ಇದು ಗೊಬ್ಬರವೂ ಹೌದು…ಔಷಧಿಯೂ ಹೌದು: ದಂಬೆಕ್ಕಾನ ಸದಾಶಿವ ರೈ
ಪುತ್ತೂರು: ಕೃಷಿಯಲ್ಲಿ ಎಲ್ಲಾ ಮೋಸ ಮಾಡಿ ಹೋಗುವವರೇ ಇರುವಾಗ ನಾವು ಬಹಳಷ್ಟು ಜಾಗೃತರಾಗಿರಬೇಕಾದ ಅವಶ್ಯಕತೆ ಇದೆ. ನಾವು ಎಲ್ಲವನ್ನು ನಂಬಿ ಬಿಡುತ್ತೇವೆ ಆದರೆ ಅದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಇದೆ ಎಂಬುದು ನಮಗೆ ಮತ್ತೆ ಗೊತ್ತಾಗುತ್ತದೆ ಆದ್ದರಿಂದ ನಾವು ಸಾವಯವ ಕೃಷಿಯತ್ತ ಗಮನ ಹರಿಸಬೇಕಾದ ಅಗತ್ಯತೆ ತುಂಬಾ ಇದೆ.ದೇಶದ ಉತ್ತರ ಭಾಗಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಂದ್ ಮಾಡಿ ಸಾವಯವ ಗೊಬ್ಬರಗಳನ್ನೇ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ನಾವು ಕೂಡ ಚಿಂತನೆ ಮಾಡಬೇಕಾದ ಅಗತ್ಯತೆ ಇದೆ ಎಂದು ಪ್ರಗತಿಪರ ಕೃಷಿಕ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಹೇಳಿದರು.
ಅವರು ನೆಲ್ಯಾಡಿಯ ಬೇತೆಲ್ ಕಾಂಪ್ಲೆಕ್ಸ್ನಲ್ಲಿ ಕಿಸಾನ್ ಕಿಂಗ್ ಸಾವಯವ ಗೊಬ್ಬರದ ಪ್ರಾಂಚೈಸಿ ಪವಿತ್ರ ವಿವಾ ಮಾರ್ಟ್ ಅನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿವಾ ಮಾರ್ಟ್ನಿಂದ ನಾನು ಕಿಸಾನ್ ಕಿಂಗ್ ಸಾವಯವ ಗೊಬ್ಬರಗಳನ್ನು ಉಪಯೋಗಿಸಿದ್ದೇನೆ.
ನನ್ನ ತೋಟದಲ್ಲಿ ಎಲೆಚುಕ್ಕಿ,ಮುಂಡು ಸಿರಿ, ಬೆಂಕಿರೋಗ ಇತ್ತು ಈ ಮೂರರಲ್ಲಿಯೂ ನನಗೆ ಇದರಿಂದ ಫಲಿತಾಂಶ ಸಿಕ್ಕಿದೆ. ಕೇವಲ 50 ದಿವಸಗಳಲ್ಲೇ ಹೊಸ ಎಲೆ, ಚೆನ್ನಾಗಿ ಬಂದಿದೆ.
1 ಸಾವಿರ ಗಿಡಗಳಿಗೆ ಮಾತ್ರ ಹಾಕಿದ್ದೇನೆ. 500 ರಷ್ಟು ಗಿಡಗಳಿಗೆ ಬೆಂಕಿ ರೋಗ ಇತ್ತು ನಾನು ಗಿಡಗಳ ಆಸೆ ಬಿಟ್ಟಿದ್ದೇ ಆದರೆ ಈಗ ಬಹಳಷ್ಟು ಉತ್ತಮ ಫಲಿತಾಂಶ ನನಗೆ ಸಿಕ್ಕಿದೆ ಎಂದು ದಂಬೆಕ್ಕಾನ ಸದಾಶಿವ ರೈ ಹೇಳಿದರು. ಇದು ಗೊಬ್ಬರವೂ ಹೌದು ಔಷಧವೂ ಹೌದು. ನಾನು ಉಪಯೋಗಿಸಿ ಸಕ್ಸಸ್ ಆಗಿದ್ದೇನೆ ಎಂದು ಅವರು ಹೇಳಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಮಾತನಾಡಿ, ಕೃಷಿಯಲ್ಲಿ ಎಷ್ಟೇ ಆಧುನಿಕತೆ ಬಂದರೂ ಕೃಷಿಕರು ಕೂಡ ಜಾಣರಾಗಿದ್ದಾರೆ.
