ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 27ನೇ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಉಚಿತ ವೈದ್ಯಕೀಯ ಶಿಬಿರದ ಮೂಲಕ ಮನೆ ಮಾತಾಗಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರದ 27ನೇ ತಿಂಗಳ ಶಿಬಿರವು ಜೂ.2ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.


ಶಿಬಿರವನ್ನು ಆಯುರ್ವೇದ ತಜ್ಞ ವೈದ್ಯೆ ಡಾ.ಅನನ್ಯ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಆರೋಗ್ಯ ರಕ್ಷಾ ಸಮಿತಿಯ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಯಶಸ್ವಿಯಾಗಿ 26 ಶಿಬಿರ ನಡೆದಿದೆ. ದೇವಸ್ಥಾನದಲ್ಲಿ ಧಾರ್ಮಿಕ ಜೊತೆಗೆ ವೈದ್ಯಕೀಯ ಶಿಬಿರಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸಾಮಾಜಿಕವಾಗಿಯೂ ಹೊಸ ವ್ಯವಸೆಗೆ ನಾಂದಿಯಾಗಿದೆ. ಡಾ.ಸುರೇಶ್ ಪುತ್ತೂರಾಯರವರ ಕಲ್ಪನೆಯ ಶಿಬಿರಗಳು ಮಾದರಿಯಾಗಿದೆ. ಅವರ ಕಲ್ಪನೆಗಳಿಗೆ ಎಲ್ಲರ ಸಹಕಾರ ದೊರೆತಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ವಿವಿಧ ಸಂಘ ಸಂಸ್ಥೆಗಳು ಸಹಕಾರ ಹಾಗೂ ಸ್ವಯಂ ಸೇವಕರ ಶ್ರಮದ ಫಲವಾಗಿ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದೆ. ಹಲವು ಮಂದಿ ವೈದ್ಯರು ತಮ್ಮ ಸಮಯವನ್ನು ಶಿಬಿರಕ್ಕಾಗಿ ಮೀಸಲಿಡುತ್ತಿದ್ದಾರೆ. ಶಿಬಿರಕ್ಕೆ ಲ್ಯಾಬ್, ಔಷಧಿ ಕಂಪನಿಗಳು, ದಾನಿಗಳ ಆರ್ಥಿಕ ಸಹಕಾರ ಸೇರಿದಂತೆ ವಿವಿಧ ರೂಪದ ಸಹಕಾರಗಳು ದೊರೆತಿದೆ ಎಂದರು.
ಡೆಂಗ್ಯ ಜ್ವರಕ್ಕೆ ರಕ್ತ ಅವಶ್ಯಕವಾಗುತ್ತದೆ. ಕೆಲವು ಸಂದರ್ಭದಲ್ಲಿ ಬೇಕಾದಷ್ಟು ರಕ್ತ ಪುತ್ತೂರಿನಲ್ಲಿ ಲಭ್ಯವಿರುವುದಿಲ್ಲ. ರಕ್ತದ ಅಭಾವದಿಂದ ರೋಗಿಗಳನ್ನು ಮಂಗಳೂರಿಗೆ ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ಆರೋಗ್ಯ ರಕ್ಷಾ ಸಮಿತಿ ಮೂಲಕ ಪ್ರತ್ಯೇಕ ಗ್ರೂಪ್ ಮಾಡಲಾಗುವುದು. ರಕ್ತದಾನಕ್ಕೆ ಇಚ್ಚೆಯಿರುವವರು ಅದರಲ್ಲಿ ಸೇರಿಕೊಳ್ಳಬಹುದು. ರಕ್ತದ ಆವಶ್ಯಕತೆಯಿವ ಸಂದರ್ಭದಲ್ಲಿ ಗ್ರೂಪ್‌ನಲ್ಲಿ ಮಾಹಿತಿ ನೀಡುವಾಗ ಆವಶ್ಯಕತೆಯಿರುವವರಿಗೆ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ನೀವು ಕೈಜೋಡಿಸಬಹುದು ಎಂದು ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.
ಹೋಮಿಯೋಪತಿ ತಜ್ಞ ವೈದ್ಯ ಡಾ.ರಮೇಶ್, ಐಕ್ಯ ಕಲಾ ಸೇವಾ ಟ್ರಸ್ಟ್ ನ ಖಜಾಂಚಿ ದಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಲಕ್ಷ್ಮಿ ಶಗ್ರಿತ್ತಾಯ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿ, ನವಚೇತನಾ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು.

ತಜ್ಞ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಡಾ.ಸ್ವಾತಿ, ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ. ಸಚಿನ್ ಶಂಕರ್ ಹಾರಕೆರೆ, ಹೋಮಿಯೋಪತಿ ತಜ್ಞ ವೈದ್ಯ ಡಾ. ರಮೇಶ್ ಭಟ್, ಮಕ್ಕಳ ತಜ್ಞೆ ಡಾ. ಶ್ರೀದೇವಿ ವಿಕ್ರಂ, ಆಯುರ್ವೇದ ತಜ್ಞರಾದ ಡಾ. ಸಾಯಿಪ್ರಕಾಶ್, ಡಾ. ಅನನ್ಯ, ಡಾ. ದೀಪ್ತಿ ಆಗಮಿಸಿ ಶಿಬಿರದಲ್ಲಿ ತಪಾಸಣೆ ನಡೆಸಿದರು. ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಹೋಮಿಯೋಪತಿ ಚಿಕಿತ್ಸೆ, ಶ್ವಾಸಕೋಶ ತಪಾಸಣೆ, ಮಕ್ಕಳ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳ ವಿತರಿಸಲಾಯಿತು. ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಭಾಗವಹಿಸಿದರಿಗೆ ಊಟ, ಉಪಾಹಾರವನ್ನು ಒದಗಿಸಲಾಗಿತ್ತು.

ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ-ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ ಹಾಗೂ ಹಲವು ಔಷಧಿ ಕಂಪೆನಿಗಳು ಮತ್ತು ದೇವಳದ ಭಕ್ತರು ಶಿಬಿರದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here