ಪುತ್ತೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ಶ್ರೀ ದುರ್ಗಾಭಜನ ಮಂದಿರದ ವಠಾರದಲ್ಲಿ 24ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ,ಪ್ರತಿಭಾ ಪುರಸ್ಕಾರ ಧಾರ್ಮಿಕ ಸಭೆ ನಡೆಯಿತು.
ಭಜನಾ ಮಂದಿರದ ಗೌರವಾಧ್ಯಕ್ಣ ಗಿರಿಶಂಕರ ಸುಲಾಯ ಅವರು ಧಾರ್ಮಿಕ ಉಪನ್ಯಾಸ ನೀಡಿ ,ಮಕ್ಕಳಿಗೆ ಎಳವೆಯಲ್ಲೇ ಸಂಸ್ಕಾರವನ್ನು ಕಲಿಸುವ ಮೂಲಕ ಅವರನ್ನು ಉತ್ತಮ ನಾಗರಿಕನನ್ನಾಗಿ ಮಾಡಬೇಕು.ನಮ್ಮ ಧರ್ಮದ ಆಚಾರ-ವಿಚಾರಗಳನ್ನು ಮಕ್ಕಳಿಗೆ ತಿಳಿ ಹೇಳುವ ಮೂಲಕ ಅವರಲ್ಲಿಯೂ ಧಾರ್ಮಿಕ ವೈಚಾರಿಕತೆ ಬೆಳೆಸಬೇಕು ಎಂದರು.
2025ರಲ್ಲಿ ಬೆಳ್ಳಿಹಬ್ಬ ಸಂಭ್ರಮ
ಭಜನಾ ಮಂಡಳಿ ಆರಂಭವಾಗಿ 2025ಕ್ಕೆ 25 ವರ್ಷ ತುಂಬುವ ನಿಟ್ಟಿನಲ್ಲಿ ಮುಂದಿನ ವರ್ಷ ಅದ್ದೂರಿ ಹಾಗೂ ಮಾದರಿ ಬೆಳ್ಳಿಹಬ್ಬವನ್ನು ಆಚರಿಸಬೇಕು.ಈ ನಿಟ್ಟಿನಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.
ಸವಣೂರು ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಶುಭ ಹಾರೈಸಿದರು.ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್. ಬಂಬಿಲ ಅವರು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಸೀತಾರಾಮ ಗೌಡ ಕಂಬಳತಡ್ಡ ಬಂಬಿಲ ಅವರು ಉಪಸ್ಥಿತರಿದ್ದರು.
ಅರುಣ್ ಕುಮಾರ್ ಪುತ್ತಿಲ ಭೇಟಿ
ಕಾರ್ಯಕ್ರಮಕ್ಕೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಭಜನಾ ಮಂಡಳಿಯ ವತಿಯಿಂದ ಗೌರವಿಸಲಾಯಿತು.
ಸಾಧಕರಿಗೆ ಅಭಿನಂದನೆ
ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ಸಾಲಿನ ಸಾಧಕರಾದ ನೀಕ್ಷಾ ,ಚೈತನ್ಯ, ಮಹೇಶ್, ಅಭಿಷೇಕ್ ,ನವನೀತ್ ರೈ ,ಗೌತಮ್ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್‌ಗೆ ಆಯ್ಕೆಯಾದ ದೇಶದ 42 ವಿದ್ಯಾರ್ಥಿಗಳಲ್ಲಿ ಒಬ್ಬಳಾದ ವೀಣಾ ಶ್ರೀ ಎ.ಎಲ್ ಅವರನ್ನು ಅಭಿನಂದಿಸಲಾಯಿತು.
ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಪರಣೆ ಸ್ವಾಗತಿಸಿದರು, ವೀಣಾ ಶ್ರೀ ಎ.ಎಲ್ ವಂದಿಸಿದರು. ವಾಣಿ ಶ್ರೀ ಎ.ಎಲ್. ಅವರು ಕಾರ್ಯಕ್ರಮ ನಿರೂಪಿಸಿದರು.