ಪುತ್ತೂರು: ಮಲಂಕರ ಕ್ಯಾಥೋಲಿಕ್ ಅಸೋಸಿಯೇಷನ್ ಪುತ್ತೂರು ಧರ್ಮಪ್ರಾಂತ್ಯದ ನೇತೃತ್ವದಲ್ಲಿ ಗಣ್ಯರ ದಿನಾಚರಣೆ ನೇತೃತ್ವದಲ್ಲಿ ಗಣ್ಯರ ದಿನಾಚರಣೆ, ನವೀಕೃತ ಮನೆಗಳ ಆಶೀರ್ವಾದ ಮತ್ತು ಎಂಸಿಎ ಆಡಳಿತ ಸಮಿತಿಯ ಸಭೆಯು ಇತ್ತಿಚೆಗೆ ನಡೆಯಿತು.
ಸೈಂಟ್ ಮೇರಿಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ ವಿಮಲಗಿರಿಯಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಎಂಸಿಎ ಪುತ್ತೂರು ಧರ್ಮಪ್ರಾಂತ್ಯದ ಅಧ್ಯಕ್ಷ ಬೈಜು ಎಸ್.ಆರ್ ಧ್ವಜಾರೋಹಣ ನೆರವೇರಿಸಿದರು. ಕೋಶಾಧಿಕಾರಿ ಆಂಡ್ರ್ಯೂಸ್ ಜಾರ್ಜ್ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ವೆರಿ.ರೆ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಮುಖ್ಯ ಕಾರ್ಮಿಕತ್ವದಲ್ಲಿ ಪವಿತ್ರ ದಿವ್ಯಬಲಿಪೂಜೆ ನಡೆಯಿತು.
ಎಂಸಿಎ ದ.ಕ.ವಲಯದಿಂದ ಶಾಲಾ ಕಿಟ್ ವಿತರಣಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮತ್ತು ಎಂಸಿಎ ಪುತ್ತೂರು ಧರ್ಮಪ್ರಾಂತ್ಯದ ಆಡಳಿತ ಸಮಿತಿಯ ಸಭೆ ನಡೆಯಿತು. ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಸಂದೇಶವನ್ನು ನೀಡಿದರು. ಎಂಸಿಎ ಪುತ್ತೂರು ಧರ್ಮಪ್ರಾಂತ್ಯದ ಅಧ್ಯಕ್ಷ ಬೈಜು ಎಸ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ವಲಯದ ಎಂಸಿಎ ಅಧ್ಯಕ್ಷ ಸುಜಿತ್ ಪಿ.ಕೆ ಸುವಾರ್ತೆ ಓದುವಿಕೆಯನ್ನು ನೆರವೇರಿಸಿದರು.
ರಿಜಿ ಅಲೆಕ್ಸ್ಎಂ .ಸಿ.ಎ. ಪ್ರಾರ್ಥನೆ ನಡೆಸಿದರು. ಥಾಮಸ್ ಮ್ಯಾಥ್ಯೂ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಕೆ.ವೈ ಅವರು ವರದಿಯನ್ನು ವಾಚಿಸಿದರು.
ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ನ ಆಧ್ಯಾತ್ಮಿಕ ಸಲಹೆಗಾರ ರೆ.ಫಾ ಡಾ. ಎಲ್ದೋ ಪುತೆನ್ಕಂಡತ್ತಿಲ್ ಕೋರ್ ಎಪಿಸ್ಕೋಪೋ ಪರಿಚಯಾತ್ಮಕ ಭಾಷಣ ಮಾಡಿದರು. ರೆವ. ಫಾ. ಕೋಶಿ ಕಾಕ್ಕನಾಟ್ ಕೋರ್-ಎಪಿಸ್ಕೋಪೋ, ರೆ.ಫಾ. ವಿಜೋಯ್ ವರ್ಗೀಸ್ ಓಐಸಿ, ರೆ. ಫಾ. ಥಾಮಸ್ ಊನ್ನನ್ಪಾರಕ್ಕಲ್, ಪ್ರಿಯಾ ಥಾಮಸ್ ಅಭಿನಂದನಾ ಭಾಷಣ ಮಾಡಿದರು. ದಕ್ಷಿಣ ಕನ್ನಡ ವಲಯ, ಬೆಂಗಳೂರು ವಲಯ ಹಾಗೂ ಶಿವಮೊಗ್ಗ ವಲಯಗಳ ಪ್ರಾದೇಶಿಕ ಚಟುವಟಿಕೆಗಳ ವರದಿ ಪರಿಶೀಲನೆಯು ಈ ಸಮಯದಲ್ಲಿ ನಡೆಯಿತು.ಗೀನಾ ಜಾರ್ಜ್ ವಂದಿಸಿದರು.
ನವೀಕರಿಸಿದ ಮನೆಗಳ ಆಶೀರ್ವಾದ
ಎಂಸಿಯ ಪುತ್ತೂರು ಧರ್ಮಪ್ರಾಂತ್ಯದ ನೇತೃತ್ವದಲ್ಲಿ ದಕ್ಷಿಣ ಕನ್ನಡ ವಲಯದಲ್ಲಿ ಒಂದು ನೂತನ ಮನೆ ನಿರ್ಮಾಣ ಮತ್ತು ಐದು ಮನೆಗಳ ಪುನರ್ ನವೀಕರಣ ಕಾರ್ಯವು ನಡೆಯುತ್ತಿದ್ದು ಇದರ ಪೈಕಿ ಕಡಬದ ಕೋಡಿಂಬಾಳದಲ್ಲಿ ಮತ್ತು ಕಲ್ಲುಗುಡ್ಡೆಯಲ್ಲಿ ಪುನರ್ ನಿರ್ಮಾಣವಾದ ಮನೆಗಳ ಆಶೀರ್ವಾದ ಕಾರ್ಯವನ್ನು ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂ.ರೆ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ನೆರವೇರಿಸಿದರು. ಕೋಡಿಂಬಾಳದಲ್ಲಿ ಮನೆ ಕೆಲಸಕ್ಕೆ ಸಹಕರಿಸಿದ ಗುತ್ತಿಗೆದಾರ ಮತ್ತು ಸೀಮಾ ಕನ್ಸ್ಟ್ರಕ್ಷನ್‌ನ ಪುತ್ತುಮೇಸ್ತ್ರಿ, ಸಹದಾ ಇನ್ಫ್ರಾಸ್ಟ್ರಕ್ಚರ್‌ನ ಸನೀಶ್ ಬಿ.ಟಿ, ಕಡಬ ಪಂಚಾಯತ್ ಸಿಬ್ಬಂದಿ ಹರೀಶ್,ಸುನಿಲ್ ಟಿ.ಕೆ, ಸನಲ್ ಅವರನ್ನು ಬಿಷಪ್‌ರವರು ಅಭಿನಂದಿಸಿದರು ಪುತ್ತೂರು ಧರ್ಮಪ್ರಾಂತ್ಯದ ಮತ್ತು ದಕ್ಷಿಣ ಕನ್ನಡ ವಲಯದ ಮತ್ತು ಆಯಾ ಘಟಕಗಳ ಎಂಸಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.