ಪುತ್ತೂರು: ಬೋಧಕ ವರ್ಗದವರ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಮೇ 10 ಮತ್ತು 11 ರಂದು ಶಿಕ್ಷಕ, ಶಿಕ್ಷಕಿಯರಿಗೆ ಕಾರ್ಯಾಗಾರವನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕಿಗಳಾಗಿ ಅಂತಾರಾಷ್ಟ್ರೀಯ ತರಬೇತುದಾರ ಗೋಪಿನಾಥ್ ಬಾಲಚಂದ್ರನ್ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇದರ ಕೋಶಾಧಿಕಾರಿ ಕೃಷ್ಣ ಮೋಹನ್ ತರಬೇತಿ ನೀಡಿದರು.
ಈ ಕಾರ್ಯಕ್ರಮದಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಉಪಾಧ್ಯಕ್ಷ ಸತೀಶ್ ರಾವ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಸಂತಿ. ಕೆ, ಸಂಚಾಲಕ ಭರತ್ ಪೈ, ಆಡಳಿತ ಮಂಡಳಿಯ ಸದಸ್ಯೆಯಾದ ಶಂಕರಿ ಶರ್ಮ, ಹಾಗೂ ಶಾಲಾ ಪ್ರಾಂಶುಪಾಲ ಸಿಂಧು ವಿ. ಜಿ ಉಪಸ್ಥಿತರಿದ್ದು ಶುಭ ಹಾರೈಸಿದರು, ಶಾಲಾ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.