ಕೊಯಿಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಬಡಗನ್ನೂರು: ‘ಹಸಿರೇ ಉಸಿರು’ ಧ್ಯೇಯ ವಾಕ್ಯದೊಂದಿಗೆ ಸ.ಹಿ.ಪ್ರಾ ಶಾಲೆ ಕೊಯಿಲ ಬಡಗನ್ನೂರು ಇಲ್ಲಿ ವಿಶ್ವ ಪರಿಸರ ದಿನಾಚರಣೆ ಜೂ 5 ರಂದು ಆಚರಿಸಲಾಯಿತು.  ಗ್ರಾ. ಪಂ. ಉಪಾಧ್ಯಕ್ಷೆ  ಸುಶೀಲಾ ವಿ.ಪಿ  ಹಣ್ಣಿನ ಗಿಡ ನೆಡುವುದರ ಮೂಲಕ  ಚಾಲನೆ ನೀಡಿದರು.

ವಿದ್ಯಾರ್ಥಿಗಳು, ಶಿಕ್ಷಕರು,ಎಸ್ ಡಿ ಎಂ ಸಿ ಅಧ್ಯಕ್ಷರು ,ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಮಕ್ಕಳು ನೆಟ್ಟ ಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ ಕೊಡಲಾಯಿತು. ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ, ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಗಿಡಗಳನ್ನು  ನೆಟ್ಟು ಅವುಗಳನ್ನು ಪೋಷಿಸುವಂತೆ ತಿಳಿಸಿದರು.  ಸಹ ಶಿಕ್ಷಕ  ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕವೃಂದ ಮತ್ತು ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here