ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು 2023 – 24ನೇ ಸಾಲಿನ ಹತ್ತನೆಯ ತರಗತಿ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 36 ಮಂದಿ ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಸಂಸ್ಥೆ ನೂರು ಶೇಕಡಾ ಫಲಿತಾಂಶಕ್ಕೆ ಭಾಜನವಾಗಿದೆ. ಒಟ್ಟು 17 ಮಂದಿ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದರೆ 17 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಫಲಿತಾಂಶವನ್ನು ಪಡೆದಿದ್ದಾರೆ. ತಾಲೂಕಿನ ಮೊದಲ ಎಂಟು ರಾಂಕ್ಗಳನ್ನು ಅಂಬಿಕಾ ವಿದ್ಯಾಲಯ ತನ್ನದಾಗಿಸಿಕೊಂಡು ನೂತನ ದಾಖಲೆ ಮೆರೆದಿದೆ.
ಪುತ್ತೂರಿನ ಸೇಡಿಯಾಪಿನ ಚೈತ್ರನಾರಾಯಣ ಹಾಗೂ ಸ್ವಪ್ನ ಎಸ್.ಸಿ ದಂಪತಿ ಪುತ್ರಿ ಶ್ರೀಲಕ್ಷ್ಮೀ ಎಸ್.ಸಿ. 96.2% ಫಲಿತಾಂಶವನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪುತ್ತೂರಿನ ಮುರ ನಿವಾಸಿಗಳಾದ ಕೇಶವ ಮತ್ತು ವನಿತಾ ದಂಪತಿ ಪುತ್ರ ಜಸ್ವಿತ್ 95.4 ಶೇಕಡಾದೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಾರಾಡಿಯ ಅಶೋಕ್ ಭಟ್ ಎ.ಕೆ ಹಾಗೂ ನಯಾನಾ ಭಟ್ ದಂಪತಿ ಪುತ್ರ ಅಭಿನವ ವಸಿಷ್ಟ 94.8 ಶೇಕಡಾ ದಾಖಲಿಸಿದರೆ, ಮಾಡಾವಿನ ವೆಂಕಟಕೃಷ್ಣ ಶರ್ಮ ಮತ್ತು ಸಾವಿತ್ರಿ ಎಂ ದಂಪತಿ ಪುತ್ರ ಅವನೀಶ ಕೃಷ್ಣ ಎಂ 94.8 ಶೇಕಡಾ ಗಳಿಸಿದ್ದಾರೆ.
ಪುತ್ತೂರಿನ ಸಾಲ್ಮರದ ನಿವಾಸಿಗಳಾದ ಪದ್ಮಯ್ಯ ಗೌಡ ಮತ್ತು ಜಯಲಕ್ಷ್ಮೀ ದಂಪತಿ ಪುತ್ರಿ ಯಶಸ್ವೀ ಸುರುಳಿ 94.6, ಪುತ್ತೂರಿನ ಹರೀಶ್ ಪಣಂಬು ಮತ್ತು ಸಂಧ್ಯಾ ಕುಮಾರಿ ದಂಪತಿ ಪುತ್ರಿ ಸಿಂಚನ ಹರೀಶ್ ಪಣಂಬು 94.6, ಸಾಮೆತಡ್ಕದ ದಿನೇಶ್ ಕುಮಾರ್ ಪಿ ಮತ್ತು ಪೂರ್ಣಿಮ ಬಿ ದಂಪತಿ ಪುತ್ರಿ ಕುಶಿ ಪಿ.ಡಿ 94.4, ಮುಕ್ರಂಪಾಡಿಯ ಡಾ. ಅವನೀಶ್ ಕಲ್ಲುರಾಯ ಪಿ.