ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ

0

ಅಧ್ಯಕ್ಷ: ಮುಹಮ್ಮದ್ ರಫೀಕ್ ಅರ್ಷದಿ, ಕಾರ್ಯದರ್ಶಿ: ಆಸೀಫ್ ಅಝ್ಹರಿ

ಕಡಬ: ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ವಾರ್ಷಿಕ ಮಹಾಸಭೆಯು ಆತೂರು ಬದ್ರಿಯಾ ಹಾಲ್‌ನಲ್ಲಿ ಮುಫತ್ತಿಷ್ ಹಂಝ ಫೈಝಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೈಯದ್ ಜುನೈದ್ ಜಿಪ್ರಿ ತಂಙಳ್ ಆತೂರು ಉದ್ಘಾಟಿಸಿದರು. ಆಸೀಫ್ ಅಝ್ಹರಿ ವರದಿ ಮಂಡನೆ ಮಾಡಿದರು. ನಂತರ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಅರ್ಷದಿ ಹಳೆನೇರಂಕಿ, ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ಅಝ್ಹರಿ ಕೊಯಿಲ ಆತೂರು, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಕಿಡ್ಸ್ ಆತೂರುರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶೌಕತ್ ಫೈಝಿ ಗಂಡಿಬಾಗಿಲು, ಅಬ್ದುರ್ರಹ್ಮಾನ್ ಫೈಝಿ ಪೆರಿಯಡ್ಕ, ಕಾರ್ಯದರ್ಶಿಗಳಾಗಿ ಹಾರಿಸ್ ಅಝ್ಹರಿ ನೀರಾಜೆ, ಅಬೂ ಉಬೈಸ್ ಅಸ್ಲಮಿ ಆತೂರು, ಐ.ಟಿ ಕೋರ್ಡಿನೇಟರ್ ರಾಗಿ ಇಮ್ತಿಯಾಜ್ ಯಮಾನಿ ಕೊಯಿಲ ಆತೂರು ರವರನ್ನು ಆಯ್ಕೆ ಮಾಡಲಾಯಿತು.

ಪರೀಕ್ಷಾ ಬೋರ್ಡ್ ಚೇರ್ಮನ್ ಆಗಿ ಮುನೀರ್ ಯಮಾನಿ ಕುದ್ಲೂರು, ವೈಸ್ ಚೇರ್ಮನ್ ಆಗಿ ಅಬ್ದುಲ್ಲಾ ಮುಸ್ಲಿಯಾರ್ ಕೆಮ್ಮಾರ, ಸತ್ತಾರ್ ಅಸ್ನವಿ ಆತೂರು, ಎಸ್‌ಕೆಎಸ್‌ಬಿವಿ ಚೇರ್‌ಮೆನ್ ಆಗಿ ಬದ್ರುದ್ದೀನ್ ಮುಸ್ಲಿಯಾರ್ ಗಂಡಿಬಾಗಿಲು, ಕನ್ವೀನರ್ ಆಗಿ ಮುಹಮ್ಮದ್ ಹನೀಫ್ ಅಸ್ಲಮಿ ಕುಂಡಾಜೆ, ಜಿಲ್ಲಾ ಕೌನ್ಸಿಲರ್ ಆಗಿ ಆಸೀಫ್ ಅಝ್ಹರಿ ಕೊಯಿಲ ಆತೂರುರವರನ್ನು ನೇಮಿಸಲಾಯಿತು.
ಸಭೆಯಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಹಮದ್ ಕುಂಞಿ, ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಮುಹ್ಯುದ್ದೀನ್ ಜುಮಾ ಮಸ್ಜಿದ್ ಆತೂರು ಇಲ್ಲಿನ ಅಧ್ಯಕ್ಷರಾದ ಹೈದರ್ ಕಲಾಯಿ, ಉಸ್ತಾದ್ ಹಂಝ ಸಖಾಫಿ, ಆತೂರು ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಬಿ.ಕೆ ಅಬ್ದುಲ್ ರಝಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 6 ಬಾರಿ ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಕಾರ್ಯದರ್ಶಿಯಾಗಿ ಹಾಗೂ 1 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಆತೂರಿಂದ ನಿರ್ಗಮಿಸಿದ ಕೆ.ಎಂ.ಎಚ್ ಸಿದ್ದಿಕ್ ಫೈಝಿ ಕರಾಯರವರಿಗೆ ಬೀಳ್ಕೊಡುಗೆ ಮಾಡಲಾಯಿತು. ಆಸೀಫ್ ಅಝ್ಹರಿ ಸ್ವಾಗತಿಸಿ, ಮುನೀರ್ ಯಮಾನಿ ವಂದಿಸಿದರು.

LEAVE A REPLY

Please enter your comment!
Please enter your name here