





ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನ.24ರಿಂದ ನ.26ರ ತನಕ ಚೌತಿ,ಪಂಚಮಿ,ಷಷ್ಠಿ ಉತ್ಸವ ವಿಜೃಂಭಣೆಯಿಂದ ನಡೆಯಿತು.




ನ.24ರಂದು ಬೆಳಿಗ್ಗೆ 8:00ರಿಂದ ಚೌತಿ ಉತ್ಸವ, ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ,ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಸುರುಳಿ, ಶ್ರೀ ದುರ್ಗಾ ಭಜನಾ ಮಂಡಳಿ ಕುಂತೂರುಪದವು ರಾಮಡ್ಕ ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7:00 ರಿಂದ ವಿಶ್ವಮೋಹನ ನೃತ್ಯ ಕಲಾಶಾಲೆ ಕಡಬ ವಿದೂಷಿ ಮಾನಸ ಪುನೀತ್ ರೈ ಮನವಳಿಕೆ ಯವರಿಂದ ನೃತ್ಯೋಲ್ಲಾಸ ಕಾರ್ಯಕ್ರಮ ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.






ನ.25 ರಂದು ಬೆಳಿಗ್ಗೆ ಪಂಚಮಿ ಉತ್ಸವ ಕ್ಷೀರಾಭಿಷೇಕ,ಪಂಚಾಮೃತಾಭಿಷೇಕ,ಸರ್ವಸೇವೆ,ನಾಗಾರಾಧನೆ, ಶ್ರೀ ದುರ್ಗಾಶಕ್ತಿ ಭಜನಾ ಮಂಡಳಿ ಆಲಂಕಾರು, ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು ಇವರಿಂದ ಭಜನೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ರಾತ್ರಿ ಬ್ರಹ್ಮಶ್ರೀ ವೇ ಮೂ ಪುರೋಹಿತ ನಾಗರಾಜ್ ಭಟ್ ಸುಳ್ಯ,ಬ್ರಹ್ಮಶ್ರೀ ಸುಬ್ರಹ್ಮಣ್ಯ ಕಾರಂತ ಸುರತ್ಕಲ್ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷ ಬಲಿ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ನ.26 ರಂದು ಷಷ್ಠಿ ಉತ್ಸವ ಕ್ಷೀರಾಭಿಷೇಕ,ಪಂಚಾಮೃತಾಭಿಷೇಕ, ನವಕಲಶಾಭಿಷೇಕ,ಸರ್ವಸೇವೆ, ಮಂತ್ರಾಕ್ಷತೆ,ಬ್ರಾಹ್ಮಣ ಸುಹಾಸಿನಿ ಆರಾದನೆ,ಮಾಸಿಕ ಗಣಪತಿ ಹೋಮ, ಶ್ರೀ ಪಾಂಡುರಂಗ ಭಜನಾಮಂಡಳಿ ಮನವಳಿಕೆ ಯವರಿಂದ ಭಜನೆ ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಸಂಜೆ ಭಜನಾಮೃತ ಭಜನಾ ತಂಡ ಕಡಬ ಇವರಿಂದ ಕುಣಿತ ಭಜನೆ, ರಾತ್ರಿ ರಂಗಪೂಜೆ, ಮಾಸಿಕ ದುರ್ಗಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು ಅಗಮಿಸಿದ ಸಾವಿರಾರು ಭಕ್ತಾದಿಗಳು ಶ್ರೀ ದೇವರ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ಈ ಸಂಧರ್ಭದಲ್ಲಿ ಖಾಯಂ ಟ್ರಸ್ಟಿ ಯಂ. ರಾಮಮೋಹನ್ ರೈ ಸುರುಳಿ,ಅಧ್ಯಕ್ಷರಾದ ಯಂ.