ಮಾ.23-25: ಕೊಂರ್ಬಡ್ಕ ದೊಡ್ಡಮನೆ ಕುಟುಂಬ ದೈವಗಳ ಪುನರ್ ಪ್ರತಿಷ್ಠೆ, ನೇಮೋತ್ಸವ

0

ಮಾ.24: ದೈವಗಳ ಪ್ರತಿಷ್ಠೆ, ಕಲಶಾಭಿಷೇಕ – ಮಾ.25: ದೈವಗಳ ನೇಮೋತ್ಸವ

ಪುತ್ತೂರು: ಕೊಂರ್ಬಡ್ಕ ದೊಡ್ಡಮನೆ ತರವಾಡು ಇದರ ಕುಟುಂಬ ದೇವರು, ದೈವಗಳ ಸೇವಾ ಟ್ರಸ್ಟ್ ಕೊಂರ್ಬಡ್ಕ ದೊಡ್ಡಮನೆ ಕುಟುಂಬ ದೈವಗಳಾದ ಶ್ರೀ ಇರ್ವೆರ್ ಉಳ್ಳಾಕ್ಲು ಮತ್ತು ಧೂಮಾವತಿ ದೈವಗಳಿಗೆ ಕೊಳ್ತಿಗೆ ಗ್ರಾಮದ ಕಂಟ್ರಮಜಲಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಉಳ್ಳಾಕ್ಲು ಮಾಡ, ಧೂಮಾವತಿ ಮಾಡ ಮತ್ತು ಭಂಡಾರ ಚಾವಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಶುಭಾಶೀರ್ವಾದದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮಾ.23 ರಿಂದ ಆರಂಭಗೊಂಡು 25 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಮಾ.23ರಂದು ಸಂಜೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.24 ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು 9.58 ರ ವೃಷಭ ಲಗ್ನದ ಸುಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ 11.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಕ್ಷೇತ್ರ ಕುಂಟಾರಿನ ಬ್ರಹ್ಮಶ್ರೀ ವೇ.ಮೂ.ಕುಂಟಾರು ರವೀಶ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ದೊಡ್ಡಮನೆ ಕುಟುಂಬ ದೇವರು, ದೈವಗಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ವೆಂಕಟ್ರಮಣ ಸಭಾಧ್ಯಕ್ಷತೆ ವಹಿಸಲಿದ್ದಾರೆ. ದೊಡ್ಡಮನೆ ತರವಾಡು ಮುಖ್ಯಸ್ಥ ಗಂಗಾಧರ ಗೌಡ ಕೊಂರ್ಬಡ್ಕ ಗೌರವ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರವೀಶ್ ತಂತ್ರಿಯವರಿಗೆ, ವಾಸ್ತುಶಿಲ್ಪಿ ರಮೇಶ್ ಕಾರಂತ ಕಾಸರಗೋಡು, ಜ್ಯೋತಿಷ್ಯ ಬಾಲಕೃಷ್ಣ ನಾಯರ್ ಪೊಯಿನಾಚಿ(ಚೌಕಿ)ರವರುಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಅಪರಾಹ್ನ ಸುಬ್ಬು ಸಂಟ್ಯಾರ್ ಸಂಯೋಜನೆಯಲ್ಲಿ ಹಲವು ಕಲಾವಿದರ ಕೂಡುವಿಕೆಯಲ್ಲಿ ಶ್ರೀ ದೇವಿ ಮಹಿಷಮಧಿನಿ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ.

ಮಾ.25 ರಂದು ಬೆಳಿಗ್ಗೆ ಶ್ರೀ ಇರ್ವೆರ್ ಉಳ್ಳಾಕುಲು ನೇಮ, ಧೂಮಾವತಿ ದೈವದ ನೇಮ ನಡೆದು ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಪಂಜುರ್ಲಿ, ಕಲ್ಲುಡ ಕಲ್ಲುರ್ಟಿ ದೈವದ ನೇಮ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತರವಾಡು ಕುಟುಂಬಸ್ಥರು ಸೇರಿದಂತೆ ಊರಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ವೆಂಕಟ್ರಮಣ, ತರವಾಡು ಮುಖ್ಯಸ್ಥ ಗಂಗಾಧರ ಗೌಡ ಕೊಂರ್ಬಡ್ಕ ದೊಡ್ಡಮನೆ, ಟ್ರಸ್ಟಿಗಳಾದ ಕೆ.ರಾಮಚಂದ್ರ ಗೌಡ ಕುಂಟಿಕಾನ(ಕುಂಟಿನಾನ ವಿಭಾಗ), ಕೆ.ಐತ್ತಪ್ಪ ಗೌಡ ಕರ್ತಡ್ಕ(ಕರ್ತಡ್ಕ ವಿಭಾಗ), ಕೆ.ಪುಟ್ಟಣ್ಣ ಗೌಡ ಕಂಟ್ರಮಜಲು(ಕಂಟ್ರಮಜಲು ವಿಭಾಗ), ಮೋನಪ್ಪ ಗೌಡ ಅಮ್ಚಿನಡ್ಕ( ಎರಂತಡ್ಕ ವಿಭಾಗ), ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್‌ಕಜೆ, ಕೋಶಾಧಿಕಾರಿ ಚೇತನ್ ದೊಡ್ಡಮನೆ, ಕಾರ್ಯದರ್ಶಿ ಶಿವರಾಮ ಕೆ.ಪೆರ್ಲಂಪಾಡಿ, ಜತೆ ಕಾರ್ಯದರ್ಶಿ ತಿಮ್ಮಪ್ಪ ಗೌಡ ಕಂಟ್ರಮಜಲು ಹಾಗೂ ಸದಸ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here