ಪುತ್ತೂರು: ಎಸ್‌ಆರ್‌ಕೆ ಲ್ಯಾಡರ‍್ಸ್‌ನ 25ನೇ ವರ್ಷದ ರಜತ ಸಂಭ್ರಮದಲ್ಲಿ ಸರಣಿ 9ನೇ ಕಾರ್ಯಕ್ರಮವಾಗಿ ಭಾರತೀಯ ಕಿಸಾನ್ ಸಂಘ ಸುಳ್ಯ ಇದರ ಸಹಯೋಗದಲ್ಲಿ ಮೇ.5ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಕೃಷಿ ವಿಚಾರ ಸಂಕಿರಣ ನಡೆಯಲಿದೆ.
ಪ್ರಥಮ ಗೋಷ್ಠಿಯಲ್ಲಿ ಕೃಷಿಗೆ ನೀರಿನ ಸಮರ್ಪಕ ಬಳಕೆಯ ಕುರಿತು ಸುರೇಸ್ ಬಲ್ನಾಡು ಮತ್ತು ಅಡಿಕೆಯೊಂದಿಗೆ ಉಪವಾಣಿಜ್ಯ ಬೆಳೆಗಳ ಕುರಿತು ಅಜಿತ್ ಪ್ರಸಾದ್ ರೈ ಅವರು ವಿಚಾರ ವಿಚಾರಗೋಷ್ಠಿ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರು ಉದ್ಘಾಟಿಸಲಿದ್ದಾರೆ. ಸುಳ್ಯ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್ ಜಿ ಪ್ರಭಾಕರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾಬೋಧಿನಿ ಪ್ರೌಢಶಾಲೆಯ ಸಂಆಲಕ ಪಿ.ಜಿ.ಎಸ್ ಎನ್ ಪ್ರಸಾದ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.