ಯಾರೆಲ್ಲಾ ತುಳು ನಾಟಕ ನೋಡುತ್ತೀರಾ…ದಾನೆ ಮನಿಪುಜಾರ್..ಆವಾವು..

0

ಅಕ್ಷಯ ಕಾಲೇಜಿನಲ್ಲಿ ನಡೆದ ಫೆಸ್ಟ್ “ಕೃತ್ವ” ದಲ್ಲಿ ನಗೆಗಡಲಿನಲ್ಲಿ ತೇಲಾಡಿಸಿದ ಭೋಜರಾಜ್ ವಾಮಂಜೂರು

ಚಿತ್ರ: ನವೀನ್ ರೈ ಪಂಜಳ

ಪುತ್ತೂರು: ಯಾರೆಲ್ಲಾ ತುಳು ನಾಟಕ ನೋಡುತ್ತೀರಾ…ದಾನೆ ಮನಿಪುಜಾರ್..ಆವಾವು..ಎಂದು ತನ್ನದೇ ಸ್ಟೈಲಿನಲ್ಲಿ ಮಾತನಾಡಲು ಆರಂಭಿಸಿದ ತುಳು ಚಿತ್ರರಂಗದ ನಟ ಭೋಜರಾಜ್ ವಾಮಂಜೂರುರವರ ಮಾತಿಗೆ ಸ್ಥಳದಲ್ಲಿದ್ದ ಪ್ರೇಕ್ಷಕ ವೃಂದ ನಗೆಗಡಲಿನಲ್ಲಿ ತೇಲಾಡಿದರು.
ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ನಡೆದ ಪದವಿ ಮಟ್ಟದ ಅಂತರ್-ಕಾಲೇಜು ಸಾಂಸ್ಕೃತಿಕ ಫೆಸ್ಟ್ “ಕೃತ್ವ-2024” ಸಮಾರೋಪ ಸಮಾರಂಭದಲ್ಲಿ ಕಂಡ ದೃಶ್ಯವಾಗಿತ್ತು.


ವಿದ್ಯೆ ಕದಿಯಲಾಗದ ಸಂಪತ್ತು:
ಮುಂದುವರೆದು ಮಾತನಾಡಿದ ಭೋಜರಾಜ್ ವಾಮಂಜೂರುರವರು, ಪರಶುರಾಮನ ಸೃಷ್ಟಿಯಾಗಿರುವ ತುಳುನಾಡು ದೈವ-ದೇವರ ನೆಲೆವೀಡಾಗಿದೆ. ಪ್ರತಿ ವಿದ್ಯಾರ್ಥಿಯಲ್ಲಿ ಕಲೆ ಎಂಬ ವಿದ್ವತ್ ಇದೆ. ಆದರೆ ಅದರ ಅನಾವರಣವಾಗಲು ಸೂಕ್ತ ವೇದಿಕೆ ಬೇಕು. ಆಸ್ತಿ, ಬದುಕು, ಹಣ, ಸಂಪತ್ತನ್ನು ಯಾರೂ ಕದಿಯಬಹುದು ಆದರೆ ಪಡೆದುಕೊಂಡ ವಿದ್ಯೆಯನ್ನು ಯಾರೂ ಕದಿಯಲಾಗದು. ಯಾಕೆಂದರೆ ವಿದ್ಯೆ ಎನ್ನುವುದು ಶಾಶ್ವತ ಎಂದು ಹೇಳಿ ಡಾ.ರಾಜ್ ಕುಮಾರ್ ಹಾಡಿದ ‘ಹುಟ್ಡಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು..

ಸೂಕ್ತ ವೇದಿಕೆ ಕೊಟ್ಟಾಗ ಪ್ರತಿಭೆ ಅರಳುತ್ತದೆ-ಜನಾರ್ದನ್ ಬಿ:
ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ (ಜೆಎಂ.ಎಫ್.ಸಿ)ಜನಾರ್ದನ್ ಬಿ. ಮಾತನಾಡಿ, ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ನಯ, ವಿನಯ, ಸರಳತೆ, ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹೇಗೆ ಕಲ್ಲಿನಿಂದ ಸುಂದರವಾದ ಶಿಲ್ಪವನ್ನು ಕೆತ್ತಲಾಗುತ್ತದೋ ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರತಿಭೆ ಇದೆ. ಆ ಪ್ರತಿಭೆಗೆ ಸೂಕ್ತ ವೇದಿಕೆ ಕೊಟ್ಟಾಗ ಆ ಪ್ರತಿಭೆ ಅರಳುತ್ತದೆ. ವಿದ್ಯಾರ್ಥಿಗಳು ದುಶ್ಚಟಕ್ಕೆ ಒಳಗಾಗದೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಂತಾಗಬೇಕು ಎಂದರು.

