ನೆಲ್ಯಾಡಿ: ನವೀಕರಣಗೊಂಡಿರುವ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಉದನೆ ಸಂತ ತೋಮಸರ ಫೊರೇನಾ ದೇವಾಲಯದ ಪವಿತ್ರೀಕರಣ ವಿಧಿ ಮತ್ತು ದೇವಾಲಯ ಪ್ರತಿಷ್ಠಾವಿಧಿಗಳು ಹಾಗೂ ವಾರ್ಷಿಕ ಹಬ್ಬ ಮೇ.4 ಮತ್ತು 5ರಂದು ನಡೆಯಲಿದೆ ಎಂದು ಚರ್ಚ್ನ ಧರ್ಮಗುರು ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.4ರಂದು ಸಂಜೆ 3.30ಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕುಯಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್, ಇಎಇ ಆರ್ಚ್ ಡಯೋಸಿಸ್ ಆಫ್ ಸಿರಿಯನ್ ಆರ್ಥೋಡಕ್ಸ್ ಚರ್ಚ್ನ ಮೆಟ್ರೋಪೊಲಿಟನ್ ಮೋರ್ ಕ್ರಿಸೋಸ್ತೋಮೊಸ್ ಮಾರ್ಕೋಸ್, ಹೊನ್ನಾವರ ಮಿಷನ್ ಮೆಟ್ರೋಪೊಲಿಟನ್ ಮೋರ್ ಅಂತೋನಿಯೋಸ್ ಯಾಕೋಬ್ ಅವರಿಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಬಳಿಕ ನವ ನಿರ್ಮಿತ ದೇವಾಲಯದ ಉದ್ಘಾಟನೆ, ದೇವಾಲಯದ ಪವಿತ್ರೀಕರಣ, ದೇವಾಲಯ ಪ್ರತಿಷ್ಠಾಪನೆ, ವಿಜೃಂಭಣೆಯ ದಿವ್ಯ ಬಲಿಪೂಜೆಯು ಬಿಷಫ್ ಮಾರ್ ಲಾರೆನ್ಸ್ ಮುಕ್ಕುಯಿ, ಬಿಷಫ್ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಹಾಗೂ ಕುಟ್ರುಪ್ಪಾಡಿ ಚರ್ಚ್ನ ಧರ್ಮಗುರು ವೆ|ರೆ|ಫಾ| ವರ್ಗೀಸ್ ಪುದಿಯಡತ್ತ್ ಅವರ ಮುಖ್ಯ ಯಾಜಕತ್ವದಲ್ಲಿ ನಡೆಯಲಿದೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ, ಬಳಿಕ ಸಹ ಭೋಜನ ನಡೆಯಲಿದೆ. ರಾತ್ರಿ 8.30ರಿಂದ ಅಭಿಜಿತ್ ಕೊಲ್ಲಂ ಮತ್ತು ತಂಡದವರಿಂದ ಗಾನಮೇಳ ನಡೆಯಲಿದೆ.
ಮೇ.5ರಂದು ಸಂಜೆ 4ರಿಂದ ದಿವ್ಯ ಬಲಿಪೂಜೆ ನಡೆಯಲಿದೆ. ಪುತ್ತೂರು ಸಾನ್ತೋಮ್ ಗುರುಮಂದಿರದ ವೆ|ರೆ|ಫಾ| ರೋಬಿನ್ ಜೊಸೆಫ್ ಕೇಳಂಪರಂಬಿಲ್, ಅಡ್ಡಹೊಳೆ ಸಂತ ಜೋಸೆಫರ ದೇವಾಲಯದ ಧರ್ಮಗುರು ರೆ.ಫಾ.ಜೋಸೆಫ್ ಪಾಂಪಕ್ಕಲ್, ಶಿರಾಡಿ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರು ರೆ.ಫಾ.ಜೋಸೆಫ್ ಪೂದಕುಯಿಯಿಲ್, ನೆಲ್ಯಾಡಿ ಸಂತ ಅಲ್ಫೋನ್ಸ ದೇವಾಲಯದ ಧರ್ಮಗುರು ರೆ.ಫಾ.ಮ್ಯಾತ್ಯು ವೆಟ್ಟಂತಡತ್ತಿಲ್(ಹಬ್ಬದ ಸಂದೇಶ), ಸಹ ಧರ್ಮಗುರು ರೆ.ಫಾ.ಆಶಿಲ್ ಕಿಯಕ್ಕೇಕರಯಿಲ್ರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಲಿದೆ. ಸಂಜೆ ಭವ್ಯ ಮೆರವಣಿಗೆ, ರಾತ್ರಿ ಸಹಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.