ಜಿ ಮತ್ತು ಡಾ. ಪ್ರತಿಭಾ ಕಲ್ಲುರಾಯ ದಂಪತಿ ಪುತ್ರ ಅದ್ವಿಕ್ ಕಲ್ಲುರಾಯ 94.2, ತೆಂಕಿಲದ ಡಾ. ಪ್ರಶಾಂತ್ ಬಿ.ಎನ್ ಮತ್ತು ಅಶ್ವಿನಿ.ಪಿ ದಂಪತಿ ಪುತ್ರ ಅಂಶಕ ಬಿ.ಜಿ 93.2, ಕೊಂಬೆಟ್ಟಿನ ಲಕ್ಷ್ಮಿಕಾಂತ್ ಬಿ ಆಚಾರ್ಯ ಮತ್ತು ವೇದ ಲಕ್ಷ್ಮಿಕಾಂತ್ ಅಚಾರ್ಯ ದಂಪತಿ ಪುತ್ರಿ ಆರುಂಧತಿ ಎಲ್.ಆಚಾರ್ಯ 92.8, ಪುಣಚದ ಪ್ರಶಾಂತ ಕೆ. ಎನ್ ಮತ್ತು ವೈಶಾಲಿ ಎಮ್ ದಂಪತಿ ಪುತ್ರ ಪ್ರವರ್ಧನ್ ಕೆ.ಪಿ 91.8, ಸಾಲ್ಮರದ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಮತ್ತು ಸೀಮಾ ಪಿ. ಹೆಬ್ಬಾರ್ ದಂಪತಿ ಪುತ್ರ ದೈವಿಕ್ ಹೆಬ್ಬಾರ್ 91.8, ಕಲ್ಲಿಮಾರ್ನ ಸುಧಾಕರ ಕೆ.ಪಿ ಮತ್ತು ರೇಶ್ಮಾ ಎಸ್ ನಾಯ್ಕ್ ಪುತ್ರ ಶ್ರೀಶಾಮ್ ಎಸ್ ನಾಯ್ಕ್ 91, ಬನ್ನೂರಿನ ಚಂದ್ರಶೇಖರ, ಹ?ಲತಾ. ಕೆ.ಪಿ ದಂಪತಿ ಪುತ್ರ ಶ್ಲೇಶ್ ಅಲೆಕ್ಕಾಡಿ ಚಂದ್ರಶೇಖರ 90.8, ಮೊಟ್ಟೆತ್ತಡ್ಕದ ಈರದಾಸಪ್ಪ ಇ ಹಾಗೂ ಆರ್.ಕರಿಯಮ್ಮ ದಂಪತಿ ಪುತ್ರಿ ಚಂದನ ಇ 90.4, ವಿಟ್ಲದ ಗಿರೀಶ್ ಭಟ್ ಮತ್ತು ಸೌಮ್ಯ ಸಾವಿತ್ರಿ.ಎಸ್ ದಂಪತಿ ಪುತ್ರ ಆತ್ರೇಯ ಭಟ್ ಎ.ಜಿ 90, ಸುಬ್ಬಣ್ಣ ಬಿ. ಮತ್ತು ಪ್ರೇಮಲತಾ ಎಸ್ ದಂಪತಿ ಪುತ್ರ ಸ್ವಸ್ತಿಕ್ ಎಸ್. ನಾಯ್ಕ್ 86.2 ಫಲಿತಾಂಶದೊAದಿಗೆ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ ಹಾಗೂ ಪ್ರಾಂಶುಪಾಲೆ ಮಾಲತಿ ಡಿ ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕಿನ ಮೊದಲ ಎಂಟು ರಾಂಕ್ಗಳು ಅಂಬಿಕಾಕ್ಕೆ
ಈ ಬಾರಿಯ ಸಿಬಿಎಸ್ಇ ಫಲಿತಾಂಶದಲ್ಲಿ ತಾಲೂಕಿನ ಮೊದಲ ರ್ಯಾಂಕ್ನಿಂದ ತೊಡಗಿ 8ನೆಯ ರ್ಯಾಂಕ್ವರೆಗೆ ಎಲ್ಲಾ ರ್ಯಾಂಕ್ಗಳೂ ಅಂಬಿಕಾ ವಿದ್ಯಾಲಯಕ್ಕೆ ದೊರಕಿರುವುದು ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕೈಗನ್ನಡಿ. ಅಂಬಿಕಾದ ಶಿಕ್ಷಣದ ಗುಣಮಟ್ಟಕ್ಕೆ ಈ ಫಲಿತಾಂಶ ಕೈಗನ್ನಡಿಯೆನಿಸಿದೆ.