ಅಷ್ಟು ಸುಲಭದಲ್ಲಿ ಕೃಷಿಕರು ಯಾವುದನ್ನೂ ಕೂಡ ಬಳಕೆ ಮಾಡುವುದಿಲ್ಲ. ಕಿಸಾನ್ ಕಿಂಗ್ನವರ ಸಾವಯವ ಗೊಬ್ಬರ ಎಲ್ಲಾ ವಿಧದಲ್ಲೂ ಉತ್ತಮ ಎಂದು ಕೇಳಿದ್ದೇನೆ. ನಾನು ಕೂಡ ಮುಂದಕ್ಕೆ ಇದರ ಉಪಯೋಗ ಮಾಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ನೆಲ್ಯಾಡಿ ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್ರವರು ಮಾತನಾಡಿ, ನಾನು ಒಬ್ಬ ಕೃಷಿಕನಾಗಿ ಇಂದಿನವರೇಗೂ ರಾಸಾಯನಿಕ ಗೊಬ್ಬರ ಬಳಸಿಲ್ಲ, ಸಾವಯವ ಗೊಬ್ಬರವನ್ನೇ ಬಳಸಿಕೊಂಡು ಬರುತ್ತಿದ್ದೇನೆ. ಆರೋಗ್ಯದ ದೃಷ್ಟಿಯಲ್ಲೂ ಸಾವಯವ ಗೊಬ್ಬರ ಬಳಕೆ ಉತ್ತಮ. ವಿವಾ ಮಾರ್ಟ್ ಸಂಸ್ಥೆ ಯಶಸ್ವಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನೋಟರಿ ನ್ಯಾಯವಾದಿ ಇಸ್ಮಾಯಿಲ್ ಎನ್, ನೆಲ್ಯಾಡಿ ಬದ್ರೀಯಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್ ಸಿ.ಟಿ, ಕೃಷಿ ತಜ್ಞ ಜಯಕುಮಾರ್ ಉಡುವಾರೆ ಹಾಸನ, ಹೆಚ್ ಆಂಡ್ ಬಿ ಫ್ಯಾಮಿಲಿ ಟ್ರಸ್ಟ್ ಗೌರವಾಧ್ಯಕ್ಷ ಹಮ್ಮಬ್ಬ ಹಾಜಿ ಹೆಚ್, ಹಾಸನ ಜಿಲ್ಲೆಯ ಜೆಡಿಎಸ್ ರೈತ ಸಂಘದ ಮುಖಂಡ ನಟರಾಜ್ ಬಿ.ಸಿ, ಬೆಂಗಳೂರಿನ ಟೆಲಿಕಾಂ ಇಂಜಿನಿಯರ್ ನಾರಾಯಣ ಸ್ವಾಮಿ, ಉದ್ಯಮಿ ಹಾಜಿ ಅಬ್ದುಲ್ಲಾ ಬೈಲು ನೆಲ್ಯಾಡಿ, ಯುವ ಉದ್ಯಮಿ ಗಫಾರ್ ಜಮಾಲಿಯ,ಕೊಕ್ಕಡ ಗ್ರಾಪಂ ಸದಸ್ಯ ಜಗದೀಶ್ ಪೂಜಾರಿ, ಹೊಸಪೇಟೆ ಟೆಲಿಕಾಂ ಇಂಜಿನಿಯರ್ ಹನುಮಂತಪ್ಪ, ತುರುವೇಕೆರೆ ಸಾವಯವ ಕೃಷಿ ತಜ್ಞ ಶಿವಶಂಕರ್ ಡಿ.