ಸವಣೂರಿನಲ್ಲಿ ಕಪಿಲಾ ಸ್ಟುಡಿಯೋ ಉದ್ಘಾಟನೆ

0

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಸವಣೂರಿಗೆ ಹೊಸ ಉದ್ಯಮಗಳು ಅಗತ್ಯ- ಸೀತಾರಾಮ ರೈ


ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಮೇ.3 ರಂದು ಕಪಿಲಾ ಸ್ಟುಡಿಯೋ ಶುಭಾರಂಭಗೊಂಡಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ದೀಪ ಬೆಳಗಿಸಿ, ಕಪಿಲಾ ಸ್ಟುಡಿಯೋವನ್ನು ಉದ್ಘಾಟಿಸಿ, ಮಾತನಾಡಿ ಸವಣೂರು ಅತ್ಯಂತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಹೊಸ ಹೊಸ ಉದ್ಯಮಗಳು ಸವಣೂರಿಗೆ ಅಗತ್ಯವಿದೆ. ಯುವಕರು ಹೆಚ್ಚಾಗಿ ಸ್ವ ಉದ್ಯೋಗದತ್ತ ತಮ್ಮ ಕಾಯಕವನ್ನು ಮಾಡಬೇಕು. ಭವಿತ್ ಇಡ್ಯಾಡಿರವರ ಮಾಲಕತ್ವದ ಕಪಿಲಾ ಸ್ಟುಡಿಯೋ ಸವಣೂರಿನಲ್ಲಿ ಉತ್ತಮವಾದ ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು.


ಪುತ್ತೂರು ಎಪಿಎಂಸಿ ನಿಕಟಪೂರ್ವಧ್ಯಕ್ಷ ಅಧ್ಯಕ್ಷ ದಿನೇಶ್ ಮೆದು, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ನಿಕಟಪೂರ್ವ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ, ಸವಣೂರು ಗ್ರಾ.ಪಂ, ಸದಸ್ಯರುಗಳಾದ ಸತೀಶ್ ಅಂಗಡಿಮೂಲೆ, ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಮಾಸ್ ಸಂಸ್ಥೆಯ ಸವಣೂರು ಶಾಖಾ ವ್ಯವಸ್ಥಾಪಕ ಯತೀಶ್, ಉದ್ಯಮಿಗಳಾದ ಹರಿಪ್ರಸಾದ್ ಅಂಗಡಿಮೂಲೆ, ಸಚಿನ್ ಸವಣೂರು, ಪದ್ಮನಾಭ ಆಚಾರ್ಯ, ಗುಣಪಾಲ ಗೌಡ ಇಡ್ಯಾಡಿ, ರಾಜೀವಿ ಇಡ್ಯಾಡಿ, ಗುಡ್ಡಪ್ಪ ಗೌಡ ಇಡ್ಯಾಡಿ, ನಾಗಮ್ಮ ಇಡ್ಯಾಡಿ, ಚೇತನ್,ಮೋಕ್ಷಿತ್, ಭವಿತ್, ರಂಜಿತ್, ಬೆನಸ ರಬ್ಬರ್ ಸೊಸೈಟಿ ಕಾರ್‍ಯದರ್ಶಿ ಅಚ್ಚುತ ಸವಣೂರು, ಶ್ರೀಧರ್ ಇಡ್ಯಾಡಿ, ರಮಾನಂದ ನಾಯಕ್ ಸವಣೂರು, ಕಿರಣ್ ಕೋಡಿಬೈಲು ಸೇರಿದಂತೆ ನೂರಾರು ಮಂದಿ ಆಗಮಿಸಿದರು. ಸವಣೂರು ಕಪಿಲಾ ಸ್ಟುಡಿಯೋ ಮಾಲಕ ಭವಿತ್ ಇಡ್ಯಾಡಿರವರು ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here