ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್ ಕಾರ್ಯದರ್ಶಿಯಾಗಿ ಫಿಲೋಮಿನಾದ ಹಿರಿಯ ವಿದ್ಯಾರ್ಥಿ ವಂ|ಡಾ|ಪ್ರವೀಣ್ ಲಿಯೋ ಲಸ್ರಾದೊ

0

ಪುತ್ತೂರು: 1997-98ರಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದು, ಪ್ರಸ್ತುತ ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್ ಇದರ ನೂತನ ಕಾರ್ಯದರ್ಶಿಯಾಗಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ವಂ|ಡಾ|ಪ್ರವೀಣ್ ಲಿಯೋ ಲಸ್ರಾದೊರವರು ನೇಮಕಗೊಂಡಿದ್ದಾರೆ.


ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ ಈ ಆದೇಶ ಹೊರಡಿಸಿದ್ದು, ಈಗಾಗಲೇ ವಂ|ಪ್ರವೀಣ್ ಲಿಯೋ ಲಸ್ರಾದೋರವರು ಸೇವಾ ಹುದ್ದೆಯನ್ನು ಸ್ವೀಕರಿಸಿದ್ದಾರೆ. ಈ ಮೊದಲು ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್ ಇದರ ಕಾರ್ಯದರ್ಶಿಯಾಗಿ ಸೇವೆ ನೀಡುತ್ತಿದ್ದ ವಂ|ಆಂಟನಿ ಮೈಕಲ್ ಶೆರಾರವರನ್ನು ಮೂಲ್ಕಿ ಚರ್ಚ್‌ಗೆ ಪ್ರಧಾನ ಧರ್ಮಗುರುಗಳಾಗಿ ನೇಮಕಗೊಳಿಸಿ ವರ್ಗಾವಣೆಗೊಂಡಿದ್ದಾರೆ. ನೂತನವಾಗಿ ನೇಮಕಗೊಂಡ ವಂ|ಪ್ರವೀಣ್ ಲಿಯೋ ಲಸ್ರಾದೋರವರು ಬರಿಮಾರು ಫ್ರಾನ್ಸಿಸ್ ಲಸ್ರಾದೋ ಹಾಗೂ ಮೆರ್ಸಿನ್ ಲಸ್ರಾದೋ ದಂಪತಿ ಪುತ್ರರಾಗಿದ್ದು, 2005, ಏಪ್ರಿಲ್ 21ರಂದು ಗುರುದೀಕ್ಷೆಯನ್ನು ಪಡೆದುಕೊಂಡಿದ್ದರು. ಬಳಿಕ ಅವರು ಸಹಾಯಕ ಧರ್ಮಗುರುಗಳಾಗಿ ಬಿಜೈ ಚರ್ಚ್‌ನಲ್ಲಿ(2005-07), ಪಾಂಗ್ಲಾ ಚರ್ಚ್‌ನಲ್ಲಿ(2007-08), ರೋಮ್‌ನಲ್ಲಿ ನೈತಿಕ ದೇವಶಾಸ್ತ್ರದ ಬಗ್ಗೆ ಅಧ್ಯಯನ(2008-10), ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ಪ್ರೊಫೆಸರ್ ಆಗಿ(2010-15), ಆಡಳಿತಾಧಿಕಾರಿಯಾಗಿ(2019-22), ಗ್ಲ್ಯಾಡ್ಸಮ್ ಹೋಮ್‌ನಲ್ಲಿ ರೆಕ್ಟರ್, ನಿರ್ದೇಶಕರಾಗಿ(2022-24) ಸೇವೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here