ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ವಜ್ರಮಹೋತ್ಸವದ ಲಾಂಛನ ಬಿಡುಗಡೆ

0

ಮಂಗಳೂರು: ಕೊಟ್ಟಾರಚೌಕಿಯ ವಿಶ್ವಸೌಧದಲ್ಲಿ ಪ್ರಧಾನ ಕಛೇರಿ ಹೊಂದಿರುವಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವದ ಲಾಂಛನ ಅನಾವರಣ ಹಾಗೂ ಅಭಿನಂದನೆ ಕಾರ್ಯಕ್ರಮ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪಾಚಾರ್ಯಕಲ್ಯಾಣ ಮಂಟಪದಲ್ಲಿ ಮೇ.27ರಂದು ನಡೆಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಮನೋವೈದ್ಯರು ಹಾಗೂ ಸಾಹಿತಿಡಾ|| ಸಿ.ಆರ್.ಚಂದ್ರಶೇಖರ್‌ಲಾಂಛನ ಅನಾವರಣಗೊಳಿಸಿದರು.
ಇದಕ್ಕೂ ಮೊದಲು ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಒತ್ತಡ ನಿರ್ವಹಣೆ ವಿಷಯದ ಕುರಿತು ಸಂವಾದ ನಡೆಸಿದ ಅವರು, ಇಂದು ಅನಗತ್ಯ ಒತ್ತಡದ ಜತೆಗೆ ಜೀವಿಸುವ ಪರಿಸ್ಥಿತಿ ಎದುರಾಗಿದೆ.ಆಹಾರ ಪದ್ಧತಿ, ಒತ್ತಡದ ಜೀವನ ಶೈಲಿಯಿಂದಾಗಿ ವಿವಿಧ ಕಾಯಿಲೆಗಳು ಸುತ್ತಿಕೊಳ್ಳುತ್ತಿವೆ. ಹೃದಯಾಘಾತದ ಸಂಖ್ಯೆ ಶೇ.20ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಜನ ನೆಮ್ಮದಿ, ಸಮಾಧಾನವಿಲ್ಲದೆ ಬದುಕುತ್ತಿದ್ದಾರೆ. ಅನಗತ್ಯಚಿಂತೆ, ಹಿತ ಮಿತಆಹಾರ, ಶಿಸ್ತು ಬದ್ಧ ಜೀವನ ಶೈಲಿಯಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯರುಡಾ|| ಸಿ.ಆರ್.ಚಂದ್ರಶೇಖರ್‌ಅವರನ್ನು ಸನ್ಮಾನಿಸಲಾಯಿತು.
ಡಾ|| ಎಸ್.ಪಿ.ಗುರುದಾಸ್‌ಇವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಮನೋವೈದ್ಯರು ಹಾಗೂ ಸಾಹಿತಿ ಡಾ| ಸಿ.ಆರ್.ಚಂದ್ರಶೇಖರ್‌ರವರ ಕುರಿತು ಅಭಿನಂದನಾ ಮಾತುಗಳನ್ನಾಡಿದರು.
ಸಂವಾದ ಕಾರ್ಯಕ್ರಮದ ಸಮನ್ವಯ ಮತ್ತು ನಿರ್ವಹಣೆಯ ಬಗ್ಗೆ ಕಾರ್ಯಕ್ರವನ್ನು ರತ್ನಾವತಿ ಜೆ.ಬೈಕಾಡಿ ಹಾಗೂ ಭರತ್‌ ಜೆ.ಬೈಕಾಡಿಯವರು ನಿರ್ವಹಿಸಿದರು.

ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕರು ಯಜ್ಞೇಶ್ವರ, ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕದೇವಸ್ಥಾನದ ಆಡಳಿತಾಧಿಕಾರಿ ಉಮೇಶ್‌ ಆಚಾರ್ಯ, ಬೆಂಗಳೂರು ವಿರಾಟ್ ವಿಶ್ವಗ್ಲೋಬಲ್ ಫೌಂಡೇಶನ್‌ ಅಧ್ಯಕ್ಷ ಎಸ್. ಮಾಳಿಗಾಚಾರ್, ಬೆಂಗಳೂರಿನ ಲೆಕ್ಕಪರಿಶೋಧಕ ಹಾಗೂ ಕಾನೂನು ಸಲಹೆಗಾರಡಾ|| ಸಿ.ಎ. ನಾಗರಾಜ ಆಚಾರ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ನಿರ್ದೇಶಕ ವಿ.ಜಯಆಚಾರ್, ಕೆ. ಶಶಿಕಾಂತ ಆಚಾರ್ಯ, ಮಲ್ಲಪ್ಪಎನ್. ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ. ವಿ., ರಮೇಶ್‌ರಾವ್‌ಯು., ಕೆ.ಪ್ರಕಾಶಆಚಾರ್ಯ, ಮಂಜುನಾಥ ಆಚಾರ್ಯ ಮತ್ತು ಚಂದ್ರಶೇಖರ್‌ಎ.ಎಸ್.ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ವೈ.ವಿ.ವಿಶ್ವಜ್ಞಮೂರ್ತಿಯವರು ಪ್ರಾರ್ಥನೆಗೈದರು. ಉಪಾಧ್ಯಕ್ಷ ಎ. ಆನಂದಆಚಾರ್ಯರು ಸ್ವಾಗತಿಸಿ, ನಿರ್ದೇಶಕ ಕೆ.ಯಜ್ಞೇಶ್ವರ ಆಚಾರ್ಯರು ವಂದಿಸಿದರು. ಶ್ರೀಕಾಂತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here