ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಪುತ್ತೂರು ಜಿಲ್ಲೆ ಇದರ ಪ್ರಮುಖ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಪುತ್ತೂರು ಕೊಂಬೆಟ್ಟು ದ್ರಾವಿಡ ಬ್ರಾಹ್ಮಣ ಹಾಸ್ಟಲ್ನಲ್ಲಿ ಸೆ.14ರಂದು ಜರಗಿತು.

ಮಂಗಳೂರು ವಿಭಾಗದ ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ಸಂಯೋಜಕರಾದ ಮನೋಹರ್ ಮಠದ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಸಂಸ್ಕಾರ, ಸಾಮಾಜಿಕ ಸ್ವಾಸ್ಥ್ಯ, ಸಾಮಾಜಿಕ ಶಿಕ್ಷಣ, ಸಾಮಾಜಿಕ ಸ್ವಾವಲಂಬನೆ, ಸಾಮಾಜಿಕ ಸಾಮರಸ್ಯ, ಸಾಮಾಜಿಕ ಸುರಕ್ಷೆ ಎಂಬ ವಿಷಯಗಳ ಕುರಿತು ಬೇರೆ ಬೇರೆ ಅವಧಿಯಲ್ಲಿ ಪ್ರ ಶಿಕ್ಷಣ ನಿಡಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸೇವಾ ಪ್ರಮುಖ್ ನ.ಸೀತಾರಾಮ ಸುಳ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಕಾರ್ಯವಾಹ ವಾದಿರಾಜ, ಸಾಮರಸ್ಯ ವೇದಿಕೆಯ ವಿಭಾಗ ಸಂಯೋಜಕ ರವೀಂದ್ರ ಟಿ.ಪುತ್ತೂರುರವರು ಮಾರ್ಗದರ್ಶನ ನೀಡಿದರು.
ದೇವಾಲಯ ಸಂವರ್ಧನಾ ಸಮಿತಿ ಪುತ್ತೂರು ಜಿಲ್ಲಾ ಸಂಯೋಜಕರಾದ ಯದುಶ್ರೀ ಆನೆಗುಂಡಿ ಸ್ವಾಗತಿಸಿ, ಸಹ ಸಂಯೋಜಕ ಕೃಷ್ಣಕುಮಾರ್ ಅತ್ರಿಜಾಲು ವಂದಿಸಿದರು. ಸಹ ಸಂಯೋಜಕ ಕುಸುಮಾಧರ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.