ನೆಲ್ಯಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ-ಗೋಳಿತ್ತಟ್ಟು ಇಲ್ಲಿಯ 2024-25ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.
ಶಾಲಾ ನಾಯಕಿಯಾಗಿ ಚೈತ್ರಾ ಪಿ, ಉಪನಾಯಕನಾಗಿ ರಕ್ಷಿತ್ ಜಿ.ಪಿ. ಆಯ್ಕೆಗೊಂಡರು. ಶಿಸ್ತು ಮತ್ತು ಶಿಕ್ಷಣ ಮಂತ್ರಿಗಳಾಗಿ ನಿಧಿ ಮತ್ತು ದೃತಿ, ನೀರಾವರಿ ಮಂತ್ರಿಗಳಾಗಿ ಕೀರ್ತಿರಾಜ್, ಕೌಶಲ್ ಮತ್ತು ಶ್ರವಣ್, ಆರೋಗ್ಯಮಂತ್ರಿಗಳಾಗಿ ತೇಜಸ್ವಿ, ಪ್ರಾಪ್ತಿ ಮತ್ತು ತನಿಷ್ಕ, ವಾರ್ತಾಮಂತ್ರಿಗಳಾಗಿ ಗ್ರೀಷ್ಮಾ ಮತ್ತು ದೀಕ್ಷಾ, ಕ್ರೀಡಾಮಂತ್ರಿಗಳಾಗಿ ಕೌಶಲ್, ದಿವಿನ್ ಮತ್ತು ಸುಪ್ರಿತ್, ಸಾಂಸ್ಕೃತಿಕ ಮಂತ್ರಿಗಳಾಗಿ ಮನೀಷ್ ಮತ್ತು ನಿಧಿ, ಆಹಾರ ಮಂತ್ರಿಗಳಾಗಿ ಮಹಮ್ಮದ್ ಝಾಹಿದ್, ಪುಣ್ಯಶ್ರೀ ಮತ್ತು ಪ್ರೀತಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಶಾಲಾ ಶಿಕ್ಷಕ ಮಂಜುನಾಥ ಮಣಕವಾಡ ಕರ್ತವ್ಯ ನಿರ್ವಹಿಸಿದರು. ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ, ಸಹಶಿಕ್ಷಕರಾದ ಪ್ರಮೀಳಾ, ಸುನಂದ ಹಾಗೂ ಮೋಹಿನಿ ಸಹಕರಿಸಿದರು.