





ಸವಣೂರು : ಕಡಬ ತಾಲೂಕಿನ ಸವಣೂರಿನ ಪದ್ಮಾಂಬಾ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ಟೈಲರಿಂಗ್ & ಮ್ಯಾಚಿಂಗ್ ಸೆಂಟರ್ ಓಂಕಾರ ಕಲೆಕ್ಷನ್ಸ್ ಮೇ.2ರಂದು ಶುಭಾರಂಭಗೊಂಡಿದೆ.
ನೂತನ ಸಂಸ್ಥೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಉದ್ಘಾಟಿಸಿದರು.



ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ., ಡಾ.ಸುಬ್ರಹ್ಮಣ್ಯ ಭಟ್ ,ಸಂಸ್ಥೆಯ ಮಾಲಕರಾದ ಮೋಹಿನಿ ವಿಶ್ವನಾಥ ಶೆಟ್ಟಿ ಬಂಬಿಲ,ಮಕ್ಕಳಾದ ವಿಶ್ವಜಿತ್ ಶೆಟ್ಟಿ, ವಿಖ್ಯಾತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





ಎಲ್ಲಾ ರೀತಿಯ ಟೈಲರಿಂಗ್ ಸಾಮಾಗ್ರಿಗಳು ಲಭ್ಯ
ಓಂಕಾರ ಕಲೆಕ್ಷನ್ಸ್ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಟೈಲರಿಂಗ್ ಸಾಮಾಗ್ರಿಗಳು ಲಭ್ಯವಿದ್ದು ,ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಮಾಲಕರಾದ ಮೋಹಿನಿ ವಿಶ್ವನಾಥ ಶೆಟ್ಟಿ ಅವರು ತಿಳಿಸಿದ್ದಾರೆ.








