ಪುತ್ತೂರು: ಎ.30ರಂದು ನಡೆಯಬೇಕಾಗಿದ್ದ ಮಂಗಳೂರು ಬಂದರ್ನಲ್ಲಿರುವ ಝೀನತ್ ಬಕ್ಷ್ ಯತೀಂ ಖಾನಾದಲ್ಲಿ ಹಜ್ ಮತ್ತು ಉಮ್ರಾ ತರಬೇತಿ ಶಿಬಿರವನ್ನು ಮುಂದೂಡಲಾಗಿದ್ದು ತರಬೇತಿ ಶಿಬಿರವನ್ನು ಮೇ.4ರಂದು ಆಯೋಜನೆ ಮಾಡಲಾಗಿದೆ. ಬೆಳಗ್ಗೆ ಗಂಟೆ 9ರಿಂದ ಸಂಜೆ ಗಂಟೆ 5ರ ವರೆಗೆ ತರಬೇತಿ ಶಿಬಿರ ನಡೆಯಲಿದೆ. ಪವಿತ್ರ ಹಜ್ ನಿರ್ವಹಣೆಯ ವಿಧಿ ವಿಧಾನ ಆಚರಣಾ ಕ್ರಮ ಇತ್ಯಾದಿಗಳ ಕುರಿತು ತರಬೇತಿ ಕಾರ್ಯಗಾರ ನಡೆಯಲಿದೆ.
ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ಅಝ್ಹರಿ ದುವಾ ನೆರವೇರಿಸಲಿದ್ದಾರೆ. ಎಸ್.ಪಿ ಹಂಝ ಸಖಾಫಿ ಬಂಟ್ವಾಳ ಅವರು ಬ್ಯಾರಿ ಭಾಷೆಯಲ್ಲಿ ತರಬೇತಿ ನೀಡಲಿದ್ದು, ಮೌಲಾನಾ ಮಖ್ಬೂಲ್ ಹಝ್ರತ್ ಅವರು ಹನಫಿ ಬಾಂಧವರಿಗೆ ಉರ್ದು ಭಾಷೆಯಲ್ಲಿ ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫೋ: 0824-2424442 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಝೀನತ್ ಬಕ್ಷ್ ಯತೀಂ ಖಾನಾ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.