ಪೆರಾಬೆ: ಪೆರಾಬೆ ಗ್ರಾ.ಪಂ.ಗ್ರಂಥಾಲಯದ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ 27ರಂದು ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಶೇಷಪತಿ ರೈ ಗುತ್ತುಪಾಲು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿದ್ದ ಇಡಾಳ ಶಾಲೆ ಮುಖ್ಯಶಿಕ್ಷಕ ಮಹೇಶ್, ಪೆರಾಬೆ ಶಾಲಾ ಶಿಕ್ಷಕಿ ಹೇಮಲತಾ, ಮಾರ್ ಇವಾನಿಯೋಸ್ ಶಾಲೆಯ ಶಿಕ್ಷಕ ಸಾಜನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ, ಕುಂತೂರುಪದವು ಶಾಲೆಯ ಶಿಕ್ಷಕಿ ಕುಸುಮ, ಪೆರಾಬೆ ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ, ಕೆಎಸ್ಆರ್ಟಿಸಿ ಸಂಚಾರ ನಿಯಂತ್ರಕ ಅಬ್ಬಾಸ್ ಕೋಚಕಟ್ಟೆ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಪೆರಾಬೆ ಗ್ರಾ.ಪಂ.ಪಿಡಿಒ ಶಾಲಿನಿ ಕೆ.ಬಿ.ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ವಂದಿಸಿದರು. ಮೇ 20ರಿಂದ 27ರ ತನಕ 8 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ 60 ಮಕ್ಕಳು ಪಾಲ್ಗೊಂಡಿದ್ದರು.
ಶಿಕ್ಷಕರಾದ ಹೇಮಲತಾ, ಸಾಜನ್, ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಇಡಾಳ ಶಾಲಾ ಮುಖ್ಯಶಿಕ್ಷಕ ಮಹೇಶ್, ಕುಂತೂರುಪದವು ಶಾಲಾ ಶಿಕ್ಷಕಿ ಕುಸುಮ, ಪೆರಾಬೆ ಶಾಲಾ ಶಿಕ್ಷಕಿ ಹೇಮಲತಾ, ಕುಂತೂರು ಮಾರ್ ಇವಾನಿಯೋಸ್ ಶಾಲಾ ಶಿಕ್ಷಕ ಸಾಜನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾರಾಯಣ, ಅರಣ್ಯ ಸಂರಕ್ಷಕ ಜಯಕುಮಾರ್, ಗುರುಕಿರಣ್ ಅವರು ಮಕ್ಕಳಿಗೆ ತರಬೇತಿ ನೀಡಿದರು. ಪ್ರಭಾಕರ ಶೆಟ್ಟಿ ಕೇವಳ, ವಾಹನ ತರಬೇತುದಾರರಾದ ಪದ್ಮಾವತಿ, ಮಹಮ್ಮದಾಲಿ ಕೋಚಕಟ್ಟೆ, ಮಮತಾ ಅಂಬರಾಜೆ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆದ್ದೊಟ್ಟೆ, ಪಿಡಿಒ ಶಾಲಿನಿ ಕೆ.ಬಿ., ಸುಭೀಕ್ಷರತ್ನ ಗುತ್ತುಪಾಲುರವರು ಶಿಬಿರಾರ್ಥಿಗಳಿಗೆ ಲಘು ಉಪಾಹಾರ ನೀಡಿ ಸಹಕರಿಸಿದರು. ಮಾರ್ ಇವಾನಿಯೋಸ್ ಶಾಲಾ ಶಿಕ್ಷಕ ಸಾಜನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾರಾಯಣ, ಪೆರಾಬೆ ಶಾಲಾ ಶಿಕ್ಷಕಿ ಹೇಮಲತಾ, ಗುರುಕಿರಣ್, ಅಬ್ಬಾಸ್ ಕೋಚಕಟ್ಟೆ, ಜನಾರ್ದನ ಶೆಟ್ಟಿ ಪೆರಾಬೆ ಅವರು ಶಿಬಿರಕ್ಕೆ ಸಹಕಾರ ನೀಡಿದರು.