ಪುತ್ತೂರು: ಕಲಿಕೆ ಮತ್ತು ಕ್ರೀಡೆಯಲ್ಲಿ ಸಮಾನ ಸಾಧನೆ ಮಾಡುವವರು ವಿರಳ. ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಹನ್ನೆರಡು ಮಂದಿ ಕ್ರೀಡಾಪಟುಗಳಲ್ಲಿ ಒರ್ವರಾಗಿರುವ ಸವಣೂರಿನ ಜನನಿ ಸಿ,ರವರು ಕಲಿಕೆಯಲ್ಲೂ ಸಾಧನೆ ಮಾಡಿ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಯಾಗಿದ್ದಾರೆ.
ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ಸವಣೂರಿನ ಜನನಿ ಸಿ,ರವರು ರಾಜ್ಯ ಮಟ್ಟದ ಕಬಡ್ಡಿಯಲ್ಲಿ ಬೆಳ್ಳಿ ಪದಕ ಗಳಿಸಿ, ರಾಷ್ಟ್ರ ಮಟ್ಟದ ಕಬಡ್ಡಿಯಲ್ಲೂ ಭಾಗವಹಿಸಿದ್ದು, ಇವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 96.83 ಅಂಕಗಳಿಸಿದ್ದಾರೆ. ಜನನಿ ಸಿ, ರವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸವನ್ನು ಪೂರೈಸಿರುತ್ತಾರೆ. ಜನನಿ ಸಿ, ರವರು ಸವಣೂರು ಗ್ರಾಮದ ಚೌಕಿಮಠ ಬೆಳಿಯಪ್ಪ ಗೌಡ ಮತ್ತು ಮೋಹಿನಿ ಎನ್ ರವರ ಪುತ್ರಿ.