ಅಧ್ಯಕ್ಷರಾಗಿ ಕರುಣಾಕರ್ ರೈ ದೇರ್ಲ, ಕಾರ್ಯದರ್ಶಿಯಾಗಿ ಪ್ರೇಮಾನಂದ ಬಿ., ಉಪಾಧ್ಯಕ್ಷರಾಗಿ ಮಾಧವ ಬಿ.ಕೆ, ಗಂಗಾಧರ್, ಕೋಶಾಧಿಕಾರಿಯಾಗಿ ಶ್ರೀಧರ ಗೌಡ
ಪುತ್ತೂರು: ಕೂರ್ನಡ್ಕ ಮದಕ ಆರಾಧ್ಯ ಲೇಔಟ್ ನಲ್ಲಿ ಸುಮಾರು ರೂ.8ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಆರಾಧ್ಯಕಟ್ಟೆಯು ಏ.14ರಂದು ಆಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನೆರವೇರಿತು.
ಅಧ್ಯಕ್ಷರಾಗಿ ದರ್ಬೆ ಅಶ್ವಿನಿ ಹೊಟೇಲ್ ಮಾಲಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಷನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲ, ಕಾರ್ಯದರ್ಶಿಯಾಗಿ ಪುತ್ತೂರು ಅಬಕಾರಿ ಅಧಿಕಾರಿ ಪ್ರೇಮಾನಂದ ಬಿ, ಉಪಾಧ್ಯಕ್ಷರುಗಳಾಗಿ ನಿವೃತ್ತ ಸೈನಿಕ, ಪುತ್ತೂರು ತಾಲೂಕು ಮಾಜಿ ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಧವ ಗೌಡ ಬಿ.ಕೆ ಹಾಗೂ ದರ್ಬೆ ನ್ಯೂ ಮಂಗಳಾ ಹೊಟೇಲ್ ನ ಮಾಲಕ ಗಂಗಾಧರ, ಕೋಶಾಧಿಕಾರಿಯಾಗಿ ನಿವೃತ್ತ ಕ್ಯಾಂಪ್ಕೊ ಉದ್ಯೋಗಿ ಎಂ.ಶ್ರೀಧರ ಗೌಡ, ಜೊತೆ ಕಾರ್ಯದರ್ಶಿಗಳಾಗಿ ಮದಕ ಕನಸು ಪಿ.ಜಿಯ ಮಾಲಕಿ ದಿವ್ಯಪ್ರಭು ಹಾಗೂ ದರ್ಬೆ ದೀಪ್ ಏರ್ ಕಂಡಿಷನಿಂಗ್ ಆಂಡ್ ರೆಫ್ರಿಜರೇಟರ್ ನ ದೀಪಕ್ ಕೆ.ಮದಕ, ಸಂಘಟನಾ ಕಾರ್ಯದರ್ಶಿಯಾಗಿ ಅಮಿತ್ ಪ್ರಭು ಮದಕರವರುಗಳು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಸಾದ್ ವಿ.ನಾಯ್ಕ್, ಸತ್ಯನಾರಾಯಣ ಭಟ್, ವಿಜಯ ಕುಮಾರ್, ಮಮತ, ಶ್ರೀಧರ, ಆನಂದ ಆಚಾರ್ಯ, ಕೃಷ್ಣಾನಂದ ನಾಯಕ್ ರವರು ಆಯ್ಕೆಯಾಗಿದ್ದಾರೆ.