ಬಿಂದು ಸಂಸ್ಥೆಯಲ್ಲಿ ಹಳೆಯ ಬೋರ್ ವೆಲ್ ಫ್ಲಶ್ ಮಾಡುವ ಸಂದರ್ಭದಲ್ಲಿ ಸ್ಥಳೀಯರಿಂದ ಕಲ್ಲು ತೂರಾಟ-ದೂರು ದಾಖಲು

0

ಪುರುಷರಕಟ್ಟೆ: ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಳವೆಬಾವಿಯನ್ನು ಶುದ್ಧೀಕರಿಸುವ ಸಂದರ್ಭದಲ್ಲಿ ಎಸ್‌ ಡಿ ಪಿ ಐ ಕಾರ್ಯಕರ್ತರೆನ್ನಲಾದ ಸ್ಥಳೀಯ ನಿವಾಸಿಗಳಾದ ಸಮದ್‌ ಮತ್ತು ಸಲೀಂ ಎಂಬವರು ಸಂಸ್ಥೆಯ ಆವರಣದೊಳಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ, ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಶುದ್ಧೀಕರಿಸಲು ಬಂದ ಯಮುನಾ ಬೋರ್‌ ವೆಲ್‌ ವಾಹನಕ್ಕೆ ಹಾನಿಯಾಗಿದೆ ಎಂದು ಸಂಸ್ಥೆಯ ಮ್ಯಾನೇಜರ್‌ ಲಕ್ಷ್ಮಿನಾರಾಯಣ ನಗರ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here