ಸಿರವರುಗಳು ಶುಭ ಹಾರೈಸಿದರು. ಮಲ್ಲೇಶ ಮಸ್ಕರೇನಸ್ ಪ್ರಾರ್ಥಿಸಿದರು. ಪವಿತ್ರ ವಿವಾ ಮಾರ್ಟ್ ಮಾಲಕ ಮಹಮ್ಮದ್ ಅಮಾನ್ ನೆಲ್ಯಾಡಿರವರು ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾನ್ಸಿ ಡಿ’ಸೋಜಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಪೃಥ್ವಿ ಸಂರಕ್ಷಕ ಅವಾರ್ಡ್ ಪ್ರದಾನ, ಸನ್ಮಾನ ಕಾರ್ಯಕ್ರಮ
ಕಳೆದ ಹಲವು ವರ್ಷಗಳಿಂದ ಕಿಸಾನ್ ಕಿಂಗ್ ಸಾವಯವ ಗೊಬ್ಬರವನ್ನು ಬಳಸಿ ಅದರಿಂದ ಯಶಸ್ಸು ಕಂಡ ರೈತರುಗಳಾದ ಡೇವಿಡ್ ಪಡ್ಡೆಡ್ಕ, ಜಯಕುಮಾರ್ ಉಡುವಾರೆ, ನಟರಾಜ್ ಬಿ.ಸಿ ಹಾಸನ, ನಾರಾಯಣ ಸ್ವಾಮಿ ಬೆಂಗಳೂರು, ಹನುಮಂತಪ್ಪ ಹೊಸಪೇಟೆ, ಶಿವಶಂಕರ್ ಡಿ.ಸಿ ತುರುವೇಕೆರೆ ಮತ್ತು ದಂಬೆಕ್ಕಾನ ಸದಾಶಿವ ರೈರವರುಗಳಿಗೆ ಈ ಸಂದರ್ಭದಲ್ಲಿ ಪವಿತ್ರ ವಿವಾ ಮಾರ್ಟ್ ವತಿಯಿಂದ ಪೃಥ್ವಿ ಸಂರಕ್ಷಕ ಅವಾರ್ಡ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಿಸಾನ್ ಕಿಂಗ್ ಸಾವಯವ ಗೊಬ್ಬರದ ಪ್ರಾಂಚೈಸಿ-ವಿವಾ ಮಾರ್ಟ್
ಎಲೆ ಚುಕ್ಕಿ ರೋಗ, ಕುಂಟುಸಿರಿ, ಫಂಗಸ್, ಬೇರು ಹುಳ ರೋಗಕ್ಕೆ ಉತ್ತಮ ಫಲಿತಾಂಶ ನೀಡುವ ಮೂಲಕ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಜಿಲ್ಲೆಯಲ್ಲೇ ಅಡಿಕೆ ಬೆಳೆಗಾರರ ಮನಗೆದ್ದಿರುವ (ಐಸಿಎಆರ್) ಭಾರತೀಯ ಕೃಷಿ ಮತ್ತು ಸಂಶೋಧನಾ ಮಂಡಳಿಯಿಂದ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟ್ ಪಡೆದಿರುವ ಕಿಸಾನ್ ಕಿಂಗ್ ಸಾವಯವ ಗೊಬ್ಬರದ ಪ್ರಾಂಚೈಸಿ ಪವಿತ್ರ ವಿವಾ ಮಾರ್ಟ್ ನೆಲ್ಯಾಡಿಯ ಬೇತೆಲ್ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ.8151926999, 9148360777 ಗೆ ಸಂಪರ್ಕಿಸಬಹುದಾಗಿದೆ.