ಕೃಷ್ಣಕುಮಾರ ಅತ್ರಿಜಾಲು,ಉಪಾಧ್ಯಕ್ಷ ರಾದ ರಾಧಾಕೃಷ್ಣ ರೈ ಪರಾರಿಗುತ್ತು,ಕಾರ್ಯದರ್ಶಿ ಸತೀಶ್ ಪೂಂಜಾ,ಕೋಶಾಧಿಕಾರಿ ಸಂತೋಷ ರಾವ್ ಕುಂಞಕ್ಕು, ಜತೆ ಕಾರ್ಯದರ್ಶಿ ವಿನೋದ್ ಕುಮಾರ್ ರೈ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಪ್ರಶಾಂತ ರೈ ಮನವಳಿಕೆ,ಕಾರ್ಯದರ್ಶಿ ಹೇಮಚಂದ್ರ ಸುರುಳಿ, ನಿತ್ಯಪೂಜಾ ಸಮಿತಿಯ ಅಧ್ಯಕ್ಷರಾದ ಗಂಗಾಧರ ಪೂಜಾರಿ ಕಲ್ಲಡ್ಕ, ಸಾಂಸ್ಕೃತಿಕ ಕಲಾ ವೇದಿಕೆಯ ಸಂಚಾಲಕ ಪ್ರದೀಪ್ ರೈ ಮನವಳಿಕೆ,ನಿರ್ಮಾಣ ಸಮಿತಿ ಸಂಚಾಲಕ ರಾಮಣ್ಣ ಗೌಡ ಸುರುಳಿ, ಹಾಗೂ ಪದಾಧಿಕಾರಿಗಳು ಮತ್ತು ಟ್ರಸ್ಟಿನ ಸದಸ್ಯರು , ಅರ್ಚಕರು, ಸಿಬ್ಬಂದಿ ವರ್ಗದವರು, ಕಾರ್ಯಕರ್ತರು, ಊರಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸುರುಳಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಚೌತಿ, ಪಂಚಮಿ, ಷಷ್ಠಿ ಉತ್ಸವದ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಸೇರಿದಂತೆ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಊರ ಪರವೂರ ಭಕ್ತಾದಿಗಳು ಅಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆ ಪಾಲ್ಗೊಂಡರು.
ಧಾರ್ಮಿಕ ಸಭೆ ಸುರುಳಿ
ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನ.26 ರಂದು ಧಾರ್ಮಿಕ ಸಭೆ ನಡೆಯಿತು. ಬ್ರಹ್ಮಶ್ರೀ ವೇಮೂ. ರವೀಶ್ ತಂತ್ರಿಯವರು ಧಾರ್ಮಿಕ ಪ್ರವಚನ ನೀಡಿ ಭಾರತದ ಪವಿತ್ರತೆಯನ್ನು ಎತ್ತಿಹಿಡಿಯುವ ಅಯೋಧ್ಯೆಯ ರಾಮಮಂದಿರದಲ್ಲಿ ಧರ್ಮಧ್ವಜ ಹಾರಿದ ಸುಸಂದರ್ಭ ಇದು ಬಹಳ ಒಳ್ಳೆಯ ದಿವಸವಾಗಿದೆ ಹಾಗೂ ಸುವರ್ಣಕ್ಷರದಲ್ಲಿ ಬರೆದಿಡಬೇಕಾದ ವಿಷಯವಾಗಿದೆ. ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಉತ್ಸವ ಬಹಳ ಪ್ರಿಯವಾದ ಉತ್ಸವವಾಗಿದೆ.
ಭಗವಂತನಿಗೆ ಸಮರ್ಪಣಾ ಭಾವದಿಂದ ಕೆಲಸ ಕಾರ್ಯಗಳನ್ನು ಮಾಡಬೇಕು. ಒಂದು ಊರಿನಲ್ಲಿ ಒಂದು ದೇವಸ್ಥಾನವಿದ್ದರೆ ದೇವರ ಅನುಗ್ರಹದಿಂದ ಊರೇ ಅಭಿವೃದ್ಧಿಗೊಳ್ಳುತ್ತದೆ ಎಂದು ತಿಳಿಸಿ ಖಾಯಂ ಟ್ರಸ್ಟಿಗಳಾದ ರಾಮಮೋಹನ ರೈ ಸುರುಳಿ ಯವರು ದೇವಸ್ಥಾನಕ್ಕೆ 1.14 ಎಕ್ರೆ ಜಾಗವನ್ನು ನೀಡಿರುವುಂತಾದ್ದು ಶ್ರೇಷ್ಠ ವಿಚಾರ ಮತ್ತು ಶ್ರೇಷ್ಠ ಸಂಸ್ಕಾರ ಎಂದು ತಿಳಿಸಿ, ನಮಗೆ ಧರ್ಮ ಅಧಾರ ಸ್ತಂಭವಿದ್ದಂತೆ ಧರ್ಮದ ರಕ್ಷಣೆಗೆ ನಾವು ಸದಾ ಸಿದ್ದರಾಗಿರಬೇಕೆಂದು ತಿಳಿಸಿದರು.
