ತೆಂಕಿಲ ವಿವೇಕಾನಂದ ಕ.ಮಾ. ಶಾಲೆಯಲ್ಲಿ ಮಕ್ಕಳ ವಿಭಾಗದ ಯೋಗ ಪ್ರಶಿಕ್ಷಣ ಶಿಬಿರ

0

ಪುತ್ತೂರು: ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಯೋಗಜೀವನ ದರ್ಶನ-2024 ಇದರ ಅಂಗವಾಗಿ ತೆಂಕಿಲ ಶ್ರೀವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳ ವಿಭಾಗದ ಯೋಗ ಪ್ರಶಿಕ್ಷಣ ಶಿಬಿರವು ಮೇ.9ರಂದು ಉದ್ಘಾಟನೆಗೊಂಡಿತು. ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಹಸಂಚಾಲಕಿ ಕನಕ ಮಾತನಾಡಿ ಯೋಗದ ಬಗ್ಗೆ ಶಿಬಿರಾರ್ಥಿಗಳಿಗೆ ಸಮಿತಿಯ ಪರಿಚಯ ಮತ್ತು ಯೋಗದ ಬಗ್ಗೆ ಜಾಗೃತಿಯನ್ನು ಮೂಡಿಸಿ ಸಮಿತಿಯ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿದರು. ರೂಪಕಲಾ ಮಾತನಾಡಿ ಯೋಗ ಯಾಕೆ ಮಾಡಬೇಕು ಮತ್ತು ಯೋಗದಿಂದ ಮಾನಸಿಕ ಸಮತೋಲನವನ್ನು ಹೇಗೆ ಕಾಪಾಡಬಹುದು ಎಂದು ವಿವರಿಸಿದರು. ರಾಮಚಂದ್ರ ಮಾತನಾಡಿ ಯೋಗದ ಮಹತ್ವವನ್ನು ವಿವರಿಸಿದರು. ವೇದಮೂರ್ತಿ ಸುಬ್ರಮಣ್ಯ ಬಳ್ಳಕ್ಕುರಾಯ ಮಾತನಾಡಿ ಮಕ್ಕಳು ವಿದ್ಯಾಭ್ಯಾಸದೊಂದಿಗೆ ಯೋಗವನ್ನು ಕಲಿತು ಉತ್ತಮ ಭವಿಷ್ಯವನ್ನು ರೂಪಿಸಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಕೃಷ್ಣಾನಂದ ಮಾತನಾಡಿ ಎಸ್‌ಪಿವೈಎಸ್‌ಎಸ್ ಇಂತಹ ಶಿಬಿರಗಳನ್ನು ಮಕ್ಕಳ ವರ್ಗ, ಸಾಮಾನ್ಯ ವರ್ಗ ಮತ್ತು ಹಿರಿಯರ ವರ್ಗ ಆಯೋಜಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕೂಡ ಯೋಗವನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು. ವಿನಯ ಪೈ ಕಾರ್ಯಕ್ರಮ ನಿರೂಪಿಸಿದರು. ಶುಭ ಜಿ. ಶೆಟ್ಟಿ ಸ್ವಾಗತಿಸಿ ಲಲಿತಾ ವಂದಿಸಿದರು.

ಮಾತೃಭೋಜನ ಮಾತೃವಂದನ ಮತ್ತು ಮಾತೃಭೋಜನ:
ಮೇ.10ರಂದು ಸಂಜೆ 6.೦೦ಗೆ ನಡೆದ ಮಾತೃ ಪೂಜನ, ಮಾತೃವಂದನ ಮತ್ತು ಮಾತೃಭೋಜನ ಕಾರ್ಯಕ್ರಮದಲ್ಲಿ ವಿಟ್ಲ ಶ್ರೀಪಂಚಲಿಂಗೇಶ್ವರ ಶಾಖೆಯ ಶಿಕ್ಷಕಿ ಡಾ. ಮೈತ್ರೇಯಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ಆನಡ್ಕ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಶುಭಲತಾ ಮಾತೃ ಪೂಜನ, ಮಾತೃವಂದನ ಮತ್ತು ಮಾತೃಭೋಜನದ ಬಗ್ಗೆ ವಿವರಿಸಿದರು. ಮೇ.11ರಂದು ಸಂಜೆ 5.೦೦ ರಿಂದ ಆರೋಗ್ಯದ ಕಡೆ ಯೋಗ ನಡಿಗೆ ಕಾರ್ಯಕ್ರಮ ನಡೆಯಿತು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಹರಿಪ್ರಸಾದ್ ಅಧ್ಯಕ್ಷತಡ ವಹಿಸಿ ಯೋಗ ನಡಿಗೆಯ ಮುಖ್ಯ ಉದ್ಧೇಶ ವಿವರಿಸಿದರು.

ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭ ಮೇ.12ರಂದು ಬೆಳಿಗ್ಗೆ ನಡೆಯಿತು. ಯೋಗ ಪ್ರಶಿಕ್ಷಣ ಶಿಬಿರದ ಸಂಚಾಲಕ ವಸಂತರವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಸಂಚಾಲಕ ಯೋಗೀಶ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ ರಾವ್ ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ವಿವರಿಸಿದರು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here