ಪುತ್ತೂರು: ಚೇತನ ಫೌಂಡೇಶನ್ ಕರ್ನಾಟಕವು ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಜನ್ಮದಿನದ ಸವಿನೆನಪಿಗಾಗಿ ಮಾರ್ಚ್ 23 ಮತ್ತು 24ರಂದು ಧಾರವಾಡದ ರಂಗಾಯಣದಲ್ಲಿ ಆಯೋಜಿಸಲಾದ ಕರ್ನಾಟಕ ಚಲನಚಿತ್ರೋತ್ಸವ 2024 ರಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಪ್ರತಿಭೆಗಳನ್ನು ಗುರುತಿಸಿ ಪುನೀತ ಪ್ರಶಸ್ತಿ ಹಾಗೂ ರಾಜ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ( ಸ್ವಾಯತ್ತ ) ಕಾಲೇಜಿನ ತೃತೀಯ ಬಿ ಎ ಪತ್ರಿಕೋದ್ಯಮ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ ರವರನ್ನು ಬಹುಮುಖ ಪ್ರತಿಭೆ ಎಂದು ಗುರುತಿಸಿ ಪ್ರಸಕ್ತ ಸಾಲಿನ “ಪುನೀತ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು. ಇವರು ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಅಡ್ಡಂತ್ತಡ್ಕ ಮನೆಯ ಬಾಲಕೃಷ್ಣ ಹಾಗೂ ಚಿನ್ನಮ್ಮ ದಂಪತಿಯ ಪುತ್ರಿ.