ದೇವಾಲಯ ಸಂವರ್ಧನಾ ಸಮಿತಿ ಮಂಗಳೂರು ಇದರ ವಿಭಾಗ ಪ್ರಮುಖರಾದ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ ದೇವರು ನಮಗೆ ಸಂಪತ್ತನ್ನು ನೀಡುತ್ತಾರೆ ಅದೇ ಸಂಪತ್ತನ್ನು ಭಗವಂತನಿಗೆ ಸಮರ್ಪಣೆ ಮಾಡುವುದು ಅತ್ಯಂತ ಶ್ರೇಷ್ಠ ಗುಣ. ನಾವೆಲ್ಲರೂ ಧಾರ್ಮಿಕ ಶಿಕ್ಷಣವನ್ನು ಪಡೆಯಬೇಕು ಇದೀಗಲೇ ಪುತ್ತೂರು ತಾಲೂಕಿನ ಆಯಾಯ ದೇವಸ್ಥಾನದ ವತಿಯಿಂದ ದೇವಾಲಯ ಸಂವರ್ಧನಾ ಸಮಿತಿಯ ಪಠ್ಯಕ್ರಮದ ಅಡಿಯಲ್ಲಿ ಇದೀಗಲೇ 3000 ಮಕ್ಕಳಿಗೆ ಹಿಂದೂ ಧಾರ್ಮಿಕ ಶಿಕ್ಷಣ ವನ್ನು ನೀಡಿದ್ದೇವೆ ಎಂದು ತಿಳಿಸಿ ನಾಗದೇವರು ಸುರುಳಿಯಾಕಾರದಲ್ಲಿ ಇರುವ ಕಾರಣ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಈ ಪರಿಸರವನ್ನು ಸುರುಳಿ ಎಂಬ ಹೇಸರು ಬಂದಿರಬಹುದು ಎಂದು ಉಲ್ಲೇಖಿಸಿದರು.
ಇದೇ ಸಂದರ್ಭದಲ್ಲಿ ದಾನಿ ಹಾಗೂ ಖ್ಯಾತ ಜ್ಯೋತಿಷ್ಯ ಶ್ರೀಧರ ಬಲ್ಯಾಯ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸುರುಳಿ ಶ್ರೀ ಬಾಲಸುಬ್ಯಹ್ಮಣ್ಯ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಕೃಷ್ಣಕುಮಾರ ಅತ್ರಿಜಾಲು ವಹಿಸಿ ಸಭಾಧ್ಯಕ್ಷತೆ ವಹಿಸಿ ಚೌತಿ, ಪಂಚಮಿ,ಷಷ್ಠಿ ಉತ್ಸವಕ್ಕೆ ಮತ್ತು ಅಭಿವೃದ್ಧಿ ಕೆಲಸಕಾರ್ಯಗಳಿಗೆ ಸಹಕರಿಸಿದ ಎಲ್ಲಾ ಭಕ್ತಾಧಿಗಳಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಖಾಯಂ ಟ್ರಸ್ಟಿಗಳಾದ ಯಂ.ರಾಮಮೋಹನ ರೈ ಸುರುಳಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಟ್ರಸ್ಟ್ ಉಪಾಧ್ಯಕ್ಷರಾದ ರಾಧಾಕೃಷ್ಣ ರೈ ಪರಾರಿಗುತ್ತು, ಕಾರ್ಯದರ್ಶಿ ಸತೀಶ್, ಸದಸ್ಯರಾದ ಬಾಬು ಮರುವಂತಿಲ,ನಿತ್ಯಪೂಜಾ ಸಮಿತಿ ಅಧ್ಯಕ್ಷರಾದ ಗಂಗಾಧರ ಪೂಜಾರಿ ಕಲ್ಲಡ್ಕ ಅತಿಥಿಗಳನ್ನು ಸ್ವಾಗತಿಸಿ, ಪೃಥ್ವಿ, ಧೃತಿ ಪ್ರಾರ್ಥಿಸಿ , ಸಾಂಸ್ಕೃತಿಕ ಕಲಾ ವೇದಿಕೆಯ ಸಂಚಾಲಕ ಪ್ರದೀಪ್ ರೈ ಮನವಳಿಕೆ ಸನ್ಮಾನಿತರ ಪಟ್ಟಿಯನ್ನು ವಾಚಿಸಿ, ಚಂದ್ರಹಾಸ ಕೆ.ಸಿ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟಿಗಳಾದ ಪೂವಪ್ಪ ನಾಯ್ಕ್ ಎಸ್ ಧನ್ಯವಾದ ಸಮರ್ಪಿಸಿದರು.









