ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನ ವಿವಿಧೆಡೆಯಿಂದ ಹರಿದು ಬಂದ ಹೊರೆಕಾಣಿಕೆ

1

ಪುತ್ತೂರು:ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.21ರಿಂದ 28ರ ತನಕ ನಡೆಯಲಿರುವ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವಕ್ಕೆ ಏ.20ರಂದು ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.ಹಸಿರುವಾಣಿ ಸಮಿತಿ ಸಂಚಾಲಕ ಡಾ.ಸುರೇಶ್ ಪುತ್ತೂರಾಯರವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಭಾಗಗಳ ಭಕ್ತಾದಿಗಳಿಂದ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಗಿ ಹೊಸ ಇತಿಹಾಸ ಸೃಷ್ಟಿಯಾಗಿದೆ.


ತಾಲೂಕಿನ ವಿವಿಧ ಗ್ರಾಮಗಳ, ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳ ಮೂಲಕ ಸಂಗ್ರಹಗೊಂಡ ಹಸಿರುವಾಣಿಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜಮಾವಣೆಗೊಂಡಿತು.ಸಂಜೆ ಹೊರೆಕಾಣಿಕೆ ಮೆರವಣಿಗೆಯು ನಡೆಯಿತು.ದೇವಸ್ಥಾನದ ಬಳಿಯಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಅಶೋಕ್ ಕುಮಾರ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಅರ್ಚಕರೂ ಆಗಿರುವ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುಧಾಕರ ರಾವ್ ಆರ್ಯಾಪು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.ಬಳಿಕ ವಾಹನ ಮೆರವಣಿಗೆ ಮೂಲಕ ಸಾಗಿದ ಹೊರೆಕಾಣಿಕೆಯು ಮುಖ್ಯರಸ್ತೆ, ದರ್ಬೆ, ಮುಕ್ರಂಪಾಡಿ, ಸಂಪ್ಯ ತನಕ ಸಾಗಿ ಅಲ್ಲಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ದೇವಸ್ಥಾನ ತಲುಪಿತು.


ವಿದ್ಯಾನಿಽ ಸರಸ್ವತಿ ಭಜನಾ ಮಂಡಳಿ ಕೈಕಾರ, ಮಹಮ್ಮಾಯಿ ಭಜನಾ ಮಂಡಳಿ ಪುಣಚ, ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ಶನೀಶ್ವರ ಭಜನಾ ಮಂಡಳಿ ಬನ್ನೂರು, ಷಣ್ಮುಖ ಕುಣಿತ ಭಜನಾ ಮಂಡಳಿ ಮುಂಡೂರು ಇವರಿಂದ ಕುಣಿತ ಭಜನೆ, ಬೊಂಬೆ ಕುಣಿತ, ಕೀಲು ಕುದುರೆ, ಚೆಂಡೆ, ಬ್ಯಾಂಡ್, ವಾಲಗಗಳು ಮೆರವಣಿಗೆಯಲ್ಲಿ ಆಕರ್ಷಣೆಯಾಗಿತ್ತು.ಹಸಿರು ಹೊರೆಕಾಣಿಕೆ ತುಂಬಿದ ನೂರಾರು ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂದವು.ದೇವಸ್ಥಾನಕ್ಕೆ ಆಗಮಿಸಿದ ಬಳಿಕ ದೇವರ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಅಕ್ಕಿ, ಎಣ್ಣೆ, ತರಕಾರಿ, ಸಕ್ಕರೆ, ಬೇಳೆಕಾಳು, ಬೆಲ್ಲ, ತೆಂಗಿನಕಾಯಿ, ಸಿಯಾಳ ಮತ್ತಿತರ ಸುವಸ್ತುಗಳನ್ನು ಉಗ್ರಾಣದಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಯಿತು.


ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗೌರವಾಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ, ಸಂಜೀವ ಪೂಜಾರಿ ಕೂರೇಲು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಧನುಷ್ ಹೊಸಮನೆ, ಕೋಶಾಧಿಕಾರಿ ವಿಜಯ ಬಿ.ಎಸ್., ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಮಹಾಬಲ ರೈ ವಳತ್ತಡ್ಕ, ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ರಾಮ ಭಟ್ ಮಚ್ಚಿಮಲೆ, ನಾರಾಯಣ ನಾಯ್ಕ ಗೆಣಸಿನಕುಮೇರು, ಸದಸ್ಯರಾದ ಯತೀಶ್ ದೇವ ಸಂಟ್ಯಾರ್, ನಾಗೇಶ್ ಸಂಪ್ಯ, ಅಭಿಲಾಷ್ ರೈ ಬಂಗಾರಡ್ಕ, ಚೇತನ್ ಗೌಡ ದೇವಸ್ಯ, ರಾಮಚಂದ್ರ ಕುಲಾಲ್, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕಂಬಳತ್ತಡ್ಕ, ಸೀತಾರಾಮ ರೈ ಕೈಕಾರ, ಸದಸ್ಯರಾದ ದಾಮೋದರ ರೈ ತೊಟ್ಲ, ದೇವಯ್ಯ ಗೌಡ, ಕಿಶೋರ್ ಮರಿಕೆ, ಹೊರೆಕಾಣಿಕೆ ಸಮಿತಿ ಸಹ ಸಂಚಾಲಕ ಹರೀಶ್ ನಾಯಕ್ ವಾಗ್ಲೆ, ರೋಹಿತ್ ಕಾರ್ಪಾಡಿ, ಪ್ರಮುಖರಾದ ಕೃಷ್ಣಪ್ರಸಾದ್ ನಡ್ಸಾರ್, ಭಗವಾನ್‌ದಾಸ್ ರೈ, ಸುಬ್ಬು ಸಂಟ್ಯಾರ್, ಶರತ್ ಆಳ್ವ ಕೂರೇಲು, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರದೀಪಕೃಷ್ಣ, ನಗರ ಸಭಾ ಸದಸ್ಯ ರಮೇಶ್ ರೈ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಲಕ್ಷ್ಮಣ ಬೈಲಾಡಿ, ಸುಹಾಸ್ ಮರಿಕೆ, ಆರ್ಯಾಪು ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ಸಂದೀಪ್ ರೈ ಚಿಲ್ಮೆತ್ತಾರು, ನವೀನ್ ಕುಲಾಲ್, ಸದಾಶಿವ ಶೆಟ್ಟಿ ಪಟ್ಟೆ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.


