ಪುಣ್ಚಪ್ಪಾಡಿ ನೇರೋಳ್ತಡ್ಕ : ಆದಿನಾಗಬ್ರಹ್ಮ ಮೊಗೇರ್ಕಳ ನೂತನ ಗರಡಿ, ಕೊರಗಜ್ಜ, ಗುಳಿಗ ದೈವದ ಕಟ್ಟೆಯ ಪುನರ್‌ ಪ್ರತಿಷ್ಠೆ ಹಾಗೂ ದೈವಗಳ ನೇಮ

0

ಸವಣೂರು : ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕದ ಆದಿನಾಗಬ್ರಹ್ಮ ಮೊಗೇರ್ಕಳ ನೂತನ ಗರಡಿ, ಕೊರಗಜ್ಜ, ಗುಳಿಗ ದೈವದ ಕಟ್ಟೆಯ ಪುನರ್‌ ಪ್ರತಿಷ್ಠೆ ಹಾಗೂ ದೈವಗಳ ನೇಮ ಎ.30 ರಿಂದ ಮೇ.2 ರವರೆಗೆ ವಿಜೃಂಭಣೆಯಿಂದ ಜರುಗಿತು.ಎ.30ರಂದು ಸವಣೂರು ಬಸದಿ ವಠಾರದಿಂದ ನೇರೋಳ್ತಡ್ಕದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಮೇ.1ರಂದು  ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ಬಿಂಬ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಗಣಹೋಮ, ಭಜನೆ, ಮಿಥುನ ಲಗ್ನದಲ್ಲಿ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಅನ್ನ ಸಂತರ್ಪಣೆ, ಸುರೇಶ ಆಚಾರ್ಯ, ಕೇಶವ ಕಲ್ಲೂರಾಯ ಬಂಬಿಲ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು.ಮೇ.1ರಂದು ಮೊದಲ್ಗೊಂಡು ಮೇ.2ರವರೆಗೆ ಆದಿ ನಾಗಬ್ರಹ್ಮ ಮೊಗೇರ್ಕಳ, ತನ್ನಿಮಾನಿಗ, ಗುಳಿಗ, ಕೊರಗಜ್ಜ ದೈವದ ನೇಮ, ಹರಕೆ, ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆದವು. ಜೀರ್ಣೋದ್ಧಾರಕ್ಕೆ ಸಹಕರಿಸಿದವರನ್ನು, ದಾನಿಗಳನ್ನು, ದೈವಸ್ಥಾನ ನಿರ್ಮಾಣ ಮಾಡಿದ ಕೆಲಸಗಾರರನ್ನು ಸನ್ಮಾನಿಸಲಾಯಿತು. ಕುಮಾರಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಅಂಗಾರ, ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ, ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್‌ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗಣೇಶ್‌ ನಿಡ್ವಣ್ಣಾಯ, ಮಹಾಬಲ ಶೆಟ್ಟಿ ಕೊಮ್ಮಂಡ, ಅಧ್ಯಕ್ಷ ಎ. ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಉಪಾಧ್ಯಕ್ಷ ಪಿ.ಡಿ. ಕೃಷ್ಣ ಕುಮಾರ್ ರೈ ದೇವಸ್ಯ, ಸಚಿನ್‌ ಕುಮಾರ್‌ ಜೈನ್, ಪ್ರಧಾನ ಕಾರ್ಯದರ್ಶಿ ಮಹೇಶ್‌ ಕೆ.ಸವಣೂರು, ಕೋಶಾಧಿಕಾರಿ ಸುಧಾಕರ ರೈ ದೇವಸ್ಯ, ಸದಸ್ಯರು, ಆಡಳಿತ ಸಮಿತಿ ಅಧ್ಯಕ್ಷ ಬಾಬು ಎನ್‌, ಉಪಾಧ್ಯಕ್ಷ ನಾಗೇಶ್‌ ಒ, ಪ್ರಧಾನ ಕಾರ್ಯದರ್ಶಿ ದಕ್ಷಿತ್‌ ರಾಜ್‌, ಜೊತೆ ಕಾರ್ಯದರ್ಶಿ ಲೋಕೇಶ್‌ ಕನ್ಯಾಮಂಗಲ, ಕೋಶಾಧಿಕಾರಿ ಉಮೇಶ್‌ ಡಿ, ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here