ಕಾಂಗ್ರೆಸ್ ಗ್ಯಾರೆಂಟಿ ಭಜನೆ ಮಾಡುವುದು ಬಿಟ್ಟರೆ, ಅಭಿವೃದ್ದಿಯಲ್ಲಿ ಶೂನ್ಯ – ಪ್ರತಾಪ್ ಸಿಂಹ ನಾಯಕ್

0

ಪುತ್ತೂರು: ಕಾಂಗ್ರೆಸ್ ಗ್ಯಾರೆಂಟಿ ಭಜನೆ ಮಾಡುವುದು ಬಿಟ್ಟರೆ ಕ್ಷೇತ್ರದ ಅಭಿವೃದ್ದಿಯಲ್ಲಿ ಶೂನ್ಯ ಎಂದು ಶಿಕ್ಷಕರ ಕ್ಷೇತ್ರದ ಜಿಲ್ಲಾ ಸಂಚಾಲಕ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಹೇಳಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಇರುವಾಗ ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಿದೆ. ಆದರೆ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸರಕಾರ ಅನಿವಾರ್ಯ‌ ಕೊಡಲೇ ಬೇಕಾದ ಹಣವನ್ನು ಮೀಸಲಿಟ್ಟಿದೆ ಹೊರತು ಶಾಲೆಯ ಮೂಲಭೂತ ಸೌಕರ್ಯ ಶಿಕ್ಷಕರ ಕೊರತೆ ನೀಗಿಸುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಕಳೆದ 8 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬೆಲೆ ನೀಡಿಲ್ಲ. ಶಾಲೆಗೆ ಹೊಸ ಕೊಠಡಿ ನೀಡಿಲ್ಲ, ಎಲ್ಲಾ ರೀತಿಯಲ್ಲಿ ಕಾಂಗ್ರೆಸ್ ಅಭಿವೃದ್ದಿ ಶೂನ್ಯವಾಗಿದೆ. ಬಿಜೆಪಿ ಸರಕಾರ ಇರುವಾಗ ವಿವೇಕ ಕೊಠಡಿ ಯೋಜನೆಯಲ್ಲಿ ಶಾಲೆಗೆ 40 ಕೊಠಡಿ ನೀಡಿದೆ. ಪುತ್ತೂರಿನಲ್ಲಿ 62 ಕೊಠಡಿಗಳನ್ನು ನೀಡಿದೆ. ಕಾಂಗ್ರೆಸ್ ಗ್ಯಾರೆಂಟಿಯ ಭಜನೆ ಮಾಡುವುದು ಬಿಟ್ಟರೆ ಅಭಿವೃದ್ದಿಯಲ್ಲಿ ಶೂನ್ಯವಾಗಿದೆ. ಹಾಗಾಗಿ ಶಿಕ್ಷಕರ ಪದವಿದರ ಕ್ಷೇತ್ರವನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದ ಹಿನ್ನಲೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಮತದಾರರು ಬೆಂಬಲ ನೀಡಲಿದ್ದಾರೆ ಎಂಬ ಭರವಸೆ ಇದೆ.‌ ಇದರ ಜೊತೆಗೆ
ಕಾಂಗ್ರೆಸ್ ನ ಜನವಿರೋಧಿ ಧೋರಣೆಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಪದವಿದರರ ಸಹಕಾರ ಅಗತ್ಯ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪದವಿದರ ಕ್ಷೇತ್ರದ ಸಹ ಸಂಚಾಲಕ ವಿಕಾಸ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಚುನಾವಣೆ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here