ಪುತ್ತೂರು: ಸುಮಾರು 31 ವರ್ಷ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಪುತ್ತೂರು ನಗರ ಪೊಲೀಸ್ ಠಾಣೆಯ ಎಎಸ್ಐ ಶ್ರೀಧರ್ ಮಣಿಯಾಣಿ ಅವರು ಎ.30ರಂದ ನಿವೃತ್ತಿ ಹೊಂದಲಿದ್ದಾರೆ.
ಶ್ರೀಧರ್ ಮಣಿಯಾಣಿ ಅವರು 1993ರಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ತರಬೇತಿ ಹಂತದಲ್ಲೇ ಕರ್ತವ್ಯ ನಿರ್ವಹಿಸಿ 1994ರಲ್ಲಿ ಪೂರ್ಣಾವತಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. 2೦೦೦ ಜೂನ್ ಕೊನೆಯ ತನಕ ಬಜ್ಪೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಮುಲ್ಕಿ ಠಾಣೆಗೆ ವರ್ಗಾವಣೆಗೊಂಡರು. ಅಲ್ಲಿ ಜು.9ರ ತನಕ ಕರ್ತವ್ಯ ನಿರ್ವಹಿಸಿ 2011ಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಅಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಪದೋನ್ನತಿ ಹೊಂದಿ 2011ರ ಅಗಸ್ಟ್ ತಿಂಗಳಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. 2014ಕ್ಕೆ ಸುಳ್ಯಕ್ಕೆ ವರ್ಗಾವಣೆಗೊಂಡ ಅವರು 2017ರಲ್ಲಿ ಎ.ಎಸ್.ಐ ಆಗಿ ಪದೋನ್ನತಿ ಹೊಂದಿ ಅಲ್ಲಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಎ.30ರಂದು ನಿವೃತ್ತಿ ಹೊಂದಲಿದ್ದಾರೆ. ಮೂಲತಃ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕುರಿಂಜ ನಿವಾಸಿಯಾಗಿರುವ ಶ್ರೀಧರ್ ಮಣಿಯಾಣಿ ಅವರು ಪಾಪೆಮಜಲು ಎಂಬಲ್ಲಿ ವಾಸ್ತವ್ಯ ಹೊಂದಿದ್ದಾರೆ. ಪತ್ನಿ ವೇದಾವತಿ ಗೃಹಿಣಿಯಾಗಿದ್ದು, ಪುತ್ರಿ ಧನ್ಯಶ್ರೀಯವರ ವಿವಾಹ ಇತ್ತೀಚೆಗೆ ನಡೆದಿದ್ದು, ಇನ್ನೋರ್ವ ಪುತ್ರಿ ಅಂತಿಮ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.