ಹಿರೇಬಂಡಾಡಿ: ಡಿಪಾರ್ಟ್ಮೆಂಟ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ನಡೆಯುವ ರಾಜ್ಯಮಟ್ಟದ ಇನ್ಸ್ಪೈರ್ ಅವಾರ್ಡ್ ಮಾನಕ್ 2022-23ಕ್ಕೆ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಚನ್ ಎಂ. ಅವರು ಆಯ್ಕೆಯಾಗಿದ್ದಾರೆ.
ವಚನ್ ಅವರು ತಯಾರಿಸಿದ ’SMART PADDY GRAIN SEPARATING MACHINE’ಎಂಬ ಮಾದರಿಯು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕರಾದ ಮನೋಹರ ಮರಂಕಾಡಿಯವರು ಮಾರ್ಗದರ್ಶನ ನೀಡಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಧರ್ ಭಟ್ ಕೆ., ಮತ್ತು ಶಿಕ್ಷಕರು ಹಾಗೂ ಎಸ್ಡಿಎಂಸಿ ಸಮಿತಿಯವರು ಆಯ್ಕೆಯಾದ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.