





ರಾಮಕುಂಜ: ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಪ್ರಯುಕ್ತ ನ.16ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನಪದ ಮೂಲಕುಣಿತ (ಚೆನ್ನು, ಕನ್ಯಾಪು, ಕಂಗೀಲು, ಕರಂಗೋಲು)ಸ್ಪರ್ಧೆಗಳು ನಡೆಯಲಿದೆ.


ಕಡಬ ತಾಲೂಕಿನಲ್ಲಿ ವಾಸ್ತವ್ಯ ಇರುವವರಿಗೆ ಮಾತ್ರ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಕುಣಿತದಲ್ಲಿ ಹಿಮ್ಮೇಳವನ್ನು ಸೇರಿಸಿ, ಗರಿಷ್ಟ 15 ಜನ ಮೀರಿರಬಾರದು. ಆದರೆ ಹಿಮ್ಮೇಳಕ್ಕೆ ಪ್ರಾಧಾನ್ಯತೆ ಇರುವುದಿಲ್ಲ. ಕ್ಯಾಸೆಟ್, ಪೆನ್ ಡ್ರೈವ್, ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಚೆನ್ನು, ಕನ್ಯಾಪು, ಕಂಗೀಲು, ಕರಂಗೋಲು ಸ್ಪರ್ಧೆಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳ ತಕ್ಕದ್ದು. ಸ್ಪರ್ಧೆಗಳು ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ನಡೆಯಲಿದೆ.





ಹಿಮ್ಮೇಳಕ್ಕೂ ಅದೇ ವಿಭಾಗದವರನ್ನು ಆಯ್ಕೆ ಮಾಡಿಕೊಳ್ಳುವುದು. ಉಡುಪು, ಪಕ್ಕವಾದ್ಯ, ವರ್ಣಾಲಂಕಾರ, ಹಾಡುಗಾರಿಕೆ ಸ್ಪರ್ಧಾಳುಗಳೇ ಒದಗಿಸಿ ಕೊಳ್ಳುವುದು. ಹೆಜ್ಜೆ, ಭಾವಾಭಿನಯ, ವೇಷಭೂಷಣ, ಕುಣಿತ, ಹೊಂದಾಣಿಕೆಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಸಮಯ 7 ನಿಮಿಷ (6+1) ಆಗಿರುತ್ತದೆ. ಭಾಗವಹಿಸಲು ಇಚ್ಛಿಸುವವರು ನ.12ರೊಳಗೆ ಸರಿತಾ ಜನಾರ್ದನ್ ರಾಮಕುಂಜ ಮೊ: 9008150843, ಕಿಶೋರ್ ಕುಮಾರ್ ಮೊ: 8191464142 ಹಾಗೂ ಪ್ರೇಮಾ ಬಿ. ಮೊ: 9980903545 ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.