ಗೊನೆ ಮುಹೂರ್ತ, ಬಲ್ಲೇರಿ ಮಲೆಯಿಂದ ಮೃತ್ತಿಕೆ ಪ್ರಸಾದ:
ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದು ಏ.28ರಂದು ನಡೆಯಲಿರುವ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಬೆಳಿಗ್ಗೆ ಗೊನೆ ಮುಹೂರ್ತ ನೆರವೇರಿತು.ನಂತರ ಕಾರ್ಪಾಡಿ ಸುಬ್ರಹ್ಮಣ್ಯ ದೇವರ ಮೂಲ ಸ್ಥಳ ಬಳ್ಳೇರಿಮಲೆಗೆ ತೆರಳಿ ಅಲ್ಲಿಂದ ಮೃತ್ತಿಕೆ ಪ್ರಸಾದವನ್ನು ದೇವಸ್ಥಾನಕ್ಕೆ ತರಲಾಯಿತು.


ಇಂದು ಕ್ಷೇತ್ರದಲ್ಲಿ…!:
ಬ್ರಹ್ಮಕಲಶೋತ್ಸವಕ್ಕೆ ಏ.21ರಂದು ಚಾಲನೆ ದೊರೆಯಲಿದ್ದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕ ಶಾಲೆ ಉದ್ಘಾಟನೆ, ಲಾಕರ್ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ, ಅತಿಥಿ ಕೊಠಡಿ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ, ನಂತರ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ತಾಂತ್ರಿಕ ವಿಽ ವಿಧಾನಗಳಿಗೆ ಚಾಲನೆ, ಸಂಜೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮನ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆದ ಬಳಿಕ ವಿದುಷಿ ಮಧುರಾ ಕಾರಂತ್ ಮೈಸೂರು ಇವರಿಂದ ಭರತನಾಟ್ಯ, ಅಭಿನಯ ಕಲಾವಿದರು ಪುತ್ತೂರು ಅಭಿನಯದ ‘ಮಣ್ಣ್’(ಕಾರ್ನಿಕದ) ತುಳು ನಿಗೂಢಮಯ ನಾಟಕ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

1 COMMENT

  1. ಹೊರೆಕಾಣಿಕೆ ಮೆರವಣಿಗೆ ಹೆಸರಿನಲ್ಲಿ ನಿನ್ನೆ ಪುತ್ತೂರು-ಸುಳ್ಯ ಹೆದ್ದಾರಿಯಲ್ಲಿ ಸುಮಾರು ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಧರ್ಮ, ದೇವರ ಹೆಸರಿನಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸಮಂಜಸ? ಹೊರೆಕಾಣಿಕೆ ಮೆರವಣಿಗೆಯನ್ನು ಸೀದಾ ವಾಹನಗಳ ಮೂಲಕ ಸಾಗಿಸಿದರೆ ಸಾಕಾಗುತ್ತಿರಲಿಲ್ಲವೇ? ಅದಕ್ಕಾಗಿ ಹೆದ್ದಾರಿ ಸಂಚಾರಕ್ಕೆ ಅಡಚಣೆ ಮಾಡುವುದು ಯಾವ ಧರ್ಮ ಹಾಗೂ ನ್ಯಾಯ? ಇದರಿಂದ ಎಷ್ಟೋ ಪ್ರಮಾಣದ ಪೆಟ್ರೋಲ್ ಹಾಗೂ ಡೀಸೆಲ್ ದಂಡವಾಗುತ್ತದೆ ಏಕೆಂದರೆ ವಾಹನಗಳು ಸ್ವಲ್ಪ ಸ್ವಲ್ಪವೇ ಮುಂದುವರಿಯಬೇಕಾಗಿರುವುದರಿಂದ ವಾಹನಗಳನ್ನು ಚಾಲನೆ ಸ್ಥಿತಿಯಲ್ಲಿಯೇ ತುಂಬಾ ಹೊತ್ತು ಇರಿಸಬೇಕಾಗುತ್ತದೆ. ಹೊರೆಕಾಣಿಕೆ ಮೆರವಣಿಗೆ ಏರ್ಪಡಿಸುವ ಪ್ರಬೃತಿಗಳು ಇಂಥ ವಿಷಯಗಳ ಬಗ್ಗೆ ಗಮನ ಹರಿಸುವುದು ಅಗತ್ಯ.

LEAVE A REPLY

Please enter your comment!
Please enter your name here