




ಪುತ್ತೂರು: ವಿಕಲ ಚೇತನರ ಕಾರ್ಯಕರ್ತರಾಗಿ ಎಂ.ಆರ್. ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲಬ್ಯೂ ಆಗಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತಿರುವ ನಮಗೆ ಕನಿಷ್ಠ ವೇತನ ಮಾಡಿಸುವಂತೆ ಬೆಳಗಾವಿ ಅಧಿಕವೇಶನದಲ್ಲಿ ಸರಕಾರ ಮತ್ತು ಮುಖ್ಯಮಂತ್ರಿಯರನ್ನು ಒತ್ತಾಯಿಸುವಂತೆ ರಾಜ್ಯ ವಿಶೇಷ ಚೇತನರ ಕಾರ್ಯಕರ್ತರ ರಾಜ್ಯ ಸಮಿತಿಯಿಂದ ಪುತ್ತೂರು ಶಾಸಕರಿಗೆ ಮನವಿ ಮಾಡಲಾಯಿತು.



ರಾಜ್ಯದಲ್ಲಿರುವ ಎಲ್ಲ ಗ್ರಾಮ ನಗರ ಹಾಗೂ ತಾಲ್ಲೂಕು ಪಂಚಾಯತ್ ಗಳಲ್ಲಿ ವಿಕಲ ಚೇತನರ ಕಾರ್ಯಕರ್ತರಾಗಿ, ಎಂ ಆರ್ ಡಬ್ಲ್ಯೂ ವಿ ಆರ್ ಡಬ್ಲ್ಯೂ ಯು ಆರ್ ಡಬ್ಲ್ಯೂ ಆಗಿ ಕಳೆದ ಹದಿನೇಳು ವರ್ಷ ಗಳಿಂದ ಸೇವೆ ಸಲ್ಲಿಸುತ್ತಿದು, ಸರ್ಕಾರದ ಎಲ್ಲಾ ಸವಲತ್ತುಗಳನ್ನು ವಿಕಲ ಚೇತನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದು ಮತ್ತು ಈಗಾಗಲೇ ಇ ಹಾಜರಾತಿ ಬಂದಿದ್ದು ಮತ್ತು ಕಾರ್ಯಕರ್ತರು ಅತ್ಯಂತ ಕಡಿಮೆ ಗೌರವ ಧನ ದಿಂದ ಜೀವನ ಸಾಗಿಸುತ್ತಿದ್ದು ಇವತ್ತಿನ ಬೆಲೆಯೇರಿಕೆಯ ಈ ದಿನಗಳಲ್ಲಿ ಕುಟುಂಬ ಪೋಷಣೆ ಮಾಡುವುದೇ ಕಷ್ಟ ವಾಗುತ್ತಿದ್ದು ಆದ್ದರಿಂದ ಬರುವ ಅಧಿವೇಶನದಲ್ಲಿ ಎಲ್ಲಾ ಕಾರ್ಯಕರ್ತರಿಗೆ ಕನಿಷ್ಠ ವೇತನ ಮಾಡಿಸಲು ಸರ್ಕಾರ ಮತ್ತು ಮುಖ್ಯಮಂತ್ರಿ ಅವರನ್ನು ಒತ್ತಾಯ ಮಾಡಬೇಕು ಎಂದು ಮನವಿ ನೀಡಲಾಯಿತು.





ಈ ವೇಳೆ ರಾಜ್ಯ ಅಧ್ಯಕ್ಷ, ಸುಳ್ಯ ನಗರ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಸುಳ್ಯ, ಪುತ್ತೂರು ತಾಲೂಕು ಪಂಚಾಯತ್ ಎಂ ಆರ್ ಡಬ್ಲ್ಯೂ ಮತ್ತು ಸಲಹೆ ಗಾರರಾದ ನವೀನ್ ಕುಮಾರ್ ರಾಜ್ಯ ಕಾರ್ಯದರ್ಶಿ ಮಡಿಕೇರಿ ಯ, ವಿ ಆರ್ ಡಬ್ಲ್ಯೂ ತಿರುಮಲೇಶ್ವರ, ರಾಜ್ಯ ಸಮಿತಿ ಸದಸ್ಯರಾದ ಕಡಬದ ವಿ ಆರ್ ಡಬ್ಲ್ಯೂ ಮುತ್ತಪ್ಪ, ಜಿಲ್ಲಾ ಮುಂದಾಳು ಪುತ್ತೂರು ವಿ ಆರ್ ಡಬ್ಲ್ಯೂ ರಫೀಕ್, ಮೊದಲಾದವರು ಜೊತೆಗಿದ್ದರು.









