ಪುತ್ತೂರು: ಹಾರಾಡಿ ನಿವಾಸಿ ದಿ. ನಾರಾಯಣ ನಾಯ್ಕ ಅವರ ಪತ್ನಿ ರಾಜೇಶ್ವರಿ ನಾಯ್ಕ್ (82 ವ.) ರವರು ಅಸೌಖ್ಯದಿಂದ ಹಾರಾಡಿಯ ಮಗಳ ಮನೆಯಲ್ಲಿ ಏ.14ರಂದು ನಿಧನರಾದರು.
ಮೃತರು ಪುತ್ರಿಯರಾದ ಗೀತಾ ಕೃಷ್ಣ ಬೆಂಗಳೂರು, ಅನಿತಾ ಉದಯ ಕುಮಾರ್, ಅಳಿಯಂದಿರಾದ ನಿವೃತ್ತ ರೈಲ್ವೆ ಉದ್ಯೋಗಿ ಕೃಷ್ಣ ಶೆಟ್ಟಿ ಕುಂಟಿನಿ, ಸುಧೀರ್ ಎಂಟರ್ ಪ್ರೈಸಸ್ನ ಉದಯ ಕುಮಾರ್ ನಾಯ್ಕ್, ಮೊಮ್ಮಕ್ಕಳಾದ ನಿತಿನ್, ನಿಶಿತಾ, ಅಕ್ಷತಾ, ಆಶಿತಾ, ಆಶಿಷ್ ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.