೆ ಅಧಿಕೃತ ಪ್ರಕಟಣೆ ತಿಳಿಸಿದ್ದು , ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಲೋನ್ ವ್ಯವಸ್ಥೆ , ಫಿಕ್ಸೆಡ್ ಮತ್ತು ಫ್ಲೋಟಿಂಗ್ ಲೋನ್ ಫೆಸಿಲಿಟಿ ಜೊತೆಗೆ 90% ವರೆಗಿನ ಸಾಲ ಸೌಲಭ್ಯವೂ ಇದ್ದು ,ಕಾರು ಪ್ರಿಯರು ಈ ಮೇಳದ ಪ್ರಯೋಜನ ಪಡೆಯುವಂತೆ ಆಯೋಜಕರು ತಿಳಿಸಿದ್ದಾರೆ. ಮಾಹಿತಿಗಾಗಿ 9606013163 ಅಥವಾ 9606055306 ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here