ವಿಸ್ಡಂ ಸಂಸ್ಥೆಗೆ ಭೇಟಿ ನೀಡಿ, ಕನಸನ್ನು ನನಸಾಗಿಸಿ-ದೀಪಕ್ ಬೋಳೂರು:
ವಿಸ್ಡಂ ಇನ್ಸ್ಟಿಟ್ಯೂಟ್ ನೆಟ್ ವರ್ಕ್ ನ ಉಪಾಧ್ಯಕ್ಷ ದೀಪಕ್ ಬೋಳೂರು ಮಾತನಾಡಿ, ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸ ಬಳಿಕ ಉನ್ನತ ವ್ಯಾಸಂಗಕ್ಕೆ ಗಮನ ಕೊಡಬೇಕು. ವಿಸ್ಡಂ ಸಂಸ್ಥೆಯು ಉನ್ನತ ವ್ಯಾಸಂಗಕ್ಕೆ ಈಗಾಗಲೇ 5.23 ಕೋಟಿ ಸ್ಕಾಲರ್ ಶಿಪ್ ನೀಡಿದೆ. ವಿದ್ಯಾರ್ಥಿಗಳು ಒಂದು ಬಾರಿ ವಿಸ್ಡಂ ಸಂಸ್ಥೆಗೆ ಭೇಟಿ ನೀಡಿ, ವಿಚಾರ ತಿಳಿದುಕೊಂಡು ಕನಸನ್ನು ನನಸಾಗಿಸಿ ಎಂದರು.

ಬಡವ-ಶ್ರೀಮಂತ ಎನ್ನುವುದು ವಿದ್ಯೆಯಲ್ಲಿ ಇಲ್ಲ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಫೆಸ್ಟ್ ಗೆ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿ ತಂಡವು ಬಹಳ ಸಂಯಮದಿಂದ, ಶಿಸ್ತಿನಿಂದ ವರ್ತಿಸಿರುವುದು ಶ್ಲಾಘನೀಯ. ಬಡವ-ಶ್ರೀಮಂತ ಎನ್ನುವುದು ವಿದ್ಯೆಯಲ್ಲಿ ಇಲ್ಲ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ತೋರ್ಪಡಿಸುವಂತಾಗಬೇಕು ಎಂದರು.


ಭಾಗವಹಿಸಿದ ಕಾಲೇಜುಗಳು:
ಫೆಸ್ಟ್ ನಲ್ಲಿ ಕೆನರಾ ಕಾಲೇಜು ಮಂಗಳೂರು, ಅಂಬಿಕಾ ಕಾಲೇಜು ಪುತ್ತೂರು ಯೂನಿವರ್ಸಿಟಿ ಕಾಲೇಜು ಮಂಗಳೂರು, ಲಕ್ಷ್ಮಿ ಮೆಮೋರಿಯಲ್ ಕಾಲೇಜು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಎಸ್.ಡಿ.ಎಂ ಕಾಲೇಜು ಮಂಗಳೂರು, ಕಲ್ಲಡ್ಕ ಶ್ರೀರಾಮ ಕಾಲೇಜು, ವಿವೇಕಾನಂದ ಕಾಲೇಜು ಆಫ್ ಎಜ್ಯುಕೇಶನ್, ಅನುಗ್ರಹ ವುಮನ್ಸ್ ಕಾಲೇಜು, ಮೂಡಬಿದ್ರೆ ಆಳ್ವಾಸ್ ಕಾಲೇಜು, ಸವಣೂರು ವಿದ್ಯಾರಶ್ಮಿ ಕಾಲೇಜು, ಕೊಣಾಜೆ ಯೂನಿವರ್ಸಿಟಿ ಕಾಲೇಜ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಮಂಗಳೂರು, ಸೈಂಟ್ ಮಿಲಾಗ್ರಿಸ್ ಕಾಲೇಜು, ಸೈಂಟ್ ಆಗ್ನೇಸ್ ಕಾಲೇಜು, ಸುಳ್ಯ ಸರಕಾರಿ ಪದವಿ ಕಾಲೇಜು, ಕುಂಬ್ರ ಮರ್ಕಝುಲ್ ಕಾಲೇಜು, ಬೆಳ್ತಂಗಡಿ ಸರಕಾರಿ ಪದವಿ ಕಾಲೇಜು, ಶ್ರೀದೇವಿ ಕಾಲೇಜು, ಯೂನಿವರ್ಸಿಟಿ ಕಾಲೇಜು ನೆಲ್ಯಾಡಿ, ಬಂಟ್ವಾಳ ಸರಕಾರಿ ಪದವಿ ಕಾಲೇಜು, ಸೈಂಟ್ ಆನ್ಸ್ ಪದವಿ ಕಾಲೇಜು, ಗುರುದೇವಾ ಕಾಲೇಜು, ವಾಮದಪದವು ಸರಕಾರಿ ಪದವಿ ಕಾಲೇಜು, ಡಾ.ಎಂ.ವಿ ಶೆಟ್ಟಿ ಕಾಲೇಜು ಮಂಗಳೂರು, ಉಡುಪಿ ಕಾಲೇಜು ಸಹಿತ ಸುಮಾರು 40 ಕಾಲೇಜು ತಂಡಗಳು ಭಾಗವಹಿಸಿದ್ದವು.

ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಕಾರ್ಯಕ್ರದ ಸಂಯೋಜಕಿ ಪ್ರಭಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕೆ.ಸಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ರಶ್ಮಿ ಕೆ ವಂದಿಸಿ, ವಿಜೇತರ ಪಟ್ಟಿ ವಾಚಿಸಿದರು. ಅಂತಿಮ ಬಿಕಾಂನ ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ವಿವೇಕಾನಂದ ಬಿ.ಎಡ್ ಕಾಲೇಜು ಚಾಂಪಿಯನ್, ಫಿಲೋಮಿನಾ ರನ್ನರ್ಸ್..
ಒಟ್ಟು 12 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ಅಂತಿಮವಾಗಿ ವಿವೇಕಾನಂದ ಬಿ.ಎಡ್ ಕಾಲೇಜು ಆಫ್ ಎಜ್ಯುಕೇಶನ್ ರೋಲಿಂಗ್ ಟ್ರೋಫಿಯೊಂದಿಗೆ ಚಾಂಪಿಯನ್ ಎನಿಸಿಕೊಂಡಿದ್ದು, ಸಂತ ಫಿಲೋಮಿನಾ ಕಾಲೇಜು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ತೃತೀಯ ಸ್ಥಾನಿಯಾಗಿ ಹೊರ ಹೊಮ್ಮಿತು. ವಿವಿಧ ಸ್ಪರ್ಧಾ ವಿಭಾಗಗಳಾದ ಬೆಸ್ಟ್ ಮ್ಯಾನೇಜರ್ ಆಗಿ ವಿಯೋಲ ಡಿ’ಸಿಲ್ವ(ಸ್ಕೂಲ್ ಆಫ್ ಸೋಶಿಯಲ್ ವರ್ಕ್), ಮಾರ್ಕೆಟಿಂಗ್ ನಲ್ಲಿ ಅಂಬಿಕಾ ಕಾಲೇಜು(ಪ್ರ), ಸ್ಕೂಲ್ ಆಫ್ ಸೋಶಿಯಲ್ ವರ್ಕ್(ದ್ವಿ), ಅಂಬಿಕಾ(ತೃ), ಸ್ಟೋರಿ ಬಿಲ್ಡಿಂಗ್ ನಲ್ಲಿ ವಿದ್ಯಾರಶ್ಮಿ ಸವಣೂರು(ಪ್ರ), ವಿವೇಕಾನಂದ ಕಾಲೇಜು ಆಫ್ ಎಜ್ಯುಕೇಶನ್(ದ್ವಿ), ಅಂಬಿಕಾ(ತೃ), ಸಮೂಹ ನೃತ್ಯದಲ್ಲಿ ಎಸ್.ಡಿ.ಎಂ ಮಂಗಳೂರು (ಪ್ರ), ಸೈಂಟ್ ಆಗ್ನೆಸ್ (ದ್ವಿ), ವಿವೇಕಾನಂದ ಕಾಲೇಜು ಆಫ್ ಎಜ್ಯುಕೇಶನ್(ತೃ), ಪಾಟ್ ಡೆಕೋರೇಶನ್ ನಲ್ಲಿ ಮಿಲಾಗ್ರಿಸ್ ಕಾಲೇಜು(ಪ್ರ), ಫಿಲೋಮಿನಾ ಕಾಲೇಜು(ದ್ವಿ), ಕಲ್ಲಡ್ಕ ಶ್ರೀ ರಾಮ ಕಾಲೇಜು (ತೃ), ಯಕ್ಷಗಾನ ಮುಖವರ್ಣಿಕೆಯಲ್ಲಿ ವಾಮದಪದವು ಸರಕಾರಿ ಕಾಲೇಜು (ಪ್ರ), ವಿವೇಕಾನಂದ ಕಾಲೇಜು (ದ್ವಿ), ಹಂಪನಕಟ್ಟೆ ಯೂನಿವರ್ಸಿಟಿ ಕಾಲೇಜು(ತೃ), ಮೋಕ್ಟೇಲ್ ಮೇಕಿಂಗ್ ನಲ್ಲಿ ವಿವೇಕಾನಂದ ಕಾಲೇಜು (ಪ್ರ), ಸುಳ್ಯ ಸರಕಾರಿ ಕಾಲೇಜು (ದ್ವಿ), ಲಕ್ಷ್ಮೀ ಮೆಮೋರಿಯಲ್ ಕಾಲೇಜು (ತೃ), ವೆಬ್ ಡಿಸೈನಿನಲ್ಲಿ ಫಿಲೋಮಿನಾ ಕಾಲೇಜು (ಪ್ರ), ಸವಣೂರು ವಿದ್ಯಾರಶ್ಮಿ(ದ್ವಿ), ಕಲ್ಲಡ್ಕ ಶ್ರೀರಾಮ ಕಾಲೇಜು (ತೃ), ರೀಲ್ಸ್ ನಲ್ಲಿ ಫಿಲೋಮಿನಾ (ಪ್ರ), ಸೈಂಟ್ ಆಗ್ನೆಸ್ (ದ್ವಿ), ಕಲ್ಲಡ್ಕ ಶ್ರೀರಾಮ ಕಾಲೇಜು (ತೃ), ಮಿಸ್ಟರ್ ಕೃತ್ವದಲ್ಲಿ ಕೆನರಾ ಕಾಲೇಜು(ಪ್ರ), ಎಸ್.ಡಿ.ಎಂ ಮಂಗಳೂರು (ದ್ವಿ), ಮಿಸ್ ಕೃತ್ವದಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್(ಪ್ರ), ಫಿಲೋಮಿನಾ ಕಾಲೇಜು (ದ್ವಿ), ಬಲೆ ಬುಲಿಪಾಲೆಯಲ್ಲಿ ವಿವೇಕಾನಂದ (ಪ್ರ), ಹಂಪನಕಟ್ಟೆ ಯೂನಿವರ್ಸಿಟಿ ಕಾಲೇಜ್(ದ್ವಿ), ಸುಳ್ಯ ಸರಕಾರಿ ಕಾಲೇಜು(ತೃ), ಫೇಸ್ ಆಫ್ ಕೃತ್ವದಲ್ಲಿ ಕಲ್ಲಡ್ಕ ಶ್ರೀರಾಮ ಕಾಲೇಜು(ಪ್ರ) ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ.

ಮಾ.23ರಂದು ಕಾಲೇಜಿನಲ್ಲಿ..
ಮಾ. 23 ರಂದು ಸಂಜೆ ಕಾಲೇಜು ವಾರ್ಷಿಕೋತ್ಸವ ಅಕ್ಷಯ ವೈಭವ ಜರಗಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ವಹಿಸಲಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಆಳ್ವಾಸ್ ಎಜ್ಯುಕೇಶನಲ್ ವಿದ್ಯಾಸಂಸ್ಥೆಯ ಚೇರ್ ಮ್ಯಾನ್ ಡಾ.ಮೋಹನ್ ಆಳ್ವ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಲಯನ್ಸ್ ಜಿಲ್ಲೆ 317ಡಿ ಇದರ ಮಾಜಿ ಜಿಲ್ಲಾ ಗವರ್ನರ್ ಹಾಗೂ ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ನ ಡಾ.ಗೀತಪ್ರಕಾಶ್, ಕುಂಬ್ರ ಬೂಡಿಯಾರು ಗ್ಯಾಸ್ ಏಜೆನ್ಸಿಯ ಮಾಲಕ ಬೂಡಿಯಾರು ರಾಧಾಕೃಷ್ಣ ರೈಯವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here